nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆಯಾಗಬಹುದು: ಕೆ.ಎನ್.ರಾಜಣ್ಣ

    October 29, 2025

    ಹುಲಿ ಕಾರ್ಯಾಚರಣೆ: ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ

    October 29, 2025

    ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಡಾ.ಕೆ.ನಾಗಣ್ಣ

    October 28, 2025
    Facebook Twitter Instagram
    ಟ್ರೆಂಡಿಂಗ್
    • ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆಯಾಗಬಹುದು: ಕೆ.ಎನ್.ರಾಜಣ್ಣ
    • ಹುಲಿ ಕಾರ್ಯಾಚರಣೆ: ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ
    • ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಡಾ.ಕೆ.ನಾಗಣ್ಣ
    • ಕನ್ನಡ ನಾಮಫಲಕ ಕಡ್ಡಾಯ: ಅಂಗಡಿ ಮಾಲಿಕರಿಗೆ ತಹಶೀಲ್ದಾರ್ ಸೂಚನೆ
    • ಒನಕೆ ಓಬವ್ವ ಜಯಂತಿ: ಸಾಧಕರ ಸನ್ಮಾನಕ್ಕಾಗಿ ಅರ್ಜಿ ಆಹ್ವಾನ
    • ನ.4ರಂದು ಜಿ.ಪಂ. ಕೆಡಿಪಿ ಸಭೆ
    • ಅ.29ರಂದು ಡಾ.ಚಂದ್ರಶೇಖರ ಪಾಟೀಲರ ಗೋಕರ್ಣದ ಗೌಡಶಾನಿ ರಂಗ ಪ್ರಯೋಗ
    • ವನ್ಯಜೀವಿ–ಮಾನವ ಸಂಘರ್ಷ ನಿರ್ವಹಣಾ ಕಾರ್ಯಪಡೆ ರಚನೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹುಲಿ ಕಾರ್ಯಾಚರಣೆ: ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ
    ಜಿಲ್ಲಾ ಸುದ್ದಿ October 29, 2025

    ಹುಲಿ ಕಾರ್ಯಾಚರಣೆ: ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ

    By adminOctober 29, 2025No Comments2 Mins Read
    tiger

    ಸರಗೂರು: ತಾಲೂಕಿನ ಮುಳ್ಳೂರು ಸಮೀಪದ ಬೆಣ್ಣೆಗೆರೆಯ ರಾಜಶೇಖರ್ ಎಂಬವರನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆಯೇ ಮುಳ್ಳೂರಿನಿಂದ ಸುಮಾರು 10 ಕಿ.ಮೀ. ದೂರದ ಹೀರೇಗೌಡನಹುಂಡಿ ಸಮೀಪ ಜಮೀನಿನಲ್ಲಿ ಹುಲಿಯೊಂದು ಪತ್ತೆಯಾಗಿದ್ದು, ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

    ರಾಜಶೇಖರ್ ಅವರನ್ನು ಬಲಿ ಪಡೆದಿದ್ದ ಹುಲಿಯ ಸೆರೆಗೆ ಮಂಗಳವಾರವೂ ರೋಹಿತಾ, ಭೀಮಾ, ಮಹೇಂದ್ರ ಸಾಕಾನೆಗಳ ಮೂಲಕ ಬಂಡೀಪುರ ಅರಣ್ಯ ವ್ಯಾಪ್ತಿಯ ನುಗು, ಕಲ್ಕರೆ, ಯಡಿಯಾಲ ಉಪ ವಿಭಾಗದ ಸುಮಾರು 130ಕ್ಕೂ ಅಧಿಕ ಸಿಬ್ಬಂದಿ ಕೂಂಬಿಂಗ್ ಆರಂಭಿಸಿ ಹಂತಕ ಹುಲಿಗಾಗಿ ತೀವ್ರಶೋಧ ನಡೆಸುತ್ತಿರುವಾಗಲೇ, ಬೆಳಗ್ಗೆ ಸುಮಾರು 11 ಗಂಟೆಗೆ ವೇಳೆಗೆ ಸಮೀಪದ ಹೀರೇಗೌಡನ ಹುಂಡಿ ಬಳಿ ಸತೀಶ್ ಎಂಬವರ ಜಮೀನಿನಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯ ರೈತರು ನೀಡಿದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಾಕಾನೆಗಳನ್ನು ಸ್ಥಳಕ್ಕೆ ಕರೆತಂದ ಅರಣ್ಯ ಇಲಾಖೆ ಹುಲಿಗಾಗಿ ಶೋಧ ಆರಂಭಿಸಿದೆ. ಬಳಿಕ ಹುಲಿ ಚಲನವಲನಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿಯು ಸಂಜೆ ಸುಮಾರು 6 ಗಂಟೆ ವೇಳೆ ಹುಲಿಯು ಸಮೀಪದ ಹನುಮಂತನಗರ ಎಂಬಲ್ಲಿ ಪತ್ತೆಯಾಗಿರುವ ಖಚಿತ ಮಾಹಿತಿ ಮಾಹಿತಿ ಮೇರೆಗೆ ಸಾಕಾನೆ ಮೂಲಕ ತೆರಳಿದ ಡಾ.ರಮೇಶ್ ಹಾಗೂ ಡಾ.ವಸೀಂ ಮಿರ್ಜಾ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಸೆರೆಯಾದ ಹುಲಿ ಭಾನುವಾರ ರೈತನ ಮೇಲೆ ದಾಳಿ ಮಾಡಿ ಬಲಿ ಪಡೆದ ಹುಲಿಯೋ ಅಥವಾ ಇದು ಬೇರೆ ಹುಲಿಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


    Provided by
    Provided by
    Provided by

    ಸದ್ಯ ಸೆರೆಯಾಗಿರುವ ಹುಲಿ ಸುಮಾರು 6 ವರ್ಷದ ಹೆಣ್ಣು ಹುಲಿಯಾಗಿದ್ದು, ಹುಲಿಯು ಯಾವುದೇ ಗಾಯವಿಲ್ಲದೆ ಆರೋಗ್ಯಕರವಾಗಿದೆ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ.

    ಸ್ಥಳಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಭೇಟಿ:

    ಇದೇ ವೇಳೆ ಮಂಗಳವಾರ ಬೆಳಗ್ಗೆ ಮುಳ್ಳೂರಿಗೆ ಭೇಟಿ ನೀಡಿದ ನಂಜನಗೂಡು ಶಾಸಕ ದರ್ಶನ್ ಧ್ರುವ ನಾರಾಯಣ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತನ ಮೇಲೆ ಹುಲಿ ದಾಳಿಯಾಗಿರುವ ದುಃಖಕರ ವಿಚಾರ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು, ಸ್ಥಳೀಯರು ಅದಕ್ಕೆ ಸಹಕಾರ ನೀಡಬೇಕು. ಯಾರೂ ಆತಂಕಕ್ಕೊಳಗಾಗುವುದು ಬೇಡ. ಮಾನವ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು. ದಾಳಿಗೊಳಗಾದ ರೈತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

    ಹುಲಿಗಾಗಿ ಕಾದು ಕುಳಿತ ಜನ:

    ಇನ್ನು ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಜನರನ್ನು ನಿಭಾಯಿಸುವ ಜತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಬೇಕಾದ ಅನಿರ್ವಾತೆ ಎದುರಾಯಿತು. ಅರಣ್ಯ ಇಲಾಖೆಗೆ ಸರಗೂರು ಠಾಣಾ ಪೊಲೀಸರು ಸಹಕಾರ ನೀಡಿದರು.

    ಜಮೀನಿನಲ್ಲಿ ಓಡುವ ದೃಶ್ಯ ಸೆರೆ:

    ಇನ್ನು ಹುಲಿ ಹಿಡಿಯಲು ಸಾಕಾನೆಗಳ ಮೂಲಕ ಬರುವಾಗ ಪೊದೆಯಲ್ಲಿ ಅವಿತಿದ್ದ ಹುಲಿ ಸಾಕಾನೆಗಳನ್ನು ಕಂಡು ಗಾಬರಿಗೊಂಡು ಬಾಳೆ ತೋಟವೊಂದಕ್ಕೆ ಓಡುವ ದೃಶ್ಯ ಸೆರೆಯಾಗಿತ್ತು. ಕೂಂಬಿಂಗ್ ನೋಡಲು ಬಂದು ಮರವೇರಿ ಕುಳಿತಿದ್ದ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಡಿಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಆರ್ ಎಫ್ ಒಗಳಾದ ವಿವೇಕ್, ಮುನಿರಾಜು, ರಾಜೇಶ್ ಹಾಜರಿದ್ದರು.

    ಸುಳ್ಳು ಸಂದೇಶ ರವಾನೆ:

    ಇದ್ದಕ್ಕಿದಂತೆ ಮಂಗಳವಾರ ಮೂರು ಹುಲಿಗಳು ಮಲಗಿರುವ ಬ್ಲಾಕ್ ಅಂಡ್ ವೈಟ್  ಡ್ರೋನ್ ನಲ್ಲಿ ಸೆರೆಯಾದ ಚಿತ್ರ ಹಾಗೂ ನೀರಿನಲ್ಲಿ ತಾಯಿ ಮತ್ತು ಎರಡು ಮರಿಗಳು ಕುಳಿತಿರುವ ಹುಲಿಯ ಚಿತ್ರವೊಂದು ಮುಳ್ಳೂರಿನಲ್ಲಿ ರೈತನನ್ನ ಬಲಿ ಪಡೆದ ಹುಲಿ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಬಳಿಕ ಈ ವಿಚಾರ ಅರಣ್ಯ ಇಲಾಖೆಯ ಗಮನಕ್ಕೆ ಬಂದು ಇದು ನುಗು ವಲಯಕ್ಕೆ ಸಂಬಂಧಿಸಿದ ಚಿತ್ರವಲ್ಲ ಎಂದು ಇಲಾಖೆ ಖಚಿತ ಪಡಿಸಿದೆ.

    ಸಾರ್ವಜನಿಕರು ಯಾವುದೇ ಸುಳ್ಳು ಮಾಹಿತಿಗೆ ಕಿವಿಕೊಡದೆ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು ಹೆಡಿಯಾಲ ಉಪ ವಿಭಾಗದ ಎಸಿಎಫ್ ಡಿ.ಪರಮೇಶ್ ಮನವಿ ಮಾಡಿದ್ದಾರೆ.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕನ್ನಡ ನಾಮಫಲಕ ಕಡ್ಡಾಯ: ಅಂಗಡಿ ಮಾಲಿಕರಿಗೆ ತಹಶೀಲ್ದಾರ್ ಸೂಚನೆ

    October 28, 2025

    ಬಸ್ ಗಳ ಕೊರತೆ: ಬಸ್ ನ ಫುಟ್ ಬೋರ್ಡ್ ನೇತಾಡುತ್ತಾ ಪ್ರಯಾಣಿಸುತ್ತಿರುವ ಶಾಲಾ ವಿದ್ಯಾರ್ಥಿಗಳು

    October 28, 2025

    ಸೋಯಾಬಿನ್ ಬಣವೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ಸೋಯಾ ನಾಶ

    October 27, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆಯಾಗಬಹುದು: ಕೆ.ಎನ್.ರಾಜಣ್ಣ

    October 29, 2025

    ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಆರಂಭದಲ್ಲೇ ‘ನವೆಂಬರ್ ಕ್ರಾಂತಿ’ ಎಂದು…

    ಹುಲಿ ಕಾರ್ಯಾಚರಣೆ: ಮುಳ್ಳೂರು ಸಮೀಪದ ಹೀರೇಗೌಡನಹುಂಡಿಯಲ್ಲಿ ಹುಲಿ ಸೆರೆ

    October 29, 2025

    ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ: ಡಾ.ಕೆ.ನಾಗಣ್ಣ

    October 28, 2025

    ಕನ್ನಡ ನಾಮಫಲಕ ಕಡ್ಡಾಯ: ಅಂಗಡಿ ಮಾಲಿಕರಿಗೆ ತಹಶೀಲ್ದಾರ್ ಸೂಚನೆ

    October 28, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.