ತುಮಕೂರು: ಬಸ್ಸಿಗಾಗಿ ಕಾಯುತ್ತಿದ್ದ ದಂಪತಿಯನ್ನು ಡ್ರಾಪ್ ನೀಡುವ ನೆಪದಲ್ಲಿ ಕರೆದೊಯ್ದು ಮಹಿಳೆಯ ಕಿವಿಯಲ್ಲಿದ್ದ ಓಲೆ ಹಾಗೂ ಸರವನ್ನು ದೋಚಿರುವ ಘಟನೆ ಪಾವಗಡ ತಾಲ್ಲೂಕಿನ ಕೆ.ರಾಂಪುರ-ನೀಲಮ್ಮನಹಳ್ಳಿ ಗೇಟ್ ಬಳಿ ನಡೆದಿದೆ.
ಘಟನೆಯ ವಿವರ:
ದೊಡ್ಡಹಳ್ಳಿ ಗ್ರಾಮದ ಗುಂಡಮ್ಮ ಹಾಗೂ ಆಕೆಯ ಪತಿ ಅಮರನಾರಾಯಣ ತಮ್ಮ ಸ್ವಗ್ರಾಮಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರು. ಇದನ್ನು ಕಂಡ ಅಪರಿಚಿತ ವ್ಯಕ್ತಿಗಳು ಎರಡು ಬೈಕ್ ಗಳಲ್ಲಿ ಬಂದು ಆಕೆಯ ಪತಿ ಅಮರನಾರಾಯಣ ಅವರನ್ನ ಒಂದು ಬೈಕ್ ನಲ್ಲಿ ಮತ್ತೊಂದರಲ್ಲಿ ಗುಂಡಮ್ಮ ಅವರನ್ನು ಕುಳ್ಳರಿಸಿಕೊಂಡು ಕರೆದೊಯ್ದಿದ್ದಾರೆ. ಗುಂಡಮ್ಮ ಹತ್ತಿಸಿಕೊಂಡಿದ್ದ ಬೈಕ್ ಸವಾರ ಹಿಂದೆ ಬರುತ್ತಿದ್ದು, ಮಾರ್ಗಮಧ್ಯೆ ನೀಲಮ್ಮನಹಳ್ಳಿ ಕೆ.ರಾಂಪುರದ ಮಧ್ಯದ ಕಾಲುದಾರಿಗೆ ವಾಹನವನ್ನು ತಿರುಗಿಸಿದಾಗ ಗುಂಡಮ್ಮ ಅವರು ಏಕೆ ಹೀಗೆ ಬೈಕನ್ನು ತಿರುಗಿಸುತ್ತಿದ್ದೀಯಾ, ನಿಲ್ಲಿಸುವಂತೆ ಗೋಗರೆದರೂ ಆತ ಬೈಕನ್ನು ನಿಲ್ಲಿಸದೆ ಇದ್ದಾಗ ಗುಂಡಮ್ಮ ಅವರು ಬೈಕ್ ಸವಾರನ ಹಿಡಿದು ಎಳೆದಾಡಿ ನಿಲ್ಲಿಸುವಂತೆ ಕೇಳಿದರು.
ಈ ವೇಳೆ ಕಳ್ಳ ಬೈಕ್ ನ್ನು ನಿಲ್ಲಿಸದೆ ಗುಂಡಮ್ಮ ಅವರ ಕಿವಿಯಲ್ಲಿದ್ದ ಓಲೆಗಳು ರಕ್ತ ಬರುವ ಹಾಗೆ ಕಿತ್ತಿದ್ದಾನೆ. ಹರಿದ ಕಿವಿಯಲ್ಲಿದ್ದ ಓಲೆ ಹಾಗೂ ಮಾಂಗಲ್ಯ ಸರವನ್ನು ಕೈ ಹಾಕಿ ಎಳೆದಾಗ ಅದು ತುಂಡಾಗಿದೆ. ತಕ್ಷಣ ಓಲೆಗಳೊಂದಿಗೆ ಅಲ್ಲಿಂದ ಆತ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


