ತುಮಕೂರು: ಹಲವು ವರ್ಷಗಳಿಂದ ನಿಂತಲ್ಲೇ ನಿಂತಿದ್ದ ವಾಹನಗಳಿಗೆ ಮುಕ್ತಿ ನೀಡಲಾಗಿದ್ದು, ತುಮಕೂರು ನಗರ ಪೊಲೀಸ್ ಠಾಣೆಯಿಂದ 46 ಬೈಕ್, 3 ಆಟೋಗಳ ಹರಾಜು ಮಾಡಲಾಗಿದೆ.
1 ಲಕ್ಷದ 10 ಸಾವಿರ ರೂ. ಬಿಡ್ ಕೂಗಿದ ತುಮಕೂರಿನ ಅಜ್ಮತ್ ಉಲ್ಲಾ ಶರೀಫ್ ಹರಾಜಿನಲ್ಲಿ ವಾಹನ ಪಡೆದುಕೊಂಡರು.
ಹರಾಜಿನಲ್ಲಿ ಪಡೆದ ಯಾವುದೇ ವಾಹನಗಳು ರಸ್ತೆಗೆ ಇಳಿಸುವಂತಿಲ್ಲ, ಎಲ್ಲಾ ವಾಹನಗಳು ಗುಜರಿಗೆ ಬಳಕೆ ಮಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶ ನೀಡಿತ್ತು.
ತುಮಕೂರು ನಗರ ಠಾಣೆಯ ಸಿಪಿಐ ದಿನೇಶ್ ಕುಮಾರ್ ನೇತೃತ್ವದಲ್ಲಿ ವಾಹನಗಳ ಹರಾಜು ಪ್ರಕ್ರಿಯೆ ನಡೆಯಿತು. ಹಳೆಯ ವಾಹನಗಳನ್ನು ಪಡೆಯಲು ಹರಾಜು ಪ್ರಕ್ರಿಯೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx