ತುಮಕೂರು: ‘ತುಮಕೂರು ದಸರಾ’ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ನಟ ವಿ.ರವಿಚಂದ್ರನ್, ನಟಿ ರಮ್ಯಾ ಅವರನ್ನು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ರವಿಚಂದ್ರನ್ ನಟನೆಯ ‘ಜಾಣ’ ಚಿತ್ರದ ‘ಪ್ರೇಮಲೋಕದ ಪಾರಿಜಾತವೇ’ ಗೀತೆಗೆ ರವಿಚಂದ್ರನ್, ರಮ್ಯಾ ಹೆಜ್ಜೆ ಹಾಕಿ ನೆರೆದವರನ್ನು ರಂಜಿಸಿದರು. ಪ್ರೇಕ್ಷಕರು ಸಿಳ್ಳೆ, ಚೆಪ್ಪಾಳೆಯ ಸದ್ದು ಮೊಳಗಿಸಿದರು.
ಇದಕ್ಕೂ ಮುನ್ನ ರವಿಚಂದ್ರನ್ ತಮ್ಮ ‘ಮಲ್ಲ’ ಚಿತ್ರದ ‘ಕರುನಾಡೇ ಕೈ ಚಾಚಿದೆ ನೋಡೇ’, ‘ಕನಸುಗಾರನಾಗಿ ಕರುನಾಡಲ್ಲೇ ಮತ್ತೆ ಹುಟ್ಟಬೇಕು ನಾನು’ ಎಂಬ ಗೀತೆಗೆ ನೃತ್ಯ ಪ್ರದರ್ಶಿಸಿದರು.
ರವಿಚಂದ್ರನ್ ಮಾತನಾಡಿ, ‘ಪ್ರೇಮಲೋಕ–2 ಚಿತ್ರ ಬಂದೇ ಬರುತ್ತದೆ. ಈಗಾಗಲೇ 24 ಹಾಡು ಸಿದ್ಧವಾಗಿದೆ. ಚಿತ್ರೀಕರಣಕ್ಕೆ ಸೂಕ್ತ ಜಾಗ ಸಿಗುತ್ತಿಲ್ಲ. ಚಿತ್ರೀಕರಣಕ್ಕೆ ಒಂದು ಊರು ಕಟ್ಟಬೇಕಾಗುತ್ತದೆ. ತಯಾರಿ ನಡೆಯುತ್ತಿದೆ’ ಎಂದು ಹೇಳಿದರು.
ಯಾವತ್ತಿಗೂ ಸಿನಿಮಾದ ಮೇಲಿನ ಹಠ, ಛಲ ಕಡಿಮೆಯಾಗಲ್ಲ. ಕುಟುಂಬಕ್ಕೆ ಬೇಕಾದರೆ ಮೋಸ ಮಾಡಿರಬಹುದು. ಆದರೆ ಸಿನಿಮಾಗೆ ಎಂದಿಗೂ ಮೋಸ ಮಾಡಿಲ್ಲ. ಮಾಡಲ್ಲ. ಕಾರ್ಯಕ್ರಮಕ್ಕೆ ತುಂಬಾ ರಾಯಲ್ ಆಗಿ ಸ್ವಾಗತಿಸಿದ್ದಾರೆ. ರಣಧೀರನಾಗಿಯೇ ವೇದಿಕೆಗೆ ಬಂದಿದ್ದೇನೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC