ತಿಪಟೂರು: ನಗರಸಭೆಯಲ್ಲಿ ಲಂಚದ ಹಾವಳಿ ತಾಂಡವಾಡುತ್ತಿದ್ದು, ಕುಂದು ಕೊರತೆಗೆ ಹೇಳಲು ಬರುವ ಜನಸಾಮಾನ್ಯರಿಗೆ ಆಯುಕ್ತಕರಾಗಲಿ, ಅಧ್ಯಕ್ಷರಾಗಲಿ ಕೈಗೆ ಸಿಗುತ್ತಿಲ್ಲ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಸುರಿದ ಬಾರಿ ಮಳೆಯಿಂದ ನಗರದ ಪ್ರಮುಖ ಜಾಗದಲ್ಲಿ ಜಲಾವೃತಗೊಂಡು ಜನರು ತಿರುಗಾಡಲು ಪರಿತಪಿಸಿದರೂ ಯು.ಜಿ.ಡಿ. ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ತಾಲೂಕಿನ ಆಡಳಿತ ಸತ್ತು ಹೋಗಿದೆ, ಇತ್ತ ಪೊಲೀಸ್ ಇಲಾಖೆ ನೋಡಿದರೆ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಗಪಡಿಸಿದರು.
ಪ್ರತಿದಿನ ಸರಣಿ ಕಳ್ಳತನಗಳು, ಶಾಲಾ-ಕಾಲೇಜುಗಳು ಪ್ರಮುಖ ನಗರದ ರೋಡ್ ರೋಮಿಯೋಗಳ ಕಾಟ ಜಾಸ್ತಿಯಾಗಿದ್ದು, ಇದಕ್ಕೆಲ್ಲ ಪೊಲೀಸ್ ಇಲಾಖೆ ನಿರ್ಲಕ್ಷ ಕಾರಣವಾಗಿದೆ. ತಾಲೂಕಿನ ಸಚಿವರಿಗಿಂತ ಆತನ ಪಿಎ ಮುರಳಿ ಎಂಬ ಸಹಾಯಕ ಎಲ್ಲಾ ಆಡಳಿತವನ್ನು ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಈತನಿಗೂ ಈ ತಾಲೂಕಿಗೆ ಯಾವುದೇ ಸಂಬಂಧವಿಲ್ಲ. ಬಗರು ಹುಕುಂ ಜಮೀನು ವಿಚಾರದಲ್ಲಿ ಸಚಿವರ ಹಿಂಬಾಲಕರಿಗೆ ಹಾಗೂ ಶ್ರೀಮಂತರಿಗೆ ಭೂಮಿ ದೊರೆಯುತ್ತಿದೆ. ಸಚಿವರು ಕೆರೆಗಳಿಗೆ ಬಾಗಿನ ಅರ್ಪಿಸುತ್ತಾರೆ. ಇದನ್ನು ಬಿಟ್ಟರೆ ಬೇರೆ ತಿಪಟೂರು ನಗರದಲ್ಲಿ ಏನೂ ಕೆಲಸಗಳು ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ಭಾರತೀಯ ಮಂಜುನಾಥ್, ಯಮುನಾ ಸಾತ್ವಳ್ಳಿ ಶಿವಕುಮಾರ, ಓ.ಮಂಜು, ಗಂಗಾಧರ್, ದಶರಥ್ ಹಾಗೂ ಅನೇಕ ಹೋರಾಟ ಸಮಿತಿಯ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy