ತುಮಕೂರು: ರಾಜ್ಯ ಯುವ ಬರಹಗಾರರ ಒಕ್ಕೂಟ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಇವರ ಸಹಯೋಗದಲ್ಲಿ ಡಿ.25 ರಂದು ಬೆಳಗ್ಗೆ 10:30ಕ್ಕೆ ಕನ್ನಡ ಭವನದಲ್ಲಿ ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.
ಉದ್ಘಾಟನೆಯನ್ನು ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ನೆರವೇರಿಸುವರು. ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ವಹಿಸುವರು. ಹೂವಳ್ಳಿ ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಡಾ.ಲಕ್ಷ್ಮಣದಾಸ್, ಡಾ.ಎಸ್.ನಾಗಣ್ಣ, ಉಮೇಶ್ ಚಂದ್ರ ಎನ್. ಆರ್. ಆಗಮಿಸುವರು.
ಪ್ರೊ.ಕೊಟ್ರೇಶ್ ಎಂ., ಸೂರ್ಯನಾರಾಯಣ, ಡಾ.ಕೆ.ಕಂಟಲಗೆರೆ ಸಣ್ಣ ಹೊನ್ನಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಡಾ.ಹೆಚ್.ನಟರಾಜು, ನಾಹಿದಾ ಜಮ್ ಜಮ್ ಅವರು ಕರುನಾಡ ಯುವರತ್ನ ರಾಜ್ಯ ಪುರಸ್ಕಾರ ನೀಡುವರು. ವಿಶೇಷ ಅಭಿನಂದಿತರಾಗಿ ತುಂಬಾಡಿ ರಾಮಯ್ಯ, ಜಗದೀಶ್ ಕೆ.ಜಿ., ಆರ್.ಲೋಕೇಶ್ ಭಾಗವಹಿಸುವರು.
ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎನ್.ಎನ್.ಪ್ರಸಾದ್, ಶಿವಕುಮಾರ್, ವಿಶ್ವಾಸ್ ಟಿ.ಎನ್. ಡಾ.ರವಿಕುಮಾರ್ ನೀಹ, ಡಾ.ಲೋಕೇಶ್, ಪ್ರೊ.ಶೇಖರ್ ಬಿ., ಗಂಗರಾಜು, ನರಸಿಂಹಮೂರ್ತಿ ಕೆ.ಸಿ., ವಿನಯ್ ಟಿ.ಡಿ. ಡಾ.ಪಕಿರೇಶ್, ರಂಗಜನಾ ನಾಯಕ್, ಪ್ರೊ.ಶಶಿಕುಮಾರ್ ಎಸ್. ಬಿ.ಕೆ.ಚಂದ್ರಪ್ಪ ಅವರುಗಳು ಭಾಗವಹಿಸುವರು. ಮುಖ್ಯಭಾಷಣಕಾರರಾಗಿ ಡಾ.ಗೋವಿಂದಯ್ಯ ಆಗಮಿಸುವರು. ನಂತರ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಶಿವಣ್ಣ ವಹಿಸುವರು. ಕವಿಗೋಷ್ಠಿಗೆ ಚಾಲನೆಯನ್ನು ರಂಗಮ್ಮ ಹೊದೇಕಲ್ ನೀಡುವರು. ವಿರೂಪಾಕ್ಷ, ಡಾ.ಹನುಮಂತರಾಯಪ್ಪ, ರಂಗನಾಥ ಭಾಗವಹಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


