nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    ತಿಪಟೂರು: ಜೆಡಿಎಸ್ ಎಸ್‌ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ

    December 31, 2025

    ತುಮಕೂರು ಪ್ರಿಂಟಿಂಗ್ ಹಬ್ ಆಗಲಿ:  ಸಿ.ಸಿ.ಪಾವಟೆ

    December 31, 2025
    Facebook Twitter Instagram
    ಟ್ರೆಂಡಿಂಗ್
    • ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ
    • ತಿಪಟೂರು: ಜೆಡಿಎಸ್ ಎಸ್‌ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ
    • ತುಮಕೂರು ಪ್ರಿಂಟಿಂಗ್ ಹಬ್ ಆಗಲಿ:  ಸಿ.ಸಿ.ಪಾವಟೆ
    • ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ: ಡಾ.ಸಿದ್ಧರಾಮಣ್ಣ ಕೆ.
    • ಸರ್ಕಾರಗಳಿಂದ ರೈತರ ಸಂಘಟನೆಗಳ ದುರುಪಯೋಗ: ಹೆಚ್.ಎ.ಜಯರಾಮಯ್ಯ
    • ತುಮಕೂರು: ಕನ್ನಡ ಶಾಲೆಗಳ ಬಲವರ್ಧನೆಗೆ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳ ಅಂಗೀಕಾರ
    • ಅಶ್ಲೀಲ ವಿಡಿಯೋ ನೋಡಿ ಅದೇ ರೀತಿ ಮಾಡಲು ಪೀಡಿಸುತ್ತಿದ್ದ ‘ಸೈಕೋ’ ಪತಿ; ಪೊಲೀಸ್ ಮೆಟ್ಟಿಲೇರಿದ ಪತ್ನಿ!
    • ಬೆಂಗಳೂರು: ಬಯೋಕಾನ್ ಕಂಪನಿಯ 5ನೇ ಮಹಡಿಯಿಂದ ಬಿದ್ದು ಉದ್ಯೋಗಿ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಟೈಗರ್ ನಾಗ್ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ
    ಸ್ಪೆಷಲ್ ನ್ಯೂಸ್ February 7, 2024

    ಟೈಗರ್ ನಾಗ್ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ

    By adminFebruary 7, 2024No Comments3 Mins Read
    adavi

    ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ, ಆಂಧ್ರಪ್ರದೇಶದ ತಿರುಪತಿಯಲ್ಲಿ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ (ಐ ಎಫ್ ಎಂ. ಎ ) ಆಯೋಜಿಸಿದ್ದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ತಿರುಪತಿ ಇಲ್ಲಿ ಅತ್ಯುತ್ತಮ ಕಥೆ. ಅತ್ಯುತ್ತಮ ಗೀತರಚನೆ ಅತ್ಯುತ್ತಮ ಖಳನಟ ಹೀಗೆ ಮೂರು ವಿಭಾಗಗಳಲ್ಲಿ ಅಡವಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

    ಅಡವಿ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದ್ದು ಪರಿಸರ ರಕ್ಷಣೆ ಹಾಗೂ ಆದಿವಾಸಿಗಳ ಬದುಕಿನ ಮೂಲ ಭೂತ ಸಮಸ್ಯೆ ಹಾಗೂ ಸಂವಿಧಾನದ ಹರಿವು ಮೂಡಿಸುವುದರ ಬಗ್ಗೆ ದ್ವನಿ ಎತ್ತಿದ್ದು ಚಿತ್ರದ ಹಾಡುಗಳು ಹಾಗೂ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ 90 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಚಿತ್ರ ರಸಿಕರು. ಪರಿಸರ ಪ್ರೇಮಿಗಳು ಚಿಂತಕರು ಸಾಹಿತಿಗಳು ಪ್ರಗತಿಪರ ರನ್ನು ದಿನದಿಂದ ದಿನಕ್ಕೆ ಸೆಳೆಯುತ್ತಿದೆ.


    Provided by
    Provided by

    ಇದೀಗ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ಟೈಗರ್ ನಾಗ್ ಅವರು ಅಡವಿ ಕಾದಂಬರಿ ಬರೆದು ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರು ಆದ ಡಾ ಜಿ ಪರಮೇಶ್ವರ ಅವರಿಂದ ಬಿಡುಗಡೆ ಮಾಡಿಸಲಾಗಿತ್ತು.

    ತುಮಕೂರು ಜಿಲ್ಲೆಯಲ್ಲಿ ನೆಡೆಯುವ ಸಿನಿಮಾದ ಕಥೆಗೆ ಅತ್ಯುತ್ತಮ ಕಥೆಗಾರ ಎಂದು ಟೈಗರ್ ನಾಗ್ ಆಯ್ಕೆಯಾಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ ಕನ್ನಡ ಚಿತ್ರರಂಗದ ದಶಕಗಳಿಂದ ಇದ್ದ ಸಮಸ್ಯೆ ಸೆನ್ಸಾರ್ ಅಧಿಕಾರಿಯನ್ನು ಸಿಬಿಐ ಡ್ರಾಪ್ ಮಾಡಿಸಿ ಚಿತ್ರರಂಗದ ಮೆಚ್ಚುಗೆಗೆ ಪಾತ್ರರಾಗಿ ಎಲ್ಲರ ಗಮನ ಸೆಳೆದಿದ್ದ ಇವರು ಅಂತರಾಷ್ಟ್ರೀಯ ಪ್ರಶಸ್ತಿಗೆ ಭಜನರಾಗಿದ್ದಾರೆ.

    ಚಂದನವನದ ಖ್ಯಾತ ಹಿರಿಯ ಸಾಹಿತಿ ವಿ ಮನೋಹರ್ ಅವರು ಅಡವಿ ಚಿತ್ರಕಾಗಿ ಬರೆದ ಹಾಡಿಗೆ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿ ಮನೋಹರ ಅವರು ಚಂದನವನದಲ್ಲಿ ಈಗಾಗಲೇ 2500 ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು ಅವರಿಗೆ ಸಂದ ಈ ಪ್ರಶಸ್ತಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಸಂದ ಗೌರವವಾಗಿದೆ. ಉದಯೋನ್ಮುಖ ಪ್ರತಿಭೆ ಅರ್ಜುನ್ ಪಾಳೇಗಾರ ಅಡವಿ ಚಿತ್ರದಲ್ಲಿನ ತಮ್ಮ ನಟನೆಗಾಗಿ ಅತ್ಯುತ್ತಮ ಖಳ ನಟ ಪ್ರಶಸ್ತಿ ಪಡೆದಿದ್ದಾರೆ.

    ಪ್ರಸ್ತುತ ಹಾಗೂ ಮುಂಬರುವ ಹಲವಾರುಚಿತ್ರಗಳಲ್ಲಿ ವಿವಿಧ ಶೇಡ್ ಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರತಿ ಬಿಂಬಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಭರವಸೆಯ ನಟ ಅರ್ಜುನ್ ಪಾಳೆಗಾರ್ ಅವರಿಗೆ ಪ್ರಶಸ್ತಿ ಲಬಿಸಿರುವುದು ಚಂದನ ವನದ ಉದಯೋನ್ಮುಖ ಪ್ರತಿಭೆಗಳ ಮುಕುಟಕ್ಕೆ ಮೆರುಗು ನೀಡಿದಂತಾಗಿದೆ.

    ಆಂಧ್ರಪ್ರದೇಶದ ತಿರುಪತಿಯ ಮಾಹಿತಿ ಸಭಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಸಮಾರಂಭದಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅಡವಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಟೈಗರ್ ನಾಗ್ ಅಡವಿ ಚಿತ್ರಕ್ಕೆ ಲಭಿಸಿದ ಪ್ರಶಸ್ತಿಯನ್ನು ದೇಶದ ಹೆಮ್ಮೆಯ ಸಂವಿಧಾನಕ್ಕೆ, ಹಾಗೂ ಪರಮಪೂಜ್ಯ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅರ್ಪಿಸಿದ್ದೇನೆ, ಕಾರಣ ಶೂದ್ರನಾಗಿ ಮುಂದೆ ಮಡಿಕೆ ಹಿಂದೆ ಪೊರಕೆ ಕಟ್ಟಿಕೊಂಡು ಸುತ್ತಬೇಕಿದ್ದವನಿಗೆ, ಇಂದು ಸಂವಿಧಾನದ ಶಕ್ತಿಯಿಂದ ಎಲ್ಲರಂತೆ ಸಮಾನತೆಯಿಂದ ಬದುಕಲು ಅವಕಾಶ ಸಿಕ್ಕಿದೆ, ಈ ಅವಕಾಶದಿಂದ ನಾನು ನಿರ್ದೇಶಕ, ನಿರ್ಮಾಪಕ ಕೂಡ ಆಗಿದ್ದೇನೆ, ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಕನಕದಾಸರು ಪೆರಿಯಾರ್ ಹಾಗೂ ಸಮಾನತೆಗಾಗಿ ಧ್ವನಿ ಎತ್ತಿದ ಎಲ್ಲಾ ಮಹನೀಯರ ಅನುಯಾಯಿ ಗಳೆಲ್ಲರ ಸಹಕಾರ ಬೆಂಬಲ ಮಾರ್ಗದರ್ಶನದಿಂದ ನಮ್ಮ ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆ ಹಾಗೂ ಮಧುಗಿರಿ ಸಾಧಿಕ್ ಸಾಬ್ ನಿರ್ಮಾಣದ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ, ನಮ್ಮೆಲ್ಲಾ ಮುಂದಿನ ಪ್ರಯತ್ನಗಳಿಗೆ ನಿಮ್ಮ ಸಹಕಾರ ಹೀಗೇ ಇರಲಿ ಎಂದರು.

    ಚಿರದಲ್ಲಿ ನಾಯಕ ಮೋಹನ್ ಮೌರ್ಯ, ನಟಿ ಶಿಲ್ಪ, ನಟಿ ಆರುಂದತಿ ಲಾಲ್, ರಾಮ ನಾಯಕ್ ಟೈಗರ್ ನಾಗ್, ಅರ್ಜುನ್ ಪಾಳೇಗಾರ, ರವಿಕುಮಾರ ಸನ, ರಥಾವರ ದೇವು, ಮಂಜೀವ, ವೃಶ್ಚಿಕ. ಚಿರು ಶ್ರೀ ನಾಗ್ ಶಿಲ್ಪ ಟೈಗರ್ ನಾಗ್,ಹರಾ ಮಹಿಷಾ ಬೌದ್ಧ̧, ಜಗದೀಶ್ ಮಹದೇವ್. ವಾಲೆ ಚಂದ್ರಣ್ಣ, ಆರ್ ಅನಂತರಾಜು, ಮತ್ತಿತರರು ನಟಿಸಿದ್ದಾರೆ
    ವಿಪಿಂದ್ ವಿ ರಾಜ್ ಛಾಯಾಗ್ರಹಣ, ಮಂಜು ಮಹಾದೇವ್ ಸಂಗೀತ, ಕೆ. ಮಂಜು ಕೋಟೇಕೆರೆ ಹಾಗೂ ಟೈಗರ್ ನಾಗ್ ಸಂಭಾಷಣೆ, ಸಂಜೀವ್ ರೆಡ್ಡಿ ಸಂಕಲನ.  ಕೆ. ಮಂಜು ಕೋಟೆಕೆರೆ ಸಹನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನ, ಎ. ವಿ. ವಿಜಯಕುಮಾರ್ ನಿರ್ಮಾಣ ನಿರ್ವಹಣೆ, ಎ ಆರ್ ಸಾಯಿರಾಂ ಕ್ರಿಯೇಟಿವ್ ಹೆಡ್, ಸಾಧಿಕ್ ಸಾಬ್ ಮಧುಗಿರಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರ ಶೀಘ್ರ ದಲ್ಲೇ ತೆರೆ ಕಾಣಲಿದೆ.

    admin
    • Website

    Related Posts

    ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

    October 10, 2025

    ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ!

    August 8, 2025

    ಅವಳ ತುಟಿ ಮಷಿನ್‌ ಗನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಸೌಂದರ್ಯ ಹೊಗಳಿದ ಟ್ರಂಪ್!

    August 4, 2025

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಮಧುಗಿರಿಯ ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ:  ಜ.18ರಂದು ಹೊಸ ವರ್ಷದ ಮೊದಲ ಅಮಾವಾಸ್ಯೆ ವಿಶೇಷ ದರ್ಶನ

    December 31, 2025

    ಹರಿಹರೇಶ್ವರ ತತ್ತ್ವವೇ ಇಂದಿನ ಸಮಾಜಕ್ಕೆ ಅಗತ್ಯ ಮಧುಗಿರಿಯಿಂದ ಕೇಳಿಬರುವ ಏಕತೆಯ ಮೌನ ಸಂದೇಶ ಧರ್ಮವು ಮಾನವನನ್ನು ಒಗ್ಗೂಡಿಸಬೇಕಾದ ಶಕ್ತಿಯಾಗಬೇಕಾದರೆ, ಅದು…

    ತಿಪಟೂರು: ಜೆಡಿಎಸ್ ಎಸ್‌ಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಜನವರಿ 31ರಂದು ಬೃಹತ್ ಉದ್ಯೋಗ ಮೇಳ

    December 31, 2025

    ತುಮಕೂರು ಪ್ರಿಂಟಿಂಗ್ ಹಬ್ ಆಗಲಿ:  ಸಿ.ಸಿ.ಪಾವಟೆ

    December 31, 2025

    ತುಮಕೂರು ಜಿಲ್ಲೆಯಲ್ಲಿ 46 ಸಾವಿರ ಮಂದಿ ವಿಕಲಚೇತನರಿದ್ದಾರೆ: ಡಾ.ಸಿದ್ಧರಾಮಣ್ಣ ಕೆ.

    December 31, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.