ತಿರುಚಿರಾಪಳ್ಳಿ-ಶ್ರೀ ಗಂಗಾನಗರ ಹಮ್ಸಫರ್ ಎಕ್ಸ್’ಪ್ರೆಸ್ ರೈಲಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಗುಜರಾತ್ ನ ವಲ್ಸಾದ್ ರೈಲು ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯದಲ್ಲೇ ಈ ಅವಘಡ ಸಂಭವಿಸಿದೆ.
ನೆನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸೂರತ್ ನಿಂದ ತಿರುಚಿರಾಪಳ್ಳಿ-ಶ್ರೀ ಗಂಗಾನಗರ ಹಮ್’ಸಫರ್ ಎಕ್ಸ್’ಪ್ರೆಸ್ ನ ಎರಡು ಎಸಿ ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಪವರ್ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡು ಪಕ್ಕದ ಬಿ1 ಕೋಚ್ ಗೂ ವ್ಯಾಪಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕರಂರಾಜ್ ವಘೇಲಾ ಹೇಳುತ್ತಾರೆ.
ಬೋಗಿಯಿಂದ ಹೊಗೆ ಏರುತ್ತಿರುವುದನ್ನು ಕಂಡ ತಕ್ಷಣ ರೈಲು ನಿಲ್ಲಿಸಿ ಪ್ರಯಾಣಿಕರೆಲ್ಲರೂ ಇಳಿದರು. ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಅಪಘಾತದ ಹಿಂದೆ ಶಾರ್ಟ್ ಸರ್ಕ್ಯೂಟ್ ಇರಬಹುದೆಂದು ಶಂಕಿಸಲಾಗಿದೆ. ಇದೀಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


