ನವದೆಹಲಿ: ಹಲವಾರು ವರ್ಷಗಳಿಂದ ಒಂದೇ ದರವನ್ನು ನಿರ್ವಹಿಸುತ್ತಿದ್ದ ಭಾರತೀಯ ರೈಲ್ವೇ ಈಗ ರೈಲು ಟಿಕೆಟ್ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ.
ಜುಲೈ 1ರಿಂದ ಎಸಿ, ಎಸಿ ರಹಿತ, ಎಕ್ಸ್ಪ್ರೆಸ್ ಹಾಗೂ ದ್ವಿತೀಯ ದರ್ಜೆ ರೈಲುಗಳ ಟಿಕೆಟ್ ದರದಲ್ಲಿ ಏರಿಕೆ ಮಾಡಲು ಇಲಾಖೆ ಮುಂದಾಗಿದೆ.
ದರಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲ ಎಂದು ರೈಲ್ವೇ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಉಪನಗರ ರೈಲು ಹಾಗೂ ಮಾಸಿಕ ಪಾಸ್ಗಳ ದರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಕೂಡ ಅಧಿಕಾರಿ ಮಾಹಿತಿ ನೀಡಿದ್ದಾರೆ. ರೈಲ್ವೇ ವೆಚ್ಚ ನಿರ್ವಹಣೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿದ್ದು, ರೈಲ್ವೇ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಎಸಿ ರಹಿತ, ಎಕ್ಸ್ಪ್ರೆಸ್ ರೈಲು ಪ್ರತೀ ಕಿ.ಮೀ.ಗೆ 1 ಪೈಸೆ, ಎಸಿ ರೈಲುಗಳ ಟಿಕೆಟ್ಗೆ ಪ್ರತೀ ಕಿ.ಮೀ.ಗೆ 2 ಪೈಸೆ, 2ನೇ ದರ್ಜೆ ರೈಲು ಟಿಕೆಟ್ನಲ್ಲಿ 500 ಕಿ.ಮೀ.ವರೆಗೆ ಹೆಚ್ಚಳ ಇಲ್ಲ, 500 ಕಿ.ಮೀ. ದಾಟಿದ ಬಳಿಕ ಕಿ.ಮೀ.ಗೆ ಅರ್ಧ ಪೈಸೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW