ಸರಗೂರು: ಪಟ್ಟಣದ ನಾಮಧಾರಿಗೌಡ ಸಮುದಾಯಭವನದಲ್ಲಿ ಬುಧವಾರ ನಾಮಧಾರಿಗೌಡ ಸಮಾಜದ ಪ್ರಭಾರ ಅಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಾಜದ ಅಧ್ಯಕ್ಷರಾಗಿ ನಿಧನರಾದ ಎಂ.ಎನ್.ಭೀಮರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಪಂ ಮಾಜಿ ಅಧ್ಯಕ್ಷ ಪಿ.ರವಿ ಮಾತನಾಡಿ, “ಭೀಮರಾಜ್ ಅವರು ಸಮಾಜದ ಅಧ್ಯಕ್ಷರಾಗಿ ಮೂರು ವರ್ಷ ಉತ್ತಮ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯೆದಾನ ಮಾಡಿದ್ಧಾರೆ. ಇದಲ್ಲದೆ ಸಮಾಜದ ಅಭಿವೃದ್ಧಿಗೂ ಶ್ರಮಿಸಿದ್ದು, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಸದಾ ಹಸನ್ಮುಖಿಯಾಗಿದ್ದುಕೊಂಡು ಸಮಾಜದ ಬಂಧುಗಳಿಗೆ ದಾರಿದೀಪವಾಗಿದ್ದರು. ಇಂಥವರ ನಿಧನದಿಂದ ಸಮಾಜಕ್ಕೆ ತುಂಬಾಲಾರದ ನಷ್ಟವಾಗಿದೆ” ಎಂದು ಗುಣಗಾನ ಮಾಡಿದರು.
ಸಮಾಜದ ಪ್ರಭಾರ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, “ಸರಗೂರು ತಾಲೂಕು ಹೋರಾಟ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದ ಭೀಮರಾಜ್ ಅವರ ಹೋರಾಟದ ಫಲವಾಗಿ ಸರಗೂರು ನೂತನ ತಾಲೂಕಾಗಿ ಘೋಷಣೆಯಾಯಿತು. ಬಿ.ಮಟಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು, ಶಾಲೆಯ ಅಭಿವೃದ್ಧಿ ಸಾಕಷ್ಟು ಪರಿಶ್ರಮವಹಿಸಿದ್ದರು. ಸಮಾಜದಲ್ಲಿ ಉತ್ತಮವಾದ ಸೇವೆ ಮಾಡಿದ್ದಾರೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯದರ್ಶಿ ಅಂಕಪ್ಪ ವಾರ್ಷಿಕ ವರದಿ ಓದಿದರು. ಗೌರವಾಧ್ಯಕ್ಷ ರತ್ನಯ್ಯ, ಕಾರ್ಯಾಧ್ಯಕ್ಷ ಚಕ್ಕೂರು ಬಸವರಾಜು, ಡಿ.ಸುಂದರ್‌ದಾಸ್, ಎಂ.ಎನ್.ಜಗದೀಶ್, ನಟರಾಜು, ಬಿ.ಸಿ.ಬಸಪ್ಪ, ದೇವದಾಸ್, ಕಲ್ಲಹಳ್ಳ ಅಭಿಕುಮಾರ್, ಶ್ಯಾಮ್ ಸುಂದರ್, ಕೆ.ಮಹೇಶ್, ನಂದಕುಮಾರ್, ವೈ.ಪಿ.ನಾಗರಾಜ್, ಖಜಾಂಚಿ ಎ.ಪದ್ಮರಾಜ್, ಹುಲಿಕುರ ಪದ್ಮರಾಜ್, ಚಾಮರಾಜು, ಕಾಟನ್ ಮಹದೇವಪ್ಪ, ಹೊಸಕೋಟೆ ಅಜಿತ್‌ಕುಮಾರ್, ಹಳೆಯೂರ್ ಗಣೇಶ್ ಸೇರಿದಂತೆ ಸಮಾಜದ ಬಂಧುಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC