ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಅ.1ರಿಂದ ರೈತರ ನೋಂದಣಿ ಆರಂಭವಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 4,886 ನಿಗದಿಪಡಿಸಲಾಗಿದೆ. ನೋಂದಣಿ ಮಾಡಿಸಲು ಡಿಸೆಂಬರ್ 15ರ ವರೆಗೆ ಕಾಲಾವಕಾಶವಿದೆ. 2026ನೇ ಜನವರಿ 1ರಿಂದ ಮಾರ್ಚ್ 31ರ ವರೆಗೆ ರಾಗಿ ಖರೀದಿ ನಡೆಯಲಿದೆ.
11 ನೋಂದಣಿ ಕೇಂದ್ರ: ಚಿಕ್ಕನಾಯಕನಹಳ್ಳಿ ಹೊಸ ಸರ್ಕಾರಿ ಆಸ್ಪತ್ರೆ ಹಿಂಭಾಗ ಇರುವ ಎಪಿಎಂಸಿ ಗೋದಾಮು, ಹುಳಿಯಾರು ಎಪಿಎಂಸಿ, ಕುಣಿಗಲ್ ಎಪಿಎಂಸಿ (2 ಕೇಂದ್ರ), ತಿಪಟೂರು ಎಪಿಎಂಸಿ, ತುರುವೇಕೆರೆ ಎಪಿಎಂಸಿ, ಗುಬ್ಬಿ ಎಪಿಎಂಸಿ, ಮಧುಗಿರಿ ಎಪಿಎಂಸಿ, ಶಿರಾ ಎಪಿಎಂಸಿ, ಕೊರಟಗೆರೆ ಅಕ್ಕಿರಾಂಪುರ ಪಿಡಿಎಸ್ ಗೋದಾಮು, ತುಮಕೂರು ಬಟವಾಡಿ ಎಪಿಎಂಸಿ ಗೋದಾಮಿನಲ್ಲಿ ರೈತರು ನೋಂದಣಿ ಮಾಡಿಸಬಹುದು.
ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ನೋಂದಣಿಗೆ ಅಗತ್ಯ ಕ್ರಮಕ್ಕೆ ನಿರ್ದೇಶಿಸಿದರು. ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಎಪಿಎಂಸಿ ಉಪನಿರ್ದೇಶಕ ರಾಜಣ್ಣ, ಕರ್ನಾಟಕ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವಿ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC