ಕೊರಟಗೆರೆ: ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ರವರು ಇಂದು ಮಧ್ಯಾಹ್ನ 2 ಗಂಟೆಗೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜಂಪೇನಹಳ್ಳಿ ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆಯ ಸುಮಾರು 6 ಕೋಟಿ ರೂ ವೆಚ್ಚದ ರಸ್ತೆಯ ಗುದ್ದಲಿ ಪೂಜೆಯನ್ನು ನೆರವೇರಿಸಲಿದ್ದಾರೆ.
ಶ್ರೀನಿವಾಸಪುರದಿಂದ ಜಂಪೇನಹಳ್ಳಿವರೆಗೆ ಅಭಿವೃದ್ದಿ ಪಡಿಸುವ ಈ ರಸ್ತೆಯು 2.23 ಕಿ.ಮೀ. ಉದ್ದ, 7 ಮೀಟರ್ ಅಗಲ ಇದ್ದು 4 ಕಲ್ವರ್ಟ್ಗಳನ್ನು ಹೊಂದಿದೆ, ಇದೇ ಇಲಾಖೆ ಇಂದ ರಾಹುತನಹಳ್ಳಿ ಮುಖಾಂತರ ಕೋಳಾಲ – ಊರ್ಡಿಗೆರೆ ಸರ್ಕಲ್ ವರೆಗೆ 11.50 ಕೋಟಿ ಗಳಲ್ಲಿ ರಸ್ತೆ ಅಭಿವೃದ್ದಿಯಾಗುತ್ತಿದ್ದು, 4.35 ಕಿ.ಮೀ ಉದ್ದ, 7.00 ಮೀಟರ್ ಅಗಲ, 4.00 ಕಲ್ವರ್ಟ್ಗಳನ್ನು ಹೊಂದಿದೆ. ಈಗಾಗಲೇ ಈ ರಸ್ತೆಯ ಅಭಿವೃದ್ದಿಗೆ ಮುಖ್ಯಮಂತ್ರಿಗಳು ತುಮಕೂರಿನಲ್ಲಿ ಚಾಲನೆ ನೀಡಿದ್ದಾರೆ.
ಇಂದು ರಥಸಪ್ತಮಿ ದಿನವಾಗಿದ್ದು ಇಂದು ನಡೆಯುವ ಪ್ರಸಿದ್ದ ಕ್ಯಾಮೇನಹಳ್ಳಿಯ ಆಂಜನೇಯ ಸ್ವಾಮಿಯ ರಥೋತ್ಸವ ಹಾಗೂ ಕುರಂಕೋಟೆಯ ದೊಡ್ಡಕಾಯಪ್ಪ ಸ್ವಾಮಿಯ ಜಾತ್ರೆಗೆ ಗೃಹ ಸಚಿವರು ಆಗಮಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್ ಪತ್ರಿಕೆ ಹೇಳಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx