ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಗ್ರಾಮದಲ್ಲಿ ಗುರುವಾರದಂದು ಹುಲಿ ದಾಳಿಗೆ ರೈತ ಗಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರದಂದು ಗ್ರಾಮದ ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ರೈತರು ಹಾಗೂ ಗ್ರಾಮಸ್ಥರು ಮತ್ತು ಅರಣ್ಯ ಅಧಿಕಾರಿಗಳು ಜೊತೆ ಸಭೆಯಲ್ಲಿ ರೈತರು, ಹುಲಿಯನ್ನು ಇನ್ನೂ ಎರಡು ದಿನಗಳಲ್ಲಿ ಹಿಡಿಯಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ನಮ್ಮ ಗ್ರಾಮದ ರೈತ ಹುಲಿ ಬಾಯಿಗೆ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನುಗು ಅರಣ್ಯದಲ್ಲಿ ಕಾಡು ಪ್ರಾಣಿಗಳು ದಿನನಿತ್ಯ ಬರುವುದರಿಂದ ನಾವುಗಳು ಬೆಳೆದ ಬೆಳೆ ಪಡೆಯಲು ಕಷ್ಟಪಡುವಂತಾಗಿದೆ. ಇವುಗಳು ಆನೆ ಮತ್ತು ಹುಲಿ, ಚಿರತೆ ಇನ್ನೂ ಪ್ರಾಣಿಗಳಿಂದ ಬೆಳೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಡಂಚಿನ ಭಾಗದ ಸರಿಯಾದ ರೀತಿಯಲ್ಲಿ ರೈಲು ಕಂಬಿಗಳು ಅಳವಡಿಸಿಲ್ಲ, ಆದ್ದರಿಂದ ಕಾಡು ಪ್ರಾಣಿಗಳು ನಮ್ಮ ಜಮೀನಿಗೆ ಬಂದು ಒಂದಲ್ಲ ಒಂದು ಸಮಸ್ಯೆ ನೀಡುತ್ತಿವೆ. ಇನ್ನೂ ಎರಡು ಮೂರು ದಿನಗಳಲ್ಲಿ ಹುಲಿ ಸೆರೆ ಹಿಡಿಯಲು ಮುಂದಾಗಿ, ಜಮೀನಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದೇವೆ. ಬಂದಿದ್ದ ಬೆಳೆ ಕೈಗೆ ಬಾರದಂತಾಗಿದೆ. ನಮ್ಮ ಜಮೀನುಗಳು ಕಾಡಂಚಿನ ಭಾಗದಲ್ಲಿ ಇವೆ, ಅಲ್ಲಿ ಹತ್ತಿ, ರಾಗಿ, ಜೋಳ ಇನ್ನೂ ಮುಂತಾದ ಬೆಳೆಯನ್ನು ರಕ್ಷಣೆ ಮಾಡಿ ತರುವ ಪರಿಸ್ಥಿತಿ ಇದೆ. ಜಮೀನಲ್ಲಿ ಬೆಳೆ ಕಟಾವು ಮಾಡಿ ಬರುವಷ್ಟರಲ್ಲಿ ಮಳೆ ಬಂದರೆ ಮಣ್ಣು ಪಾಲಾಗುವ ಸ್ಥಿತಿ. ಸಾಲ ಮಾಡಿ ಜಮೀನು ನಂಬಿಕೊಂಡು ನಾವುಗಳು ಜಮೀನಲ್ಲಿ ಬೆಳೆ ಮಾಡಿ ಅದನ್ನು ಮಾರಾಟ ಮಾಡಿ ಸಾಲ ತೀರಿಸಬೇಕು ಅದು ಕೂಡ ಸಾಧ್ಯವಿಲ್ಲ. ಅರಣ್ಯ ಇಲಾಖೆ ವತಿಯಿಂದ ನಷ್ಟವನ್ನು ಕಟ್ಟಿ ಕೊಡಬೇಕು ಎಂದು ರೈತರು ಎಚ್ಚರಿಸಿದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬಡಕುಟುಂಬದ ವ್ಯಕ್ತಿ ಹುಲಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವನ ಕುಟುಂಬದಲ್ಲಿ ಆಧಾರವಾಗಿ ಇದ್ದ ವ್ಯಕ್ತಿ ಇಂದು ಆಸ್ಪತ್ರೆಯಲ್ಲಿ ಇದ್ದಾರೆ. ಕುಟುಂಬ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ. ಆ ರೈತನ ಕುಟುಂಬದ ವ್ಯಕ್ತಿಗೆ ಕೆಲಸ ಹಾಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರಲ್ಲದೇ, ಈ ಭಾಗದಲ್ಲಿ 10 ರಿಂದ 15 ವರ್ಷದಿಂದ ನುಗು ಅರಣ್ಯದಿಂದ ಸಮಸ್ಯೆ ನೀಡುತ್ತಾ ಬಂದಿದ್ದಾರೆ. ಅದು ಇನ್ನೂ ಬಗೆಹರಿದಿಲ್ಲ. ಶೀಘ್ರದಲ್ಲೇ ಹೆಡಿಯಾಲ ಉಪ ವಲಯದ ನುಗು. ಹೆಡಿಯಾಲ, ಮೊಳೆಯೂರು, ಎನ್ ಬೇಗೂರು, ಓಂಕಾರ ವಲಯದ ಅಧಿಕಾರಿಗಳು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮಾಹಿತಿಯನ್ನು ನೀಡಿ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಸಭೆಯನ್ನು ಕರೆಯಬೇಕು ಹಾಗೂ ಪ್ರಚಾರವನ್ನು ನಿಮ್ಮ ಇಲಾಖೆಯಿಂದ ಮಾಡಬೇಕು ಎಂದು ತಿಳಿಸಿದರು.
ರೈತರ ಸಮಸ್ಯೆಗಳನ್ನು ತಿಳಿಸಿದ ನಂತರ ಸಿಸಿಎಫ್ ಪ್ರಭಾಕರನ್ ಮಾತನಾಡಿ, ಇನ್ನೂ ಬಡಗಲಪುರ ಗ್ರಾಮದಿಂದ ಹಾದನೂರು ಕ್ರಾಸ್ ವರಿಗೆ ರೈಲು ಕಂಬಿಗಳು ಅಳವಡಿಸಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮಟ್ಟದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಯುವ ಹಂತದಲ್ಲಿ ಇದೆ. ಬಂದ ಕೂಡಲೇ 4.50 ಕಿಲೋ ಮೀಟರ್ ಬಾಕಿ ಇದೆ ರೈಲು ಕಂಬಿಗಳು ಅಳವಡಿಸಲಾಗುವುದು. ಹುಲಿಯನ್ನು ಸೆರೆಹಿಡಿಯಲು ಮೂರು ತಂಡಗಳನ್ನು ರಚಿಸಲಾಗಿದೆ. ಸಾಕಾನೆಗಳನ್ನು ಮೂಲಕ ಹುಲಿಯನ್ನು ಹಿಡಿಯುವ ನಾಲ್ಕು ವಲಯದ ಸಿಬ್ಬಂದಿಗಳು ನೇಮಕ ಮಾಡಿ ಇನ್ನೂ ಒಂದು ವಾರದಲ್ಲಿ ಹುಲಿಯ ಚಲವನ ನೋಡಿ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಗ್ರಾಮಸ್ಥರಲ್ಲಿ ಒಂದು ಹುಲಿ ಹಿಡಿಯುವ ತನಕ ಜಮೀನು ಕಡೆಗೆ ಹೋಗಬೇಡಿ ನಾವುಗಳು ಹುಲಿ ಸೆರೆ ಹಿಡಿಯುವ ಸಮಯದಲ್ಲಿ ಯಾವುದೇ ಇತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಮ್ಮ ಮೂಲಕ ಮನವಿ ಮಾಡಿಕೊಂಡು, ಹುಲಿಯಿಂದ ಗಾಯಗೊಂಡ ಮಹದೇವ ಗೌಡನಿಗೆ ಅರಣ್ಯ ಇಲಾಖೆ ವತಿಯಿಂದ ಅವನ ಗುಣವಾಗುವವರೆಗೂ ಚಿಕಿತ್ಸೆ ಕೊಡಿಸಲು ಮುಂದಾಗುತ್ತವೆ. ಸರ್ಕಾರ ಮಟ್ಟದಲ್ಲಿ ಪರಿಹಾರವನ್ನು ಹಾಗೂ ಮಾಸಿಕ ಸಹಾಯಧನ ಹಾಗೂ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು. ಹುಲಿಯನ್ನು ಹಿಡಿಯಲು ರೈತರು ಸಹಕಾರ ನೀಡಬೇಕು ನಾವುಗಳು ನಿಮ್ಮ ಜೊತೆ ಇರುತ್ತೇವೆ ಎಂದರು.
ಹುಲಿ ಸೆರೆ ಹಿಡಿಯವ ಸಮಯದಲ್ಲಿ ಸಾಕಾನೆ ಜೊತೆಯಲ್ಲಿ ಇದ್ದವು. ಹುಲಿ ಮಹದೇವಗೌಡ ಮೇಲೆ ದಾಳಿ ಮಾಡಿದೆ ಎಂದು ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಆ ವ್ಯಕ್ತಿಯನ್ನು ಗ್ರಾಮಸ್ಥರ ಸಹಾಯದೊಂದಿಗೆ ಕರೆದುಕೊಂಡು ಬರುವ ಸಮಯದಲ್ಲಿ ನಾನು ನಮ್ಮ ವಾಹನವನ್ನು ನಮ್ಮ ಸಿಬ್ಬಂದಿಗಳಿಗೆ ಕರೆ ಮಾಡುವ ಸಮಯದಲ್ಲಿ ಅಲ್ಲಿ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿ ತಲೆ ಹಾಗೂ ಕೈಗೆ ದೊಣ್ಣೆಯಿಂದ ಹೊಡೆದು ಗಾಯ ಮಾಡಿದ್ದಾರೆ. ಅದರಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾನೆ ಅದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ.
— ವಿವೇಕ, ನುಗು ವಲಯದ ಅರಣ್ಯ ಅಧಿಕಾರಿ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಗ್ರಾಪಂ ಸದಸ್ಯರು ಗಂಗಾಧರ, ರಾಮಚಂದ್ರ, ಪಿಎಸ್ಐ ಕಿರಣ್, ಆರ್ಎಫ್ಓ ಅಮೃತ, ಮುನಿರಾಜು, ಮುಖಂಡರು ನಿಂಗಣ್ಣ, ರವಿ, ಅಶೋಕ್ ಕುಮಾರ್, ನಟರಾಜು, ಗಂಗಾಧರ, ಇನ್ನೂ ಮುಖಂಡರು ಸೇರಿದಂತೆ ಗ್ರಾಮಸ್ಥರು ಸಭೆಯಲ್ಲಿ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC