nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026
    Facebook Twitter Instagram
    ಟ್ರೆಂಡಿಂಗ್
    • ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
    • ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು
    • ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ
    • ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ
    • ತಿಪಟೂರಿನ ಟೈಮ್ ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ: ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ರಶ್ಮಿಗೆ 1 ಲಕ್ಷ ರೂ. ಬಹುಮಾನ ಘೋಷಣೆ
    • ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
    • ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ
    • ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ಕಥೆಯ ಶೀರ್ಷಿಕೆ: ಅದೃಷ್ಟ ಒಲಿದು ಬಂದಾಗ
    ಲೇಖನ August 24, 2024

    ಈ ದಿನದ ಕಥೆಯ ಶೀರ್ಷಿಕೆ: ಅದೃಷ್ಟ ಒಲಿದು ಬಂದಾಗ

    By adminAugust 24, 2024No Comments3 Mins Read
    venugopal

    ಬಹಳ ಹಿಂದೆ ಸೂರ್ಯಕೇತು ಎಂಬ ವ್ಯಕ್ತಿಯಿದ್ದ. ಇವನು ತುಂಬಾ ಬಡವ ಮತ್ತು ಮಹಾನ್ ದೈವಭಕ್ತ. ದೇವರ ಧ್ಯಾನಕ್ಕೆ ಕುಳಿತು ಬಹಳ ಹೊತ್ತು ಧ್ಯಾನ ಮಾಡಿ ನಂತರ ಸಿಕ್ಕ ಕೆಲಸ ಮಾಡಿಕೊಂಡು ಬಂದ ಹಣದಿಂದ ಜೀವನ ನಡೆಸುತ್ತಿದ್ದ.

    ಒಂದು ದಿನ ಅವನಿಗೆ ತಾನೂ ಕೂಡ ಶ್ರೀಮಂತನಾಗಬೇಕು ಎಂದು ಆಸೆ ಪಟ್ಟ ಅದಕ್ಕಾಗಿ ಯೋಚಿಸಿದ ದೇವರಲ್ಲಿ ಬೇಡಿದರೆ ತಾನೆ ದೇವರು ನಮಗೆ ಬೇಡಿದ್ದು ನೀಡುವುದು ನಾವು ಏನನ್ನೂ ಕೇಳಿಕೊಳ್ಳದಿದ್ದರೆ ನಮ್ಮ ಮೊರೆ ಅವನಿಗೆ ಹೇಗೆ ತಿಳಿಯುತ್ತದೆ ಎಂದು ಕೊಂಡು ಅಂದು ಬೆಳಗ್ಗೆ ಬೇಗ ಎದ್ದವನು ಬೇಗ ಸ್ನಾನ ಮುಗಿಸಿ ಧ್ಯಾನ ಮಾಡುತ್ತಾ ಅಮ್ಮಾ ದೇವಿ ಇಂದು ನನಗೆ ನಿಧಿ ಸಿಗುವಂತೆ ಮಾಡು ಎಂದು ಕೇಳಿಕೊಂಡು ಅಂದು ಕೆಲಸ ಹುಡುಕಿಕೊಂಡು ಹೊರಟ, ಅವನ ಮುಗ್ದ ಬೇಡಿಕೆಗೆ ಮನ ಸೋನ ದೇವಿ ತನ್ನ ಸೇವಕರಾದ ಭವ ಮತ್ತು ವಿಭ ಎಂಬುವರನ್ನು ಕಳುಹಿಸಿ ಸೂರ್ಯ ಕೇತುವಿಗೆ ನಿಧಿ ಸಿಗುವಂತೆ ಮಾಡಿಬನ್ನಿ ಎಂದು ಕಳುಹಿಸಿದಾಗ ಭವನು ಸೂರ್ಯಕೇತು ಬರವು ಜಾಗದಲ್ಲಿ ಒಂದು ನಿಧಿಯ ಗಂಟು ಇಟ್ಟು ಅಲ್ಲಿಂದ ಅದೃಶ್ಯನಾದನು.


    Provided by
    Provided by

    ಸೂರ್ಯಕೇತು ಮುಂದೆ ಬಂದವನು ನಿಧಿಯ ಗಂಟು ನೋಡಿ ಅದನ್ನು ಕೈಯಲ್ಲಿ ಹಿಡಿದು ಅರೆ ನಿಧಿಯ ಗಂಟು ಯಾರದರೂ ಬೀಳಿಸಿಕೊಂಡು ಹೋಗಿರಬಹುದೇ ಎಂದು ಕೊಂಡು ಸುತ್ತ ಮುತ್ತ ನೋಡಿದಾಗ ಅಲ್ಲೊಬ್ಬರು ವರ್ತಕರು ನಿಂತಿರುವುದನ್ನು ನೋಡಿ ಅವನಿಗೆ ಸ್ವಾಮಿ ಈ ನಿಧಿಯ ಗಂಟು ನಿಮ್ಮದೇ ಎಂದಾಗ ತಾನಾಗಿಯೇ ತನ್ನ ಕೈಗೆ ಬಂದ ನಿಧಿಯ ಗಂಟನ್ನು ನೋಡಿ ವರ್ತಕ ಹೌದು ಇದು ನನ್ನದೇ ಇದನ್ನೇ ಹುಡುಕುತಿದ್ದೆ ಎಂದು ಹೇಳುತ್ತಾ ಅದನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋದನು.

    ಎರಡನೆಯ ದಿನ ಧ್ಯಾನ ಮುಗಿಸಿ ಇಂದಾದರೂ ನಿಧಿ ಗಂಟು ಸಿಗುವಂತೆ ಮಾಡು ಎಂದು ಪ್ರಾರ್ಥಿಸುತ್ತಾ ಕೆಲಸ ಹುಡುಕಲು ಹೊರಟ. ಅಂದು ಕೂಡ ಮಾತೆಯ ಆಜ್ಞೆಯಂತೆ ಭವ ದಾರಿಯಲ್ಲಿ ಒಂದು ನಿಧಿ ಗಂಟನ್ನು ಇಟ್ಟು ಮಾಯವಾದನು. ಅದನ್ನು ನೋಡಿದ ಸೂರ್ಯಕೇತು ಓ ಇದು ಕೂಡ ನಿಧಿಯ ಗಂಟು ಎಂದು ಗುರುತಿಸಿ ಇನ್ನೇನು ಕೈಗೆ ತೆಗೆದುಕೊಳ್ಳವೇಕು ಅನ್ನುವಷ್ಟರಲ್ಲಿ ಅಲ್ಲಿಗೆ ರಾಜಭಟರಿಬ್ಬರು ಬರುತ್ತಿರುವುದನ್ನು ನೋಡಿ ಓಹೋ ಇದು ಅವರದ್ದಾಗಿಬಹುದು ನಾನು ಇದನ್ನು ಮುಟ್ಟಿದರೆ ನನನ್ನು ಕಳ್ಳ ಎಂದುಕೊಳ್ಳುತ್ತಾರೆ ಎಂದುಕೊಂಡು ಅಲ್ಲಿಂದ ಸರಸರನೆ ಮುಂದೆ ನಡೆದ.

    ಮತ್ತ ಮಾರನೆಯ ದಿನ ಮಾತೆಯ ಪ್ರಾರ್ಥನೆ ಮುಗಿಸಿ ಇಂದಾದರೂ ನಿಧಿಗಂಟು ಕರುಣಿಸು ಎಂದುಕೊಳ್ಳುತ್ತಾ ಬರುವಾಗ ಮತ್ತೆ ಮಾತೆ ಆಜ್ಞಾನುಸಾರ ಭವ ಮತ್ತೊಂದು ನಿಧಿ ಗಂಟು ಇಟ್ಟು ಮಾಯವಾದ . ಅದನ್ನು ಕೈಗೆ ತೆಗೆದುಕೊಂಡ ಸೂರ್ಯಕೇತು ಓಹೋ ಇದು ಕೂಡ ನಿಧಿಯಗಂಟು ಇದು ಮಾತೆ ನನಗಾಗಿ ಕರುಣಿಸಿರಬಹುದೇ ಎಂದು ಯೋಚಿಸುತ್ತಾ ಮುಂದೆ ನಡೆದು ಬರುತ್ತಿರುವಾಗ ಮಾತೆದೇವಿಯ ಉತ್ಸವ ಬರುತ್ತಿರುವುದನ್ನು ನೋಡಿ ಓಹೋ ಮಾತೆ ನನನ್ನು ಪರೀಕ್ಷಿಸಲು ಹೀಗೆ ಮಾಡಿರಬಹುದು, ಇದು ಮಾತೆಯ ನಿಧಿ, ನಾನು ತೆಗೆದುಕೊಳ್ಳುವುದು ಉಚಿತವಲ್ಲ ಇದನ್ನು ಮಾತೆಗೇ ಅರ್ಪಿಸುತ್ತೇನೆ ಎಂದು ಮಾತೆಯ ಹುಂಡಿಯಲ್ಲಿ ನಿಧಿಯ ಗಂಟನ್ನು ಹಾಕಿ, ದೇವಿಮಾತೆ ನಾನು ಕೃತಾರ್ಥನಾದೆ ನಿನ್ನ ದಯೆಯಿಂದ, ನೋಡು ನೀನು ಒಡ್ಡಿದ್ದ ಪರೀಕ್ಷೆಯಲ್ಲಿ ನಾನು ಗೆದ್ದಿದ್ದೇನೆ ಎಂದು ಬೀಗುತ್ತಾ ಎಂದು ಕೈಮುಗಿದು ಅಲ್ಲಿಂದ ಹೊರಟು ಹೋದನು.

    ಈಬಾರಿ ಭವ ವಿಭರು ಮಾತೆಯಲ್ಲಿ ಅಮ್ಮಾ ಈ ಬಾರಿ ನಿಧಿಯ ಗಂಟು ಇಟ್ಟು ಬರೋಣವೇ ಎಂದಾಗ ಮಾತೆಯು  ಏನೂ ಬೇಡ ಆತನ ಕೋರಿಕೆ ಈಡೇರಿಸಲು ನಾನು 3 ಬಾರಿ ಅದೃಷ್ಟ ಕೊಟ್ಟಿದ್ದೆ ಮೊದಲನೇ ಬಾರಿ ತನಗೆ ನಿಧಿಯ ಮೂಲಕ ಸಿಕ್ಕಿದ್ದ ಅದೃಷ್ಟವನ್ನು ಮೂರ್ಖತನದಿಂದ ತಾನೇ ಹೋಗಿ ತನ್ನ ಕೈಯಾರ ವರ್ತಕನಿಗೆ ಕೊಟ್ಟ, ಎರಡನೇ ಬಾರಿ ಅದು ರಾಜಭಟರದ್ದು ಆಗಿರಬಹುದೆಂದು ಎಂದು ಕಲ್ಪಿಸಿಕೊಂಡು ಒಂದು ಕ್ಷಣ ನಿಂತು ಸತ್ಯ ನೋಡದೇ ಅದನ್ನು ಅಲ್ಲಿಯೇ ಬಿಟ್ಟು ಹೋದ, ಮೂರನೇ ಬಾರಿ ನಾನು ಕೊಟ್ಟ ನಿಧಿಯನ್ನು ನನಗೇ ಹಿಂದುರುಗಿಸಿದ, ಇವೆಲ್ಲವೂ ಕೆಲವು ವ್ಯಕ್ತಿಗಳ ಮಾನಸಿಕ ಕಲ್ಪನೆಯ ವಿಕಲ್ಪವಾಗಿರುತ್ತದೆ. ಅವರಿಗೆ ಅದೃಷ್ಟಬಂದಾಗಲೆಲ್ಲಾ ಅದನ್ನು ಹೇಗೆ ತನ್ನ ಕೈವಶ ಮಾಡಿಕೊಳ್ಳಬೇಕು ಎಂಬುದರ ತಿಳಿ ಸತ್ಯ ಕೂಡ ತಿಳಿದಿರುವುದಿಲ್ಲ. ಕೈಗೆ ಸಿಕ್ಕ ಅದೃಷ್ಟ ಕೈತಪ್ಪಿ ಹೋದ ನಂತರ ಅವರ ಅರಿವಿಗೆ ಬರುತ್ತದೆ ಇದು ನನ್ನದೇ ತಪ್ಪು ಎಂದು, ಇದು ಕೂಡ ಹಾಗೆಯೆ ಎಂದಾಗ ಭವ – ವಿಭರು ಮಾತೆಗೆ ಕೈಮುಗಿದು ಲೀನರಾದರು.

    ನೀತಿ: ದೇವರು ಕೊಟ್ಟು ನೋಡುತ್ತಾನೆ, ಆದರೆ ಅದನ್ನು ಪಡೆದುಕೊಳ್ಳುವ ಯೋಗ ನಮ್ಮ ಹಣೆಯಲ್ಲಿ ಬರೆದಿರಬೇಕು.

    ರಚನೆ: ವೇಣುಗೋಪಾಲ್


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!

    April 6, 2026

    ಭೀಮನಿಗೆ ಹುಚ್ಚು ನಾಯಿ ಕಡಿಯಿತು | ಹಾಸ್ಯ ಡ್ರಾಮ: ಅರಳಿ ಕಟ್ಟೆ ಮಿತ್ರರು. (ಪ್ರಸಂಗ 3)

    April 6, 2026

    ನಡೆಯುವ ದೇವರು, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು

    April 1, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ನವದೆಹಲಿ: ಭಾರತದಲ್ಲಿ ಸಮಾನತೆಯನ್ನು ಹೋಗಲಾಡಿಸಿ, ಸಂವಿಧಾನವನ್ನು ನಾಶಪಡಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್…

    ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ: ಚಲನಚಿತ್ರ ನಟ ಹರೀಶ್ ಸ್ಥಳದಲ್ಲೇ ಸಾವು

    April 12, 2026

    ಬೆಳಗಾವಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ; ಸಿನಿಮೀಯ ಮಾದರಿಯಲ್ಲಿ ಕೊಲೆ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.