ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು, ಪೋಲೇನ ಹಳ್ಳಿಯಲ್ಲಿ ದಲಿತ ಯುವಕ ಆನಂದ ಎಂಬುವನನ್ನು ಕುಡಿಯುವ ನೀರು ಕೇಳಿದಕ್ಕೆ ಬರ್ಬರವಾಗಿ ಕೊಲೆ ಮಾಡಲಾಗಿದೆ, ಪಾವಗಡ ತಾಲ್ಲೂಕು ಬೆಳ್ಳಿಬಟ್ಟಲು ಗ್ರಾಮದ ದಲಿತ ಹನುಮಂತರಾಯಪ್ಪ ಎಂಬುವರನ್ನು ಕುಲ್ಲಕ ಕಾರಣಕ್ಕಾಗಿ ಹತ್ಯೆಗೈಯಲಾಗಿದೆ, ಈ ಘನ ಘೋರವಾದ ಕೃತ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ತುಮಕೂರು ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, ಹತ್ಯೆಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನಿಯಮದಂತೆ ಸರ್ಕಾರಿ ಉದ್ಯೋಗ ನೀಡಲು ಜಿಲ್ಲಾ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲೆಯಲ್ಲಿ ಎಸ್ ಸಿ/ಎಸ್ ಟಿ, ದೌರ್ಜನ್ಯ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಮತ್ತು ಸುಳ್ಳು ಕೌಂಟರ್ ಕೇಸ್ ಅನ್ನು ತಡೆಯಲು ಕ್ರಮವಹಿಸಬೇಕು, ಜಿಲ್ಲೆಯ ಮೂರು ಉಪವಿಭಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಪಿ.ಟಿ.ಸಿ.ಎಲ್ ಕಾಯ್ದೆ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಿ ದಲಿತರಿಗೆ ಜಮೀನನ್ನು ಸ್ವಾಧೀನ ಕೂಡಿಸಿಕೊಡಬೇಕು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಹಾಗೂ ಜಮೀನು ಮಂಜುರಾತಿ ಫಾರಂ, 50.53,57. ಅರ್ಜಿ ಸಲ್ಲಿಸಿರುವ ಎಲ್ಲಾ ದಲಿತರಿಗೂ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯ ಮಾಡಿದರು.
ಎಸ್ ಪಿ/ ಎಸ್ ಸಿ/ ಟಿ ಎಸ್ ಪಿ. ಕಾಯ್ದೆಯ ಕಾಲಂ — 7 ಡಿ ರದ್ದುಗೊಳಿಸಿದಂತ 7 ಸಿ ಯನ್ನು ರದ್ದುಗೊಳಿಸಬೇಕು, ಐ ಪಿ.ಡಿ ಸಾಲಪ್ಪ,ರವರ ವರದಿಯಂತೆ ರಾಜ್ಯದ ಎಲ್ಲಾ ಸ್ಥಳಿಯಾ ಸಂಸ್ಥೆಗಳ ಗುತ್ತಿಗೆ ದಿನಗೂಲಿ, ಪೌರ ಕಾರ್ಮಿಕ, ಚಾಲಕ, ಸಹಾಯಕ ಲೋಡರ್ಸ್, ಸ್ಯಾನಿಟರಿ ವರ್ಕರ್ಸ್ ಗಳನ್ನು ಖಾಯಂಗೊಳಿಸಬೇಕು, ಕಳೆದ 4 ದಶಕಗಳಿಂದ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತ ದಲಿತ ಸಂಘರ್ಷ ಸಮಿತಿ ಮತ್ತು ಮಾದಿಗ ಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದು, ಸುಪ್ರಿಂ ಕೋರ್ಟ್ ಆದೇಶದಂತೆ ಸಂಪೂರ್ಣವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
 
		 
					
					 


