ತುಮಕೂರು: ಮುಂಬರುವ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮವಾಗಿ ತುಮಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ಪೂರಕವಾಗಿ ಕೆಲಸ ನಿರ್ವಹಿಸಲು ಬಿಎಸ್ ಎಫ್ ನ ಆರು ತುಕಡಿಗಳು ನಗರಕ್ಕೆ ಬಂದಿಳಿದಿವೆ.
ಶಸ್ತ್ರ ಸಜ್ಜಿತ ಬಿಎಸ್ಎಫ್ ಸಿಬ್ಬಂದಿಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ತುಮಕೂರು ನಗರದ ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಇಂದು 400 ಸಿಬ್ಬಂದಿಗಳು ರೂಟ್ ಮಾರ್ಚ್ ನಡೆಸಿದರು.
ಸ್ಥಳೀಯರಲ್ಲಿ ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂಬ ಒಂದು ವಾತಾವರಣವನ್ನು ನಿರ್ಮಿಸಲು ಈ ಕ್ರಮ ಕೈಗೊಳ್ಳಲಾಯಿತು.
ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಗಳು ಹಾಗೂ ಬಿಎಸ್ ಎಫ್ ಸಿಬ್ಬಂದಿಗಳು ತುಮಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರದ ಶಾಂತಿನಗರ, ಗೂಡ್ಸ್ ಷೆಡ್ ಕಾಲೋನಿ, ಮರಳು ರೆಡ್ಡಿ ದಿಣ್ಣೆ, ಬನಶಂಕರಿ ಬಡಾವಣೆ, ಕುರಿಪಾಳ್ಯ ಬಡಾವಣೆ, ಚಾಂದಿನಿ ಚೌಕ ಬಡಾವಣೆ, ಪಿಎಚ್ ಕಾಲೋನಿ, ತಿಲಕ್ ಪಾರ್ಕ್ ವ್ಯಾಪ್ತಿಯ ರಸ್ತೆಗಳು, ಬಿಜಿ ಪಾಳ್ಯ, ಸಂತೆಪೇಟೆ, ಮಂಡಿಪೇಟೆ, ಜಿ ಸಿ ಆರ್ ಕಾಲೋನಿ, ಚಿಕ್ಕಪೇಟೆ, ಗುಂಚಿ ಸರ್ಕಲ್ ವ್ಯಾಪ್ತಿಯಲ್ಲಿ ಸಿಬ್ಬಂದಿಗಳು ರೂಟ್ ಮಾರ್ಚ್ ಮಾಡಿದರು. ಅಲ್ಲದೆ ಪ್ರಮುಖವಾಗಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy