nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು

    February 11, 2026

    ಫೆ. 17, 18ರಂದು ಪ.ಜಾ., ಪ.ಪ. ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ

    February 11, 2026

    ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

    February 11, 2026
    Facebook Twitter Instagram
    ಟ್ರೆಂಡಿಂಗ್
    • ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು
    • ಫೆ. 17, 18ರಂದು ಪ.ಜಾ., ಪ.ಪ. ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
    • ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
    • ಮಹಿಳೆಯರಿಗೆ ಸುವರ್ಣಾವಕಾಶ: ಟೈಲರಿಂಗ್ ತರಬೇತಿಗೆ ಅರ್ಜಿ ಸಲ್ಲಿಸಿ
    • ಗುಂಪುಗಾರಿಕೆ ನಿಲ್ಲಿಸಿ | ದೊಡ್ಡಘಟ್ಟ ಚಂದ್ರೇಶ್ ಗೆ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ
    • ಬ್ರಾಹ್ಮಣ, ಇತರರಿಗೆ ಮೀಸಲಾತಿ ಜಾರಿ, ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಜಾರಿ ವಿಳಂಬ: ಉಗ್ರಪ್ಪ ಕಿಡಿ
    • ಕಾರವಾರ: ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ
    • ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಇನ್ನಿಲ್ಲ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರಿನಲ್ಲಿ ದಿಡೀರ್ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ: ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ
    ತುಮಕೂರು May 5, 2023

    ತುಮಕೂರಿನಲ್ಲಿ ದಿಡೀರ್ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ: ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

    By adminMay 5, 2023No Comments3 Mins Read
    pm modi

    ತುಮಕೂರು: ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ  ಇಂದು ತುಮಕೂರು ನಗರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರೋಡ್ ಶೋ ನಡೆಸುವುದಿಲ್ಲವೆಂದು ಮೊದಲಿಗೆ ಹೇಳಿದ್ದರೂ, ನಂತರ  ದಿಢೀರೆಂದು ಬಿ.ಎಚ್.ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದು, ಸುತ್ತಲೂ ನೆರೆದಿದ್ದ ಜನರಿಗೆ ಒಂದು ರೀತಿ ಸಂತಸ ತಂದಿತ್ತು.

    ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜರಂಗ ಬಲಿ ಕೀ ಘೋಷಣೆ ಕೂಗಿ,  ಈ ಘೋಷಣೆ ದೆಹಲಿ ತನಕ ತಲುಪಬೇಕು.  ಡಬಲ್ ಇಂಜಿನ್ ಸರ್ಕಾರ ಬರೋದು ನಿಶ್ಚಿತ ಎಂದರು.


    Provided by
    Provided by

    ಸಿದ್ದಗಂಗಾ ಮಠ ಹಾಗೂ ಚುಂಚನಗಿರಿ ಮಠಕ್ಕೆ ನಮಸ್ಕಾರ. ಕಲ್ಪತರು ನಾಡಿನ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

    ಹೆಲಿಪ್ಯಾಡ್ ಮೂಲಕ ಬರುವಾಗ ಜನ ತುಂಬಾ ಸೇರಿದರು. ರೋಡ್ ಶೋ ಪ್ಲಾನ್ ಇರಲಿಲ್ಲ ಆದರೆ ನಾನು ರೋಡ್ ಶೋ ಮಾಡಿದೆ ಎಂದರು. ಕಾಂಗ್ರೆಸ್ ನವರಿಗೆ ಜೈ ಬಜರಂಗ ಬಲಿ ಕೂಗಿದರೂ ಅವರಿಗೆ ತೊಂದರೆ ಆಗಿದೆ. ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ನ ಗುಲಾಮ್ ಆಗಿದ್ದಾರೆ ಎಂದರು.

    ಕುವೆಂಪು ಗೀತೆ ಓದಿದ ಮೋದಿ, ಬಜರಂಗ ಬಲಿ ಕಿ ಎಂದು ಘೋಷಣೆ ಕೂಗಿದರು. ಇದು ಕರ್ನಾಟಕ ಸರ್ಕಾರದ ಸಂಕಲ್ಪ, ನನಗೆ ತುಮಕೂರಿನಲ್ಲಿ ಅಭಿವೃದ್ಧಿಯ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿತ್ತು. ಕಳೆದ 9 ವರ್ಷಗಳಿಂದ ರೈತರಿಗೆ, ಬಡ ಜನರಿಗಾಗಿ ಎಷ್ಟು ಅಭಿವೃದ್ಧಿ ಆಗಿದೆ. ಕಳೆದ 70 ವರ್ಷದಲ್ಲಿ ಆಗಿಲ್ಲ ಎಂದರು.

    ಜೆಡಿಎಸ್ ಕಾಂಗ್ರೆಸ್ ನಿಂದ ಈ ಅಭಿವೃದ್ಧಿ ಆಗಲ್ಲ. ಇಂತಹ ಕಾಂಗ್ರೆಸ್ ಕರ್ನಾಟಕ ಅಭಿವೃದ್ಧಿ ಯಾವತ್ತೂ ಮಾಡಲ್ಲ.  ಕಾಂಗ್ರೆಸ್ ಜೆಡಿಎಸ್ ಆಟ ನಡೆಯಲಲ್ಲ ಎಂದರು.  ಕಾಂಗ್ರೆಸ್ ಜೆಡಿಎಸ್ ಗೆ ಕೊಡುವ ಮತ ಅಸ್ಥಿರ ಸರ್ಕಾರ ಕೊಡಲಿದೆ. ಹಾಗಾಗಿ ಒಂದೇ ಸಂಕಲ್ಪ ಮಾಡಬೇಕು. ಈ ಬಾರಿಯ ನಿರ್ಧಾರ. ಬಹುಮತದ ಸರ್ಕಾರ ಎಂದರು.

    ಶಿವಕುಮಾರ ಶ್ರೀಗಳ ಸಾನಿಧ್ಯ, ತ್ರಿವಿಧ ದಾಸೋಹ ನೆನೆದ ಮೋದಿ, ಅನ್ನ ಅಕ್ಷರ ದಾಸೋಹದಂತೆ ಕರ್ನಾಟಕ ಸರ್ಕಾರ ಕೂಡ ಅಭಿವೃದ್ಧಿ ಸಂಕಲ್ಪ ಮಾಡಿದೆ. ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಜನರ ಜೀವನ ಸುಧಾರಿಸಿದೆ ಎಂದರು.

    ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಬದುಕು ಹಸನಾಗಿದೆ. 2.5 ಲಕ್ಷ ಕೋಟಿ ರೈತರಿಗೆ ತಲುಪಿದೆ. ಬಿಜೆಪಿ ಸರ್ಕಾರದ ಶ್ರಮದಿಂದ 9 ಕೋಟಿ ಮಹಿಳೆಯರು. ಇವತ್ತು ದೇಶದ ಹಳ್ಳಿಗಳಲ್ಲಿ ದವಸ ಧಾನ್ಯಗಳ ಸ್ಟೋರೇಜ್ ಸೌಲಭ್ಯ ಮಾಡಲಾಗಿದೆ ಎಂದರು.

    ರೈತರ ರಸಗೊಬ್ಬರದ ದರ ಕಡಿಮೆ ಮಾಡಲಾಗಿದೆ. 50ರೂಗೆ ರಸಗೊಬ್ಬರ ಖರೀದಿ ಮಾಡಿ ರೈತರಿಗೆ ಕಡಿಮೆ ಬೆಲೆಗೆ ಕೊಡಲಾಗುತ್ತದೆ.ಮೋದಿ ಬಂದಾಗಿಂದ ಎಲ್ಲವೂ ಬದಲಾಗಿದೆ.ದೇಶದ ಹಳ್ಳಿಹಳ್ಳಿಗೂ ವಿದ್ಯುತ್ ತಲುಪಿದೆ. 2014ರ ಮುಂಚೆ 18ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ತಲುಪಿದೆ. ಈಗ ನಲ್ಲಿ ಮೂಲಕ ಶುದ್ದ ನೀರು ಸಿಗುತ್ತದೆ ಎಂದರು.

    ತುಮಕೂರಿನಲ್ಲಿ 1.5 ಲಕ್ಷ ಕುಟುಂಬಕ್ಕೆ ಜಲ ಜೀವನ್ ಮಿಷನ್ ಮೂಲಕ ನೀರು ಸಿಗುತ್ತಿದೆ. ಫುಡ್ ಪಾರ್ಕ್ ಮೂಲಕ ರೈತರಿಗೆ ಅನುಕೂಲ ಆಗಿದೆ ಉದ್ಯೋಗ ಸಿಕ್ಕಿದೆ ಎಂದರು.

    ಕೊಬ್ಬರಿಗೆ ಬೆಂಬಲ ಬೆಲೆ ಕೊಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದನ್ನು ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್ ನವರು ಯಾವುದನ್ನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಈ ಎಲ್ಲಾ ಯೋಜನೆ ಸತ್ತುಹೋಗುತ್ತದೆ. ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿ ಆಗುತ್ತದೆ ಎಂದರು.

    ಈ ಬಾರಿಯ ಕೇಂದ್ರದ ಬಜೆಟ್ ನಲ್ಲಿ ಅಪ್ಪರ್ ಭದ್ರಾಗೆ 5 ಸಾವಿರ ಕೋಟಿ ರೂ. ಅನುದಾನ ಕೊಡಲಾಗಿದೆ. ಮನೆ ಮನೆಗೆ ನೀರು ತಲುಪಿಸಲು ಬದ್ದತೆ ಇದೆ ಎಂದರು.

    ಕೇಂದ್ರದ ಬಿಜೆಪಿ ಸರ್ಕಾರ ಎನ್ ಇಪಿ ತಂದಿದೆ. ಇದರಿಂದ ಅನುಕೂಲ ಆಗಿದೆ. ಕಸ್ತೂರಿ ರಂಗನ್ ವರದಿ ಉದಾಹರಿಸಿದ ಮೋದಿ, ಬಿಜೆಪಿ ಸರ್ಕಾರ ಆಧುನಿಕ ರಕ್ಷಣಾ ವ್ಯವಸ್ಥೆ ಒದಗಿಸಿದೆ ಎಂದರು.

    ಕಾಂಗ್ರೆಸ್ ಜೆಡಿಎಸ್ ಹಲವು ಕಾಮಗಾರಿ ನಿಲ್ಲಿಸಲು ಪ್ರಯತ್ನಿಸಿತ್ತು. ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಕಾಮಗಾರಿ ಮಾಡಿದೆ. ಕಾಂಗ್ರೆಸ್ ನ ಮಾಜಿ ಪ್ರಧಾನಿ 85 ಪರ್ಸೆಂಟ್ ಬಗ್ಗೆ ಒಪ್ಪಿಕೊಂಡಿದ್ದರು. ಸ್ವತಃ ರಾಜೀವ್ ಗಾಂಧಿನೇ ಒಪ್ಪಿಕೊಂಡಿದ್ದರು ಎಂದರು.

    ಈ ದೇಶದ ಪ್ರಾದೇಶಿಕ ಭಾಷೆ ಮೂಲಕ ಮಾತೃ ಭಾಷೆ ಮೂಲಕ ಎಲ್ಲಿತನಕ ಓದಲು ಬಯಸುತ್ತಾರೋ ಅಲ್ಲಿ ತನಕ ಓದಬಹುದು. ಕಾಂಗ್ರೆಸ್ ನವರು ಇಂತಹ ಎನ್ ಇ ಪಿ ಗೆ ವಿರೋಧ ವ್ಯಕ್ತಪಡಿಸಿದರು.

    ಕಾಂಗ್ರೆಸ್ ನವರಿಗೆ ಇಂಗ್ಲಿಷ್ ಮೇಲೆ ಪ್ರೀತಿ ಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ತಾನೆ, ಆದರೆ ಕಾಂಗ್ರೆಸ್ ನವರು ಇದರ ವಿರುದ್ದ ಇದೆ. ಇಂತಹ ಕಾಂಗ್ರೆಸ್ ಗೆ ಶಿಕ್ಷೆ ಕೊಡುವ ಚುನಾವಣೆ ಇದಾಗಿದೆ ಎಂದರು.

    ಹಲವು ಕೇಂದ್ರದ ಪರೀಕ್ಷೆಗಳು ಈಗ ಕನ್ನಡದಲ್ಲಿ ನಡೀತಿದೆ.ಕಾಂಗ್ರೆಸ್ ಕರ್ನಾಟಕದ ಯುವಕರಿಗೆ ಮೋಸ ಮಾಡುತ್ತಿದೆ. ನಮ್ಮ ಬಿಜೆಪಿ ಸರ್ಕಾರ ಶೈಕ್ಷಣಿಕವಾಗಿಯೂ ಒಳ್ಳೆ ಕೆಲಸ ಮಾಡುತ್ತಿದೆ. ಆಧುನಿಕ ನೂತನ ಶೈಕ್ಷಣಿಕ ನೀತಿ ತಂದಿದೆ ಎಂದರು.

    ಏಷ್ಯಾದ ದೊಡ್ಡ ಹೆಲಿಕಾಪ್ಟರ್ ಘಟಕ ಇದೆ. ಇದರ ಶಿಲಾನ್ಯಾಸ ಮತ್ತು ಉದ್ಘಾಟನಾ ಸೌಭಾಗ್ಯ ನೀವು ಕೊಟ್ಟಿದ್ದೀರಿ. ಕಾಂಗ್ರೆಸ್ ಕಾಲದಲ್ಲಿ ರಕ್ಷಣಾ ವ್ಯವಸ್ಥೆ ಹದಗೆಟ್ಟಿತ್ತು. ಅವರ ಕಾಲದಲ್ಲಿ ಎಲ್ಲವೂ ಲೂಟಿ ಆಗಿತ್ತು.ಅವರದ್ದು 85 ಪರ್ಸೆಂಟ್ ಕಮಿಷನ್ ಸರ್ಕಾರ ಆಗಿತ್ತು. ಎಚ್ ಎ ಎಲ್ ನಿರ್ನಾಮ ಮಾಡಲಾಗಿತ್ತ ಎಂದರು.

    ಕಾಂಗ್ರೆಸ್ ನಾಯಕರ ಬಾಯಿಯಲ್ಲಿ ಎಚ್ ಎ ಎಲ್ ಹೆಸರು ಬರುತ್ತಿರಲಿಲ್ಲ. ಜೆಡಿಎಸ್ ನ ಎಲ್ಲಾ ಅಭ್ಯರ್ಥಿ ಕಾಂಗ್ರೆಸ್ ನ ಅಭ್ಯರ್ಥಿ ಆಗಿರುತ್ತಾರೆ.  ಕರ್ನಾಟಕವನ್ನು ನಂಬರ್ ಒನ್ ಮಾಡಲು ಈ ಬಾರಿಯ ನಿರ್ಧಾರ ಬಿಜೆಪಿ ಸರ್ಕಾರ ಮಾಡಲು ಸಂಕಲ್ಪ ಮಾಡಿ ಎಂದರು.

    ಬುಧವಾರ ಮತದಾನ ಇದೆ.  ನಾವು ವಿಜಯ ಸಂಕಲ್ಪ ಮಾಡಬೇಕು. ಚುನಾವಣೆ ಗೆಲ್ಲುವುದು ನಿಶ್ಚಿತ. ಆದರೆ ಬೂತ್ ಬೂತ್ ನಲ್ಲಿ ಲೀಡ್ ಬರಬೇಕು ಮನೆ ಮನೆಗೆ ಹೋಗಿ ಹೇಳಿ ಎಂದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಫೆ. 17, 18ರಂದು ಪ.ಜಾ., ಪ.ಪ. ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ

    February 11, 2026

    ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

    February 11, 2026

    ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು

    February 10, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಗಂಡನಿಂದ ಮಾರಣಾಂತಿಕ ಹಲ್ಲೆ: ಮಹಿಳಾ ಆಯೋಗದ ಅಧ್ಯಕ್ಷೆಯ ಕಾಲು ಹಿಡಿದು ಕಣ್ಣೀರು ಹಾಕಿದ ಸಂತ್ರಸ್ತೆಯರು

    February 11, 2026

    ಕುಣಿಗಲ್: ನನ್ನ ಗಂಡ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ, ತಲೆ ಬುರುಡೆಗೆ ಗಾಯವಾಗಿ ವೈದ್ಯರು ನಾಲ್ಕು ಹೊಲಿಗೆ ಹಾಕಿದ್ದಾರೆ,…

    ಫೆ. 17, 18ರಂದು ಪ.ಜಾ., ಪ.ಪ. ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ

    February 11, 2026

    ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

    February 11, 2026

    ಮಹಿಳೆಯರಿಗೆ ಸುವರ್ಣಾವಕಾಶ: ಟೈಲರಿಂಗ್ ತರಬೇತಿಗೆ ಅರ್ಜಿ ಸಲ್ಲಿಸಿ

    February 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.