ತುಮಕೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ತುಮಕೂರು ಜಿಲ್ಲಾ ಸಹಕಾರ ಯೂನಿಯನ್, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ತುಮಕೂರು ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳ ಸಹಯೋಗದಲ್ಲಿ ನಾಳೆ (ನ.18) ಬೆಳಗ್ಗೆ 11 ಗಂಟೆಗೆ ಜ್ಞಾನಧಾರ ಸಭಾಭವನ, ಮಹಿಳಾ ಸಮಾಜ, ಎಂ.ಜಿ.ರಸ್ತೆ, ತುಮಕೂರು ಇಲ್ಲಿ 72ನೆ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಉದ್ಯಮ ಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗ ಸಬಲೀಕರಣ ದಿನವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ತಮಕೂರು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಎಸ್.ಆರ್. ಶಾಂತಲಾ ರಾಜಣ್ಣ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲ ಸಹಕಾರ ಯೂನಿಯನ್ ನ ಅಧ್ಯಕ್ಷರಾದ ಬಿ.ಜಿ.ವೆಂಕಟೇಗೌಡ ಅವರು ವಹಿಸುವರು.
ವಿಶೇಷ ಆಹ್ವಾನಿತರಾಗಿ ಎನ್.ಗಂಗಣ್ಣ, ಎಂ.ಎಸ್.ವಿಜಯಕುಮಾರ್, ಟಿ.ಎನ್.ಆಶಾಕಿರಣ್, ಹೆಚ್.ಆರ್.ಶಾಲಿನಿ, ಮುಖ್ಯ ಅತಿಥಿಗಳಾಗಿ ಬಿ.ಸಿ.ಉಮೇಶ್, ಎಸ್.ಲಕ್ಷ್ಮೀನಾರಾಯಣ್, ಹೆಚ್.ಕೆ.ರೇಣುಕಾಪ್ರಸಾದ್, ಪಿ.ಮೂರ್ತಿ, ನರಸಮ ಕವನಯ್ಯ, ಸುನೀತಾ ನಟರಾಜ್, ಉಮಾದೇವಿ, ಎಂ.ರವಿ ಮತ್ತಿತರರು ಆಗಮಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


