nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    March 13, 2026

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    March 13, 2026

    ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ

    March 12, 2026
    Facebook Twitter Instagram
    ಟ್ರೆಂಡಿಂಗ್
    • ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
    • ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ
    • ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ
    • ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ
    • ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ
    • ತುಮಕೂರು: ಅಂಗನವಾಡಿ ಹುದ್ದೆಗಳ ನೇಮಕಾತಿ; 2,628 ಅರ್ಜಿಗಳು ತಿರಸ್ಕೃತ
    • ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯ: ತಿಪಟೂರಿನಲ್ಲಿ ಪ್ರತಿಭಟನೆ
    • ಮಧುಗಿರಿ: ಒಳ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ
    ತುಮಕೂರು March 13, 2026

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    By adminMarch 13, 2026No Comments3 Mins Read
    train

    ತುಮಕೂರು: ತುಮಕೂರು –ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ತುಮಕೂರು–ಊರುಕೆರೆ ಭಾಗದಲ್ಲಿ ನಾನ್ ಇಂಟರ್ ಲಾಕಿಂಗ್ ಕಾಮಗಾರಿಯ ನಿಮಿತ್ತ, ಮಾ. 15—16–17ರಂದು ಕೆಳಕಂಡ ರೈಲು ಸೇವೆಗಳಲ್ಲಿ ಭಾಗಶಃ ಪೂರ್ಣ ರದ್ದು ಹಾಗೂ ಸಮಯದಲ್ಲಿ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

    ಮಾ.15 ರಂದು ರದ್ದತಿಯಾಗುವ ರೈಲುಗಳ ವಿವರ: ರೈಲು ಸಂಖ್ಯೆ 56202 ಮೈಸೂರು–ಚಾಮರಾಜನಗರ ಪ್ಯಾಸೆಂಜರ್, ರೈಲು ಸಂಖ್ಯೆ 56281 ಚಾಮರಾಜನಗರ — ತುಮಕೂರು ಪ್ಯಾಸೆಂಜರ್, ರೈಲು ಸಂಖ್ಯೆ 16567 ತುಮಕೂರು — ಶಿವಮೊಗ್ಗ ಟೌನ್ ಎಕ್ಸ್‌ ಪ್ರೆಸ್ ಸೇವೆ, ರೈಲು ಸಂಖ್ಯೆ 66569 ಯಶವಂತಪುರ — ತುಮಕೂರು ಮೆಮು, ರೈಲು ಸಂಖ್ಯೆ 66571 ಕೆಎಸ್ಆರ್ ಬೆಂಗಳೂರು — ತುಮಕೂರು ಮೆಮು ಈ ರೈಲು ಸೇವೆಯನ್ನು ಹಿರೇಹಳ್ಳಿ– ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಇದೇ ರೀತಿ ರೈಲು ಸಂಖ್ಯೆ 66568 ತುಮಕೂರು — ಕೆಎಸ್ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ತುಮಕೂರು — ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ. ಹಾಗೂ ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ — ತುಮಕೂರು ಎಕ್ಸ್‌ ಪ್ರೆಸ್ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ಅರಸೀಕೆರೆ ನಿಲ್ದಾಣದಲ್ಲಿ ನಿಲುಗಡೆಯಾಗಲಿದ್ದು, ತುಮಕೂರಿನವರೆಗೆ ಸಂಚರಿಸುವುದಿಲ್ಲ ಎಂದು ತಿಳಿಸಲಾಗಿದೆ.


    Provided by
    Provided by

    ಮಾ.15, 16ರಂದು ರದ್ದತಿಯಾಗುವ ರೈಲುಗಳ ವಿವರ: ರೈಲು ಸಂಖ್ಯೆ 56282 ತುಮಕೂರು — ಚಾಮರಾಜನಗರ ಪ್ಯಾಸೆಂಜರ್, ರೈಲು ಸಂಖ್ಯೆ 66567 ಕೆಎಸ್ ಆರ್ ಬೆಂಗಳೂರು –ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ — ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸುವುದು. ರೈಲು ಸಂಖ್ಯೆ 66572 ತುಮಕೂರು – ಕೆಎಸ್ ಆರ್ ಬೆಂಗಳೂರು ಮೆಮು ಸೇವೆಯನ್ನು ತುಮಕೂರು — ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ ಎಂದು ತಿಳಿಸಲಾಗಿದೆ.

    ರೈಲು ಸಂಖ್ಯೆ 56201 ಚಾಮರಾಜನಗರ –ಮೈಸೂರು ಪ್ಯಾಸೆಂಜರ್ ಸೇವೆಯನ್ನು ಮಾ.16 ಹಾಗೂ 17ರಂದು 2 ದಿನ ರದ್ದುಗೊಳಿಸಲಾಗಿದೆ.

    ಮಾ.16ರಂದು ರದ್ದತಿಯಾಗುವ ರೈಲುಗಳ ವಿವರ: ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ — ತುಮಕೂರು ಎಕ್ಸ್‌ ಪ್ರೆಸ್, ರೈಲು ಸಂಖ್ಯೆ 66570 ತುಮಕೂರು — ಯಶವಂತಪುರ ಮೆಮು, ರೈಲು ಸಂಖ್ಯೆ 66573 ಯಶವಂತಪುರ — ತುಮಕೂರು ಮೆಮು, ರೈಲು ಸಂಖ್ಯೆ 66574 ತುಮಕೂರು — ಯಶವಂತಪುರ ಮೆಮು ಸಂಚಾರವನ್ನು ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 20652 ತಾಳಗುಪ್ಪ– ಕೆಎಸ್ ಆರ್ ಬೆಂಗಳೂರು ಎಕ್ಸ್‌ ಪ್ರೆಸ್ ಸೇವೆಯನ್ನು ಅರಸೀಕೆರೆ – ಕೆಎಸ್ ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಿದ್ದು, ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ರೈಲು ಸಂಖ್ಯೆ 12725 ಕೆಎಸ್ ಆರ್ ಬೆಂಗಳೂರು — ಧಾರವಾಡ ಎಕ್ಸ್‌ ಪ್ರೆಸ್ ಸೇವೆಯನ್ನು ಕೆಎಸ್ಆರ್ ಬೆಂಗಳೂರು — ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಅಂದು ಕೆಎಸ್ ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ಅರಸೀಕೆರೆ ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಲಿದೆ.

    ರೈಲು ಸಂಖ್ಯೆ 66565 ಬಾಣಸವಾಡಿ — ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ — ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ರೈಲು ಸಂಖ್ಯೆ 66561 ತುಮಕೂರು — ಯಶವಂತಪುರ ಮೆಮು ಸೇವೆಯನ್ನು ತುಮಕೂರು — ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ. ರೈಲು ಸಂಖ್ಯೆ 20689 ಯಶವಂತಪುರ — ಶಿವಮೊಗ್ಗ ಟೌನ್ ಎಕ್ಸ್‌ ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ 75 ನಿಮಿಷ ತಡವಾಗಿ ಹೊರಡಲಿದೆ. ರೈಲು ಸಂಖ್ಯೆ 16217 ಮೈಸೂರು — ಸಾಯಿನಗರ ಶಿರಡಿ ಎಕ್ಸ್‌ ಪ್ರೆಸ್ ರೈಲು ಮೈಸೂರು ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ 105 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

    ರೈಲುಗಳ ನಿಯಂತ್ರಣ: ಮಾ.13ರಂದು ಹೊರಡುವ ರೈಲು ಸಂಖ್ಯೆ 17392 ಸಿಂಧನೂರು — ಕೆಎಸ್ಆರ್ ಬೆಂಗಳೂರು ಎಕ್ಸ್‌ ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು. ಇದೇ ರೈಲು ಸಂಖ್ಯೆ 16228 ತಾಳಗುಪ್ಪ — ಮೈಸೂರು ಎಕ್ಸ್‌ ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 15 ನಿಮಿಷಗಳ ಕಾಲ ಮಾ.13ರಂದು ನಿಯಂತ್ರಿಸಲಾಗುವುದು ಎಂದು ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ ಮಾ.15ರಂದು ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮ — ಯಶವಂತಪುರ ಎಕ್ಸ್‌ ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು. ಮಾ.16ರಂದು ಹೊರಡುವ ರೈಲು ಸಂಖ್ಯೆ 20676 ಮೈಸೂರು – ಬೆಳಗಾವಿ ಎಕ್ಸ್‌ ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    March 13, 2026

    ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ

    March 12, 2026

    ತುಮಕೂರು: ಅಂಗನವಾಡಿ ಹುದ್ದೆಗಳ ನೇಮಕಾತಿ; 2,628 ಅರ್ಜಿಗಳು ತಿರಸ್ಕೃತ

    March 12, 2026

    Leave A Reply Cancel Reply

    Our Picks

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ

    March 13, 2026

    ತುಮಕೂರು: ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಯನ್ನು ದೂರು ದಾಖಲಾದ 24 ತಾಸಿನೊಳಗೆ ಕುಣಿಗಲ್ ಉಪವಿಭಾಗದ ಪೊಲೀಸರು ಸೆರೆಹಿಡಿದಿದ್ದಾರೆ.…

    ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ

    March 13, 2026

    ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ

    March 12, 2026

    ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ

    March 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.