ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL) ಟ್ರೋಪಿ ಎತ್ತಿಹಿಡಿದ ಸಂಭ್ರಮವನ್ನು ಬೆಂಗಳೂರಿನಲ್ಲಿ ನಿನ್ನೆ ಆಚರಿಸಲಾಗಿದ್ದು, ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಕಾಲ್ತುಳಿತದಿಂದಾಗಿ 11 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ ಹೀಗಿದೆ:
ಭೂಮಿಕ್, 20 ವರ್ಷ (ನೆಲಮಂಗಲ)
ಸಹನ 19 ವರ್ಷ (ಕೋಲಾರ)
ಪೂರ್ಣಚಂದ, 32 ವರ್ಷ (ಮಂಡ್ಯ)
ಚಿನ್ಮಯಿ, 19 ವರ್ಷ
ದಿವ್ಯಾಂಶಿ, 13 ವರ್ಷ
ಶ್ರವಣ್, 20 ವರ್ಷ (ಚಿಕ್ಕಬಳ್ಳಾಪುರ)
ದೇವಿ, 29 ವರ್ಷ
ಶಿವಲಿಂಗ್, 17 ವರ್ಷ
ಮನೋಜ್, 33 ವರ್ಷ (ತುಮಕೂರು)
ಅಕ್ಷತಾ, (ಮಂಗಳೂರು)
ಮತ್ತೊಬ್ಬರ ಹೆಸರು ಪತ್ತೆಯಾಗಿಲ್ಲ, 20 ವರ್ಷ ವೈದೇಹಿ ಆಸ್ಪತ್ರೆ
ಮೃತರ ಪೈಕಿ ಶ್ರವಣ್, ಭೂಮಿಕ್, ಮನೋಜ್, ಚಿನ್ಮಯಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯರಾತ್ರಿಯೇ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW