ತುಮಕೂರು: ವಾರ್ಡ್ ನಂಬರ್ ಒಂದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಕಳಪೆ ಕಾಮಗಾರಿಯಿಂದ ಆಗಿರುವ ರಸ್ತೆ ಗುಂಡಿ ಮತ್ತು ಚರಂಡಿಗಳನ್ನು ಸರಿಪಡಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ವಾರ್ಡ್ ನಂಬರ್ ಒಂದು ಮತ್ತು ಪ್ರಗತಿಪರ ಚಿಂತಕರು ನಾಗರಿಕರು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಪಕ್ಷದ ಮುಖಂಡರು, ವಾರ್ಡ್ ನಂ. 1 ನಗರಸಭೆಯಾಗುವುದಕ್ಕೂ ಮುಂಚೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿತ್ತು, ಆಗ ಈ ನಮ್ಮ ವಾರ್ಡ್ ಪಕ್ಕ ಹಳ್ಳಿಯ ವಾತಾವರಣದಲ್ಲಿ ಇತ್ತು. ಈ ಭಾಗದ ಹೊನ್ನೇನಹಳ್ಳಿ ಗ್ರಾಮದಲ್ಲಿ ಹುಟ್ಟಿದ ನಮ್ಮ ಹೆಣ್ಣು ಮಗಳು ಕನ್ನಡ ಚಿತ್ರರಂಗದ ಖ್ಯಾತ ಚಿತ್ರ ನಟಿ ಮಂಜುಳ ಹುಟ್ಟಿದ ಊರು, ಮಂಜುಳರವರು ನಮ್ಮ ತುಮಕೂರು ಕನ್ನಡ ಚಿತ್ರರಂಗದ ಹಲವು ನಟರೊಂದಿಗೆ ನಟಿಸಿರುವ ಜಿಲ್ಲೆಯವರು ಅದರಲ್ಲೂ ತುಮಕೂರು ನಗರದ ವಾರ್ಡ್ ನಂ. 1ಕ್ಕೆ ಸೇರಿದವರು ಎಂಬ ಹೆಮ್ಮೆ, ಇಡೀ ದೇಶದಲ್ಲೇ ಹೆಸರುವಾಸಿ ಇಂತಹ ನಟಿಯ ನೆನಪು ಅಜರಾಮರವಾಗಿ ಉಳಿಯುವಂತೆ ಮಾಡುವುದು ತುಮಕೂರು ನಗರ ಸಭೆ / ಮಹಾನಗರಪಾಲಿಕೆಯ ಜವಾಬ್ದಾರಿಯಾಗಿದೆ ಎಂದರು.
ತುಮಕೂರು ನಗರಸಭೆ ನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದು ಸುಮಾರು 10 ವರ್ಷಗಳು ಕಳೆಯುತ್ತಾ ಬಂದಿವೆ. ನಗರಸಭೆ ಮತ್ತು ಮಹಾನಗರ ಪಾಲಿಕೆಯಲ್ಲಿ ಇದುವರೆಗೂ ಐದು ಜನ ಸ್ಥಳೀಯ ಪ್ರತಿನಿಧಿಗಳು ಆಯ್ಕೆಯಾಗಿದ್ದರೂ ಮೂಲಭೂತ ಸಮಸ್ಯೆಗಳ ಬಗ್ಗೆ ಗುಣಮಟ್ಟದ ಕಾಮಗಾರಿ ಬಗ್ಗೆ ಗಂಭೀರವಾಗಿ ಕೆಲಸ ಮಾಡಿಲ್ಲ. ಬದಲಿಗೆ ಅಭಿವೃದ್ಧಿ ಹೆಸರಲ್ಲಿ ಬಹುತೇಕ ಕಳಪೆ ಕಾಮಗಾರಿ ನಡೆದಿದ್ದು, ಕಣ್ಣಿಗೆ ಮಾತ್ರ ರಸ್ತೆ ಚರಂಡಿಗಳು ಕಾಣುತ್ತಿವೆ ಅದು ಬಿಟ್ಟರೆ ಆರೆ ಬರೆ ದೀಪಗಳು ಅವ್ಯವಸ್ಥೆ ಕಾಣುತ್ತಿವೆ. ಬೀದಿ ದೀಪ ಕೆಟ್ಟರೆ ತಿಂಗಳಗಟ್ಟಲೆ ರಿಪೇರಿ ಆಗುವುದಿಲ್ಲ. ಬಹುತೇಕ ಒಂದನೇ ವಾರ್ಡ್‌ನಲ್ಲಿ ಎಲ್ಲಾ ಕಾಮಗಾರಿಗಳು ಆವೈಜ್ಞಾನಿಕವಾಗಿ ಚರಂಡಿಯಲ್ಲಿ ನೀರು ಸುಮಾರು ಅರ್ಧದಿಂದ 2 ಅಡಿಯಷ್ಟು ನಿಂತು ಗಬ್ಬು ವಾಸನೆ ಬರುತ್ತಿದೆ. ಇದರಿಂದ ನಾಗರಿಕರಿಗೆ ಹಲವಾರು ಆರೋಗ್ಯ ಸಂಬಂಧಿ ತೊಂದರೆಯಾಗುತ್ತಿದೆ. ಇನ್ನು ಒಂದನೇ ವಾರ್ಡ್ ಬಹುತೇಕ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಅಕ್ಕಿ ಗಿರಣಿಗಳು ಬಹಳಷ್ಟು ಇವೆ, ಈ ಅಕ್ಕಿ ಗಿರಣಿಗಳಿಂದ ಬರುವ ಧೂಳು ಇಡಿ ಒಂದು, ಎರಡು, ಮೂರು, ವಾರ್ಡಿನ ಮನೆ, ಗಿಡ, ರೈತರ ತೋಟಗಳಿಗೆ ಹಾಸಿಗೆ ತರ ಹೊದ್ದುಕೊಳ್ಳುತ್ತದೆ. ಇನ್ನು ದ್ವಿಚಕ್ರ ವಾಹನ ಸವಾರರಿಗೆ ಹಾಗೂ ನಡೆದಾಡುವ ಪಾದಚಾರಿಗಳಿಗೆ ಕಣ್ಣಿಗೆ ದೂಳು ಅವರಿಸಿ ಅಪಘಾತಗಳಾಗಿದ್ದು ಉಂಟು. ಈ ಪದೇಶದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರು, ಶಾಲಾ ಮಕ್ಕಳು, ನಾಗರಿಕರು ಗುಂಡಿ ಮಧ್ಯೆ ಸಿಲುಕಿ ಒದ್ದಾಡುವ ದೃಶ್ಯ ಸಾಮಾನ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.




ಇನ್ನೂ ಕೆಲವು ಕಡೆ ನೀರಿನ ವ್ಯವಸ್ಥೆ ಸರಿಯಾಗಿ ಆಗುತ್ತಿಲ್ಲ.ಇಡೀ ವಾರ್ಡ್ ನಂಬರ್ ಒಂದರಲ್ಲಿ ನಾಗರಿಕರಿಗೆ ವಿಶ್ರಾಂತಿ, ವ್ಯಾಯಾಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಜಾಗ ಮೀಸಲಿಟ್ಟಿಲ್ಲ. ಸಾಕ್ಸ್ ಅಭಿವೃದ್ಧಿ ಆಗಿಲ್ಲ. ಎರಡನೇ ಹಂತದ ಯುಜಿಡಿ ಕಾಮಗಾರಿ ಪೂರ್ಣಗೊಂಡಿಲ್ಲ. ನಡೆದಿರುವ ಕಾಮಗಾರಿಯೂ ಕಳಪೆ ಗುಣಮಟ್ಟಗಳಿಂದ ಕೂಡಿದೆ. (ಮೇಲಿನ ಸಮಸ್ಯೆಗಳ ವಿರುದ್ಧ ಈ ಭಾಗದಲ್ಲಿ ಸುಮಾರು 1) ಹೋರಾಟಗಳು ನಡೆದರೂ ಪಾಲಿಕೆ ಕಣ್ಣಿದ್ದು ಕುರುಡರಂತಿದೆ) ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ. ಆ ರಸ್ತೆಗಳು ಇದುವರೆಗೂ ಸರಿ ಪಡಿಸಿಲ್ಲ. ಆಗಿರುವ ಒಳಚರಂಡಿ ಕಾಮಗಾರಿಗೆ ಮನೆಗಳಿಗೆ ಕನೆಕ್ಷನ್ ನೀಡಿಲ್ಲ. ಇದರಿಂದ ನಾಗರಿಕರು ಮುಂದೆ ಬಹಳ ನಷ್ಟ ಅನುಭವಿಸಬೇಕಾಗುತ್ತದೆ. ಇದು ಬಹುತೇಕ ವಾರ್ಡ್ ಒಂದಕ್ಕೆ ಸಂಬಂಧಪಟ್ಟಂತ ಲಿಂಗಾಪುರ, ಡಿಎಂ ಪಾಳ್ಯ, ಪಂಚನಾಥರಾಯರ ಪಾಳ್ಯ, ಮರಳೆನಹಳ್ಳಿ, ರಂಗಾಪುರ, ಚೆಕ್ ಪೋಸ್ಟ್, ರಂಗಾಪುರ ಗೇಟ್, ಬಸವಣ್ಣನ ದೇವಸ್ಥಾನ, ನಾಗಣ್ಣನ ಛತ್ರ, ಮರಳೇನಹಳ್ಳಿ ಗೊಲ್ಲರಟ್ಟಿ, ಸಂಗೊಳ್ಳಿ ರಾಯಣ್ಣ ಬಡಾವಣೆ – ಸಾಯಿ ಲೇಔಟ್ ಈಗ ಅಭಿವೃದ್ಧಿ ಹೊಂದುತ್ತಿರುವ ಲೇಔಟ್‌ಗಳು, ಎಸ್.ಎನ್.ಪಾಳ್ಯ, ಭಜಂತ್ರಿ ಪಾಳ್ಯ, ಹೊನ್ನೇನಹಳ್ಳಿ, ಗೋಮಾಳ ಇನ್ನು ಮುಂತಾದ ಪ್ರದೇಶಗಳಲ್ಲಿ ಬಹುತೇಕ ಇದೆ ಪರಿಸ್ಥಿತಿ ಇದೆ. ಎಸ್ ಎನ್ ಪಾಳ್ಯದಲ್ಲಿ ಆಗಿರುವ ಒಳಚರಂಡಿಗೆ ಕೆಲವರು ಕನೆಕ್ಷನ್ ಪಡೆದು ಒಳ ಚರಂಡಿ ಸರಿ ಇಲ್ಲದೆ ನೀರು ಹೋಗದೆ ಮನೆಗಳ ಮುಂದೆ ಕಸ ತೇಲುತ್ತಿದ್ದು ಅವರ ಕಷ್ಟ ಹೇಳತಿರದು. ಈ ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರ ವಾಸವಾಗಿದ್ದು, ಬಾಡಿಗೆ ಮನೆ ದುಬಾರಿಯಾಗಿದ್ದು ಕಳೆದ 30 ವರ್ಷಗಳಿಂದ ಯಾರೊಬ್ಬರಿಗೂ ನಿವೇಶನ / ವಸತಿ ಕಲ್ಪಿಸಿಲ್ಲ. ಪಾಲಿಕೆ ಸೂಕ್ತ ಕ್ರಮ ವಹಿಸಿ ಬಡವರನ್ನು ಗುರುತಿಸಿ ನಿವೇಶನ / ವಸತಿ ನೀಡಬೇಕು ತುಮಕೂರು ನಗರದಿಂದ ಡಿ ಎಂ ಪಾಳ್ಯ ಮಾರ್ಗವಾಗಿ ಕುಪೂರಿಗೆ ನಗರ ಸಾರಿಗೆ ಬಸ್ ಬಿಟ್ಟಿದ್ದು, ಇದು ಕೇವಲ ಎರಡು ಬಾರಿ ಮಾತ್ರ ಬರುತ್ತದೆ. ಕನಿಷ್ಠ ಶಾಲಾ ಸಮಯ ಮತ್ತು ಕೆಲಸಕ್ಕೆ ಹೋಗುವ ಸಮಯದಲ್ಲಿ ಬೆಳಗ್ಗೆ ಮತ್ತು ಸಂಜೆ ಹಾಗೂ ಅರ್ಧ ಗಂಟೆಗೊಮ್ಮೆ ಬರುವ ಹಾಗೆ ಮಾಡಬೇಕು ಮತ್ತು ಲಿಂಗಾಪುರ ಮೇಲ್ ಸೇತುವೆ ಎನ್.ಎಚ್.4 ರಸ್ತೆ, ಕಾಮಗಾರಿ ಬೇಗ ಪೂರ್ಣಗೊಳಿಸಬೇಕು. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರು ಮತ್ತು ಪುರುಷ ಕಾರ್ಮಿಕರು ರಾತ್ರಿ ವೇಳೆ ಕೆಲಸಕ್ಕೆ ತೆರಳುವುದರಿಂದ ಈ ಭಾಗದಲ್ಲಿ ಕೆಐಎಡಿಬಿಯವರು ಲೈಟ್ ರಿಪೇರಿ ಮಾಡಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆ:
- ಈ ಭಾಗದಲ್ಲಿ ಬರುವ ಎಲ್ಲಾ ರಸ್ತೆಗಳ ರಿಪೇರಿ ಕೂಡಲೇ ಆಗಬೇಕು ಮತ್ತು ಬಾಕಿ ಇರುವ ರಸ್ತೆಗಳನ್ನು ಪೂರ್ಣಗೊಳಿಸಬೇಕು. ಚರಂಡಿಯಲ್ಲಿ ನೀರು ನಿಲ್ಲದಂತೆ ರಿಪೇರಿ ಆಗಬೇಕು.
- ಖ್ಯಾತ ಚಲನಚಿತ್ರ ನಟಿ ಮಂಜುಳರವರ ಸಮಾಧಿಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ಮಾಡಬೇಕು.
- ರೈಸ್ ಮಿಲ್‌ಗಳಿಂದ ಬರುವ ಆರೋಗ್ಯಕ್ಕೆ ಹಾನಿಕರವಾದ ಧೂಳನ್ನು ನಿಯಂತ್ರಿಸಬೇಕು ಹಾಗೂ ರೈಸ್ ಮಿಲ್ಲುಗಳನ್ನು ಸ್ಥಳಾಂತರ ಮಾಡಬೇಕು
- ಎರಡನೇ ಹಂತದ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣಗೊಳಿಸಿ ಎಲ್ಲಾ ಮನೆಗಳಿಗೂ ಒಳಚರಂಡಿ ಕನೆಕ್ಷನ್ ಕೊಡಬೇಕು.
- ಕೆಲ ಕಡೆ ವಿದ್ಯುತ್ ದೀಪ ಅಳವಡಿಸಿಲ್ಲ. ಸರ್ವೆ ಕೆಟ್ಟೋಗಿರೋ ವಿದ್ಯುತ್ ದೀಪಗಳನ್ನು, ತಕ್ಷಣ
- ನಡೆಸಿ ವಿದ್ಯುತ್ ದೀಪ ಅಳವಡಿಸಬೇಕು, ಸರಿಪಡಿಸಬೇಕು ಹಾಗೂ ಜನಸಂದಣಿ ಹೆಚ್ಚಾಗಿರುವ ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕು, ಈ ಭಾಗದಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಪೊಲೀಸ್ ಬೀಟ್ ಹೆಚ್ಚಳ ಮಾಡಬೇಕು ಮತ್ತು ಹೆಚ್ಚಿರುವ ಪುಂಡರ ಹಾವಳಿ ತಪ್ಪಿಸಬೇಕು.
- ನಾಗರಿಕರಿಗೆ ವ್ಯಾಯಾಮ, ವಾಕ್, ವಿಶಾಂತಿಗೆ ವಾರ್ಕ್ ನಿರ್ಮಾಣ ಆಗಬೇಕು.
- ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಚಿರಂಡಿ ಸ್ವಚ್ಛಗೊಳಿಸಬೇಕು. ಗಿಡ ಗಂಟೆ ಯಲ್ಲು ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಕ್ಲೀನ್ ಮಾಡಬೇಕು.
- ಸಂವಿಧಾನ ಬದ್ಧವಾದ ವಾರ್ಡ್ ಸಭೆಯನ್ನು ಪ್ರತಿ ತಿಂಗಳು ಮಾಡಿ ಜನರ ಕುಂದು ಕೊರತೆ ನಿವಾರಿಸಬೇಕು.
- ಬಡವರನ್ನು ಗುರುತಿಸಿ ವಸತಿ ಅಥವಾ ನಿವೇಶನ ಸರ್ವೆ ನಡೆಸಿ ನೀಡಬೇಕು. ನಾಗರೀಕರಿಗೆ ಪಾಲಿಕೆ ಕಾನೂನುಗಳಿಗೆ ತರಬೇತಿ ಕೊಡಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ನಾಗರಿಕರಿಗೆ ಪಾಲಿಕೆಯ ಕೆಲಸ ಆಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು
- ರಾಷ್ಟ್ರೀಯ ಹೆದ್ದಾರಿಯಲ್ಲಿ ವೆಂಕಟೇಶ್ವರ ವೇ ಬ್ರಿಡ್ಜ್ ಕಾರ್ಯನಿರ್ವಹಿಸುತ್ತಿದ್ದು ಇದನ್ನು ತೆರವುಗೊಳಿಸಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಹಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಲಾರಿಗಳನ್ನು ನಿಲ್ಲಿಸುವುದನ್ನು ತಪ್ಪಿಸಬೇಕು ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಕಟ್ಟು ಹೋಗಿರುವ ಬೀದಿ ದೀಪಗಳನ್ನು ಸರಿಪಡಿಸಬೇಕು.
- ನಗರ ಸಾರಿಗೆ ಬಸ್‌ಗಳು ಅರ್ಧ ಗಂಟೆಗೆ ಒಮ್ಮೆ ಬರುವ ಹಾಗೆ ಮಾಡಬೇಕು. ಹಾಗೂ ಮರಳೇನಹಳ್ಳಿ ಹಾಗೂ ಗೋಮಾಳದ ಕಡೆ ವಿಸ್ತರಿಸಬೇಕು ಮತ್ತು ವಾರ್ಡ್‌ನಲ್ಲಿ ಸರ್ವೆ ನಡೆಸಿ ಅವಶ್ಯಕತೆ ಇರುವ ಕಡೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



