ಚಂಡೀಗಢ: ಇಬ್ಬರು ಮುಖ್ಯಮಂತ್ರಿಗಳ ಬಂಧನವಾಗಿದೆ. ಆದರೆ ಬುಡಕಟ್ಟು ಸಮುದಾಯದ ಸಿಎಂ ಮಾತ್ರ ಇನ್ನೂ ಜೈಲಿನಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬಂಧನಗಳ ನಡುವೆ ಹೋಲಿಕೆ ಮಾಡಿದ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಹರಿಯಾಣದ ಪಂಚಕುಲದಲ್ಲಿ ‘ಸಂವಿಧಾನ್ ಸಮ್ಮಾನ್ ಸಮ್ಮೇಳನ’ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಕಾಣಬೇಕು ಎಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗಾದರೆ ನನ್ನ ಸರಳ ಪ್ರಶ್ನೆ, 90% ರಷ್ಟು ಜನರ ಭಾಗವಹಿಸುವಿಕೆ ಏನು? ಮಾಧ್ಯಮ ಅಥವಾ ಅಧಿಕಾರಶಾಹಿ ಯಾವುದೇ ಆಗಿರಲಿ. ಅಲ್ಲಿ 90% ರಷ್ಟು ಜನರು ಭಾಗವಹಿಸುವಿಕೆ ಇಲ್ಲ. ಅವರು ಅಸ್ತಿತ್ವದಲ್ಲಿಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಲಾಯಿತು. ಬುಡಕಟ್ಟು ಸಿಎಂ ಹೇಮಂತ್ ಸೋರೆನ್ ಇನ್ನೂ ಜೈಲಿನಲ್ಲಿದ್ದಾರೆ. ಅವರು ಮೊದಲು ಅರೆಸ್ಟ್ ಆದರು. ಇನ್ನೂ ಕಂಬಿಗಳ ಹಿಂದೆ ಇದ್ದಾರೆ. ರಾಷ್ಟ್ರೀಯ ಮಾಧ್ಯಮಗಳು ಅವರನ್ನು ಮರೆತಿವೆ. ಅವರ ಬಗ್ಗೆ ಮಾತನಾಡುವುದಿಲ್ಲ. ಮಾಯಾವತಿ ಭ್ರಷ್ಟ, ಆದರೆ ನವೀನ್ ಪಟ್ನಾಯಕ್ ಅಲ್ಲ. ಯಾರಾದರೂ ಬುಡಕಟ್ಟು ಅಥವಾ ದಲಿತರಾಗಿದ್ದರೆ, ಅವರು ಸ್ವಯಂಚಾಲಿತವಾಗಿ ಚೌಕಟ್ಟಿಗೆ ಒಳಗಾಗುತ್ತಾರೆ ಎಂದು ತಾರತಮ್ಯ ಕುರಿತು ಪ್ರಶ್ನಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA