ತಿಪಟೂರು: ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12 ರಂದು ಅಖಿಲ ಭಾರತ ಮುಷ್ಕರ ಹಾಗೂ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಲಾಗಿದ್ದು, ತಿಪಟೂರಿನಲ್ಲಿ ಅದನ್ನು ಯಶಸ್ವಿಗೊಳಿಸಲು ಕಾರ್ಮಿಕ ಹಾಗೂ ರೈತ ಸಂಘಟನೆಗಳ ಒಕ್ಕೂಟ ಪ್ರದರ್ಶನದ ನಡೆದ ಜಂಟಿ ಸಮಾವೇಶ ನಗರದ ಖಾಸಗಿ ಸಭಾಂಗಣದಲ್ಲಿ ನಡೆಸಲಾಯಿತು.
ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ಮಾತನಾಡಿ, ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ನಾಶ ಮಾಡಲು ಹೊರಟಿದ್ದು ಕೃಷಿ ಕೂಲಿಕಾರರ ಕೈಯಿಂದ ಕೆಲಸ ಕಿತ್ತುಕೊಳ್ಳುತ್ತಿದೆ. ಕಟಾವಿನ ಮಹತ್ತರ ಸಮಯದಲ್ಲಿ ಕೆಲಸ ಇಲ್ಲ ಎಂಬುದು, ತಮ್ಮ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳಲು, ರೈತರು ಕನಿಷ್ಠ ಬದುಕು ಬದುಕಲಿದ್ದ ನರೇಗಾ ಯೋಜನೆಯನ್ನು ಮಣ್ಣು ಪಾಲು ಮಾಡುತ್ತಿರುವ ಸರ್ಕಾರಗಳ ನೀತಿಗಳ ವಿರುದ್ಧ ಫೆಬ್ರವರಿ 12ರ ಹೋರಾಟವನ್ನು ನಾವು ನೀವುಗಳೆಲ್ಲರೂ ಯಶಸ್ವಿ ಮಾಡಬೇಕಿದೆ ಎಂದರು.
ಸಭೆಯಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ, ಎಐಕೆಎಂಎಸ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಸ್.ಎನ್.ಸ್ವಾಮಿ, ರೈತ ಸಂಘದ ದೇವರಾಜು ತಿಮ್ಮಾಪುರ, ಶ್ರೀಕಾಂತ್ ಕೆಳಹಟ್ಟಿ, ಟಿ.ಬಿ.ಜಯಾನಂದಯ್ಯ, ಅಂಗನವಾಡಿ ನೌಕರರ ತಾಲೂಕು ಅಧ್ಯಕ್ಷೆ ಅನಸೂಯ, ಸೌಹಾರ್ದ ಸಂಘಟನೆಯ ಅಲ್ಲಾಬಕಾಶ್, ಬೋವಿ ಸಮಾಜದ ಮುಖಂಡ ಶಶಿಧರ್, ಮುಸ್ಲಿಂ ಮುಖಂಡ ಶಫಿವುಲ್ಲಾ ಶರೀಫ್ ಮಾತನಾಡಿದರು.
ವೇದಿಕೆಯಲ್ಲಿ ಬಗರ್ ಹುಕುಂ ಹೋರಾಟ ಸಮಿತಿಯ ಅಧ್ಯಕ್ಷ ಮಲ್ಲಿಕಣ್ಣ, ಪ್ರಾಂತ ರೈತ ಸಂಘದ ರಾಜಮ್ಮ, ಕೋಟೇಶ್, ಅಂಗನವಾಡಿ ನೌಕರರ ಸಂಘದ ಗಾಯತ್ರಿ, ಮಮತಾ, ಶಿವಮ್ಮ, ಮುಸ್ಲಿಂ ಮುಖಂಡ ಹಾಗೂ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸಮೀವುಲ್ಲಾ, ನಿವೃತ್ತ ಉಪನ್ಯಾಸಕ ಅಯಾಜ್, ಕಾರ್ಮಿಕ ಸಂಘದ ಪ್ರಕಾಶ್, ರಮೇಶ್, ಪ್ರಗತಿಪರ ಹಾಗೂ ರೈತಪರ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


