ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಟಿಕೇಟ್ ಗುದ್ದಾಟ ಶುರುವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿಯು ಟಿಕೇಟ್ ಕದನ ಶುರುವಾಗಿದ್ದು ಬೆಳಗಾವಿಯಲ್ಲಿ ಟಿಕೆಟ್‍ಗಾಗಿ ಸಿದ್ದರಾಮಯ್ಯ ಮುಂದೆ ಗಲಾಟೆಯು ನಡೆದಿದೆ .
ಇದೆಲ್ಲವನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಿಕೆಟ್ ಸಿಗದ ನಿಷ್ಠಾವಂತ ಅಭ್ಯರ್ಥಿಗಳಿಗೆ ಬೇರೆ ಸ್ಥಾನಮಾನಗಳನ್ನು ಕೊಡುತ್ತೇವೆ ಎಂದು ಹೇಳುವುದರ ಮೂಲಕ ಆಕಾಂಕ್ಷಿಗಳನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.
ಟಿಕೆಟ್ ಸಿಗದ ನಿಷ್ಠಾವಂತರಿಗೆ ವಿಧಾನ ಪರಿಷತ್ ಸ್ಥಾನ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುತ್ತೇವೆ. ನಮ್ಮ ಪಕ್ಷದಲ್ಲಿ ಎಲ್ಲಾ ಕಡೆ ಆಕಾಂಕ್ಷಿಗಳು ಇದ್ದಾರೆ. 1,200 ಜನ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ. ಟಿಕೆಟ್ ಕೇಳೋದ್ರಲ್ಲಿ ತಪ್ಪೇನೂ ಇಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಾರ್ಟಿ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


