ತುಮಕೂರು: ವ್ಯಕ್ತಿಯೊಬ್ಬರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶಿರಾ ತಾಲ್ಲೂಕಿನ ಮಾರನಗೆರೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನಿತಿನ್ ತುಳಸಿರಾಮ್ (40) ಎಂದು ಗುರುತಿಸಲಾಗಿದೆ. ನಿತಿನ್ ತುಳಸಿರಾಮ್ ಅವರ ಪತ್ನಿ ಯಶೋಧ ಅವರ ಮೊದಲ ಗಂಡನ ಮಗ ಹರೀಶ್ ಕೊಲೆಗೈದಿರುವ ಆರೋಪಿ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಾಚಿ ಸಾಗರ್ ಘಡ್ ಗ್ರಾಮದ ನಿತಿನ್ ಶಿರಾ ತಾಲ್ಲೂಕಿನ ಮಾರನಗೆರೆಯಲ್ಲಿ ಮೂರು ವರ್ಷಗಳಿಂದ ಇದ್ದಿಲು ಸುಡುವ ಕೆಲಸ ಮಾಡಿಕೊಂಡಿದ್ದರು.
ನಿತಿನ್ ಯಶೋಧ ಎಂಬುವವರನ್ನು ಎರಡನೇ ಮದುವೆಯಾಗಿದ್ದರು. ಯಶೋಧ ಮೊದಲ ಗಂಡ ರಾಮ್ ವಸಂತ್ ನಾಯ್ಕ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದು, ಮೊದಲ ಗಂಡನಿಂದ ನರೇಶ್ ಮತ್ತು ಹರೀಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
ರೇಷನ್ ವಿಚಾರವಾಗಿ ಜಗಳ ಪ್ರಾರಂಭವಾಗಿ ಹೊಡೆದಾಟದ ಹಂತಕ್ಕೆ ಹೋಗಿದೆ. ಆಗ ಯಶೋದಳ ಮೊದಲ ಗಂಡನ ಮಗ ಹರೀಶ್ ನಮ್ಮ ತಂದೆ ಸತ್ತ ನಂತರ ತಾಯಿಯನ್ನು ಕರೆದುಕೊಂಡು ಬಂದು ಮದುವೆಯಾಗಿದ್ದಲ್ಲದೆ, ಹೊಡೆಯುತ್ತೀಯಾ ಎಂದು ನಿತಿನ್ ಮೇಲೆ ಜಗಳ ತೆಗೆದು ತಕ್ಷಣ ಕೊಡಲಿಯಿಂದ ಹೊಟ್ಟೆಯ ಭಾಗಕ್ಕೆ ಹೊಡೆದಿದ್ದಾನೆ. ಪರಿಣಾಮವಾಗಿ ತೀವ್ರ ರಕ್ತಸ್ರಾವವಾಗಿ ಗಾಯಗೊಂಡಿದ್ದ ನಿತಿನ್ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನಕ್ಷಣಕ್ಷಣದಸುದ್ದಿಗಳನ್ನುನಿರಂತರವಾಗಿಪಡೆಯಲುನಿಮ್ಮವಾಟ್ಸಾಪ್ಗ್ರೂಪ್ಗೆ 8123382149 ಸಂಖ್ಯೆಯನ್ನುಸೇರಿಸಿ.
ಗ್ರೂಪ್ಗೆಜಾಯಿನ್ಆಗಿ: https://chat.whatsapp.com/ISmeQjik4LbG9KvWhKlbCC


