ತಿಪಟೂರು: ನಗರದ ಸತ್ಯ ಗಣಪತಿ ಆಸ್ಥಾನ ಮಂಟಪದ ಆವರಣದಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭ ನಡೆಯಿತು. ಈ ವೇಳೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮೊಬೈಲ್ ಬ್ಯಾಂಕಿಂಗ್ ಸೇವೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಹಕಾರಿ ಸಂಘಗಳು ಎಲ್ಲಾ ವರ್ಗದ ಜನರಿಗೂ ಸೇವೆ ನೀಡುತ್ತಾ ಬಂದಿದೆ, ಒಂದು ಬ್ಯಾಂಕ್ ಮಾಡಿದ ತಪ್ಪಿಗೆ ಬೇರೆ ಬ್ಯಾಂಕುಗಳಿಗೆ ಕೆಟ್ಟ ಹೆಸರು ಬರಬಾರದು ಎಂದು ಸೋಮಶೇಖರ್ ತಿಳಿಸಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳು ಸಹಕಾರಿಯಾಗಿದೆ ಎಂದರು.
ಬ್ಯಾಂಕ್ ನ ಅಧ್ಯಕ್ಷ ಬಾಗೇಪಲ್ಲಿ ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಸಮಾಜ ಸೇವೆಯನ್ನು ಗುರುತಿಸಿ ನಿವೃತ್ತ ಎಸಿಪಿ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.
ನಗರಸಭೆಯ ಅಧ್ಯಕ್ಷರಾದ ರಾಮ್ ಮೋಹನ್, ಬ್ಯಾಂಕ್ ನ ಉಪಾಧ್ಯಕ್ಷ ಬಿ.ಎಸ್.ನಾಗೇಂದ್ರ ಗುಪ್ತ, ಸಿ.ಎಸ್. ಹರಿ , ಬಾಬು, ಶಿವಶಂಕರ್, ಬ್ಯಾಂಕ್ ನ ಸಿಇಒ ಟಿಪಿ ಚಂದನ್ ಹಾಗೂ ಬ್ಯಾಂಕ್ ನ ಶೇರುದಾರರು ಸಿಬ್ಬಂದಿಯವರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz