ಬೆಂಗಳೂರು: ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಯ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಕಾರಾಗೃಹದ ವಾರ್ಡನ್ ವೋರ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಅವರು, ರಾಮನಗರ, ತುಮಕೂರು, ಕಲಬುರಗಿ ಹಾಗೂ ಬೆಳಗಾವಿ ಕಾರಾಗೃಹ ಗಳಲ್ಲಿ, ಕೆಲವು ಅಕ್ರಮ ಚಟುವಟಿಕೆ ಗಳ ಬಗ್ಗೆ, ವರದಿಯಾಗಿದ್ದು, ಇದರ ಬಗ್ಗೆ, ವಿಸ್ತೃತ ತನಿಖೆಗೆ ಆದೇಶ ನೀಡಿದ್ದು, ತುಮಕೂರು ಜಿಲ್ಲಾ ಕಾರಾಗೃಹದ ವಾರ್ಡನ್, ಪ್ರವೀಣ್ ಎಂಬುವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾರಾಗೃಹ ಗಳಲ್ಲಿ, ಅಕ್ರಮ ಚಟುವಟಿಕೆ ಗಳಲ್ಲಿ ತೊಡಗುವ ಹಾಗೂ ಕುಮ್ಮಕ್ಕು ನೀಡುವ ಕಾರಾಗೃಹ ಸಿಬ್ಬಂದಿಗಳ ವಿರುದ್ಧ ಕಠಿಣ ಶಿಸ್ತಿನ ಕ್ರಮ ಜರುಗಿಸುವುದಾಗಿ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1