ಸರಗೂರು: ಜಯಲಕ್ಷೀಪುರ ಹಾಗೂ ಶಿವಪುರ ಕೆಲ ದಿನಗಳ ಹಿಂದೆ ಜಾನುವಾರು ಮತ್ತು ಮೇಕೆ ಗಳನ್ನು ಬಲಿ ಪಡೆದುಕೊಂಡು ಜಮೀನು ಅಕ್ಕಪಕ್ಕದ ಗ್ರಾಮಗಳ ರೈತರು ಹಾಗೂ ಜನರನ್ನು ಭಯಭೀತರಾಗಿ ಮಾಡಿ, ಶಿವಪುರ ನಾಗರಾಜ ಬೋವಿರವರ ಜಮೀನಿನಲ್ಲಿ ಅವಿತು ಕುಳಿತಿದ್ದ ನರಭಕ್ಷಕ ಹುಲಿ ಮತ್ತೆ ಕಾಣಿಸಿಕೊಂಡಿತ್ತು ಇದೀಗ ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ತಿಳಿಸಿದರು.
11 ರಿಂದ 12 ವರ್ಷದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಬಂಡೀಪುರ ರಾಷ್ಟ್ರೀಯ ಹೆಡಿಯಾಲ ವಲಯ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಸೆ.29 ರಂದು ಹುಲಿ ಮೇಕೆ ಹಸುಯನ್ನು ಕೊಂದು ತಿಂದಿತ್ತು. ವಿಷಯ ಮುಟ್ಟಿಸಿದ್ದ ಹಿನ್ನೆಲೆಯಲ್ಲಿ ಬಂದಿದ್ದ ಅರಣ್ಯ ಇಲಾಖೆಯವರು ಹುಲಿ ಸೆರೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ದಿಗ್ಬಂಧನ ವಿಧಿಸಿದ್ದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ–ವಿಭಾಗದ ವ್ಯಾಪ್ತಿಯ ಹೆಡಿಯಾಲ ವಲಯದ ಚಿಕ್ಕಬರಗಿ ಶಾಖೆಯ ಅಳಲಹಳ್ಳಿ ಗಸ್ತಿನ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಹುಲಿಯು ಅರಣ್ಯ ಪ್ರದೇಶದಿಂದ ಹೊರಬಂದು ಜನವಸತಿ ಪ್ರದೇಶಗಳಲ್ಲಿ ಮಂಗಳವಾರರಿಂದ ಬೀಡುಬಿಟ್ಟಿದ್ದು, ಜಾನುವಾರು ಹತ್ಯೆಗಳನ್ನು ನಿರತಂರವಾಗಿ ಮಾಡುತ್ತಲೇ ಇರುತ್ತದೆ, ಈ ಸಂಬಂಧ ಸಿಬ್ಬಂದಿಗಳ ತಂಡವನ್ನು ರಚಿಸಿ ನಿರತಂತವಾಗಿ ಕೂಂಬಿಂಗ್ ಕಾರ್ಯ ನಡೆಸಿದ್ದು 03 ಕಡೆ ಬೋನುಗಳನ್ನು ಇರಿಸಲಾಗಿತ್ತು. ಇದರ ಫಲವಾಗಿ ಭಾನುವಾರರಂದು ಬೆಳಿಗೆ, 8 ಗಂಟೆಯಲ್ಲಿ ಶಿವಪುರ ಮುಂಟಿಯ ಬಳಿ ಅಳವಡಿಸಲಾಗಿದ್ದ ಬೋನಿನಲ್ಲಿ ಹುಲಿಯು ಸೆರೆಯಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರವರ ಮಾರ್ಗದರ್ಶನದಲ್ಲಿ ಇಲಾಖಾ ಪಶುವೈಧ್ಯಾಧಿಕಾರಿ ವಸಿಂ ಮಿರ್ಜಾ ರವರ ನೇತೃತ್ವದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಹುಲಿಯನ್ನು ಸುರಕ್ಷಿತವಾಗಿ ಹಿಡಿಯಲಾಗಿದ್ದು, ಹುಲಿಯು ಹೆಣ್ಣಾಗಿದ್ದು, ಅಂದಾಜು 11 ರಿಂದ 12 ವಯಸ್ಸು ಆಗಿರಬಹುದೆಂದು ಅಂದಾಜಿಸಲಾಗಿರುತ್ತದೆ. ಹುಲಿಯ ಕಾಲು ಹಾಗೂ ಭುಜಗಳು ಗಾಯಗೊಂಡಿದ್ದು, ಹಲ್ಲು ಹಾಗೂ ದವಡೆಗಳು ಶಕ್ತಿಹೀನವಾಗಿರುವ ಬಗ್ಗೆ, ವೈಧ್ಯಾಧಿಕಾರಿಗಳು ತಿಳಿಸಿದ್ದು, ಚಿಕಿತ್ಸೆ ಹಾಗೂ ಶುಶ್ರೂಷೆಗಾಗಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮವಹಿಸಲಾಗಿರುತ್ತದೆ.
ಹುಲಿ ಸೆರೆ ಅನಿವಾರ್ಯ:
ಜಯಲಕ್ಷೀಪುರ, ಶಿವಪುರ, ಮೂಗತನಮೂಳೆ, ಕಾನಕನಹಳ್ಳಿ ಗ್ರಾಮಗಳ ಸುತ್ತಮುತ್ತಲೂ ಕಳೆದ ಒಂದು ವಾರದಿಂದ ಆಗಾಗ್ಗೆ ಹುಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಜಾನುವಾರು ಹಾಗೂ ಮೇಕೆ ಬಲಿ ತೆಗೆದುಕೊಳ್ಳುತ್ತಿತ್ತು. ರಾತ್ರಿ ವೇಳೆ ಜಮೀನುಗಳಿಗೆ ಹೋಗಲು ಭಯಪಡುವಂತಾಗಿದೆ. ಆದ್ದರಿಂದ ಹುಲಿ ಸೆರೆ ಅನಿವಾರ್ಯವಾಗಿದ್ದು, ಸೆರೆ ಸಿಕ್ಕುವ ತನಕ ಕೂಂಬಿಂಗ್ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮದ ರೈತ ಮುಖಂಡರು ಒತ್ತಾಯಿಸಿದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಒತ್ತಾಯದ ಮೇರೆಗೆ ಬೋನನ್ನು ಇಟ್ಟು ಹುಲಿಯನ್ನು ಹಿಡಿಯುವ ತನಕ ಅಕ್ಕಪಕ್ಕದ ಗ್ರಾಮಸ್ಥರು ಜಾಗವನ್ನು ಬಿಟ್ಟು ಕದಲಲಿಲ್ಲ.
ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ತಿರುಗಾಡುತ್ತಿರುವುದು ರೈತರಿಗೆ ತಿಳಿದಿತ್ತು. ಶನಿವಾರರಂದು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಶಿವಪುರ ಗ್ರಾಮಕ್ಕೆ ಸೇರಿದ ನಾಗರಾಜಬೊವಿ ಜಮೀನಿನಲ್ಲಿ ಹುಲಿ ಅಲ್ಲೇ ಇದೆ ಎಂದು ಬೋನು ಇಟ್ಟು ಬೋನಿನ ಒಳಗಡೆಗೆ ಮೇಕೆ ಮರಿಯನ್ನು ತಿಂದು. ಈ ದೃಶ್ಯವನ್ನು ರೈತರು ದೂರದಿಂದಲೇ ಸೆರೆ ಹಿಡಿದಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆಗೆ ಎಸಿಎಫ್ ಸತೀಶ್ ಚಾಲನೆ ನೀಡುವ ಜತೆಗೆ ಪಾಲ್ಗೊಳ್ಳುವ ಮೂಲಕ ಆರಂಭಗೊಂಡ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ನೌಕರರು ಪ್ರಮುಖ ಸ್ಥಳಗಳಲ್ಲಿ ಶೋಧ ನಡೆಸಿದರು.
ಈ ಸಂದರ್ಭಲ್ಲಿ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಪ್ರಭಾರಕರನ್ ಎಸ್., ಹೆಡಿಯಾಲ ಉಪ–ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎ.ವಿ ಹೆಡಿಯಾಲ ವಲಯದ ಅರಣ್ಯಾಧಿಕಾರಿ ಮುನಿರಾಜು ವಿ., ಉಪ ವಲಯ ಅರಣ್ಯಾಧಿಕಾರಿ ರಘುನಾಥ್ ದೇಗೌಡ, ಕಾರ್ತಿಕ್ ಎನ್. ನಾಯ್, ಸೋಮ ಕೆ., ಇಲಾಖಾ ಪಶುವೈದ್ಯಾಧಿಕಾರಿ ವಸಿಂ ಮಿರ್ಜಾ ಹಾಗೂ ಹೆಡಿಯಾಲ ವಲಯದ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC