nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುರುವೇಕೆರೆ: ಮೈತ್ರಿ ಟಿಕೆಟ್ ಗಾಗಿ ಜಟಾಪಟಿ | ಕೃಷ್ಣಪ್ಪ, ಚಂದ್ರೇಶ್ ಪೈಪೋಟಿ ನಡುವೆಯೇ ಮಸಾಲ ಜಯರಾಮ್ ಅಖಾಡಕ್ಕೆ!

    February 14, 2026

    ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!

    February 14, 2026

    ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ

    February 14, 2026
    Facebook Twitter Instagram
    ಟ್ರೆಂಡಿಂಗ್
    • ತುರುವೇಕೆರೆ: ಮೈತ್ರಿ ಟಿಕೆಟ್ ಗಾಗಿ ಜಟಾಪಟಿ | ಕೃಷ್ಣಪ್ಪ, ಚಂದ್ರೇಶ್ ಪೈಪೋಟಿ ನಡುವೆಯೇ ಮಸಾಲ ಜಯರಾಮ್ ಅಖಾಡಕ್ಕೆ!
    • ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!
    • ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ
    • ಇ–ಪೌತಿ ಯೋಜನೆ: ಜನಪರ ಕೆಲಸ ಮಾಡಿದ  ತಹಶೀಲ್ದಾರ್ ಕುಂಞಿ ಅಹಮದ್, ಎಡಿಎಲ್‌ಆರ್ ಜಗದೀಶ್ ಅವರಿಗೆ ಅಭಿನಂದನೆ
    • ವಿಷ್ಣುವರ್ಧನ್ ಅವರಿಗೆ ಸಾಹಸಸಿಂಹ ಬಿರುದು ನೀಡಿದ್ದ  ಖ್ಯಾತ ನಿರ್ದೇಶಕ ಜೋಸೈಮನ್ ನಿಧನ
    • ನಕಲಿ ಸುದ್ದಿ ಮತ್ತು ಅಪಪ್ರಚಾರ ಸಹಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ
    • ಅಣೆಕಟ್ಟುಗಳ ಸುರಕ್ಷತಾ ಮಾನದಂಡಗಳು ರಾಜಕೀಯ ಗಡಿಗಳಿಗೆ ಸೀಮಿತವಾಗಿರಬಾರದು: ಸಿಎಂ ಸಿದ್ದರಾಮಯ್ಯ
    • ಶಾಸಕ ಅನಿಲ್ ಚಿಕ್ಕಮಾದುರವರ 38ನೇ ಹುಟ್ಟುಹಬ್ಬ: ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!
    ತುಮಕೂರು February 14, 2026

    ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!

    By adminFebruary 14, 2026No Comments1 Min Read
    tumkur road

    ತುಮಕೂರು: ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ಉಬ್ಬುಗಳು (ಹಂಪ್‌ ಗಳು) ಸಾರ್ವಜನಿಕರ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ನಿನ್ನೆ ರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ, ಅತಿಯಾದ ಎತ್ತರದ ಹಂಪ್ ಮೇಲೆ ಆಟೋ ರಿಕ್ಷಾ ಹಾರಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸಮಸ್ಯೆಗಳ ಸರಮಾಲೆ:


    Provided by
    Provided by

    ಈ ಭಾಗದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸುವಾಗ ಯಾವುದೇ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಂಪ್‌ಗಳಿಗೆ ಎಚ್ಚರಿಕೆ ನೀಡುವ ಬಣ್ಣದ ಪಟ್ಟಿಗಳನ್ನು (Reflective paint) ಬಳಿದಿಲ್ಲ ಮತ್ತು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಇದರ ಜೊತೆಗೆ, ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದು ರಾತ್ರಿಯ ಸಂಚಾರವನ್ನು ಇನ್ನಷ್ಟು ದುಸ್ತರಗೊಳಿಸಿದೆ. ಹಗಲಿನಲ್ಲಿ ರಸ್ತೆ ಬದಿಯ ಮರದ ನೆರಳು ಹಂಪ್‌ಗಳ ಮೇಲೆ ಬೀಳುವುದರಿಂದ ವಾಹನ ಸವಾರರಿಗೆ ರಸ್ತೆ ಉಬ್ಬುಗಳು ಗೋಚರಿಸದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ.

    ಸರಿಯಾದ ಡಿವೈಡರ್ ಇಲ್ಲದಿರುವುದು ಸಂಚಾರ ದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗಿದೆ. ರೈತರು ಮತ್ತು ವ್ಯಾಪಾರಿಗಳಿಂದ ಸದಾ ಗಿಜಿಗುಟ್ಟುವ ಎಪಿಎಂಸಿ ಮಾರುಕಟ್ಟೆ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

    ಸಾರ್ವಜನಿಕರ ಆಗ್ರಹ:

    “ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಮಾಯಕರು ಅಪಘಾತಕ್ಕೀಡಾಗುತ್ತಿದ್ದಾರೆ. ಕೂಡಲೇ ಅಪಾಯಕಾರಿ ಹಂಪ್‌ಗಳನ್ನು ತೆರವುಗೊಳಿಸಬೇಕು ಅಥವಾ ವೈಜ್ಞಾನಿಕವಾಗಿ ಮಾರ್ಪಡಿಸಬೇಕು. ಬೆಳಕಿನ ವ್ಯವಸ್ಥೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುವುದು ಖಚಿತ,” ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ

    February 14, 2026

    ಜ್ಯೋತಿಷಿ ಮಾತು ನಂಬಿ ತಾಯಿಯನ್ನೇ ಕೊಂದ ಮಗಳು: ಸಿನಿಮೀಯ ರೀತಿ ಕಥೆ ಬಯಲಾಗಿದ್ದು ಹೇಗೆ?

    February 13, 2026

    ಬೆಂಗಳೂರು ರೇಸ್‌ ಕೋರ್ಸ್ ತುಮಕೂರಿನ ಕುಣಿಗಲ್‌ ಗೆ ಸ್ಥಳಾಂತರ: ಸಂಪುಟ ನಿರ್ಣಯ

    February 13, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುರುವೇಕೆರೆ

    ತುರುವೇಕೆರೆ: ಮೈತ್ರಿ ಟಿಕೆಟ್ ಗಾಗಿ ಜಟಾಪಟಿ | ಕೃಷ್ಣಪ್ಪ, ಚಂದ್ರೇಶ್ ಪೈಪೋಟಿ ನಡುವೆಯೇ ಮಸಾಲ ಜಯರಾಮ್ ಅಖಾಡಕ್ಕೆ!

    February 14, 2026

    ತುರುವೇಕೆರೆ: ಮುಂಬರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ನಾನೇ ಅಭ್ಯರ್ಥಿ ಇದನ್ನು ಯಾರು ತಡೆಯಲು ಸಾಧ್ಯವಿಲ್ಲ…

    ತುಮಕೂರು: ಅವೈಜ್ಞಾನಿಕ ಹಂಪ್‌ ನಿಂದ ಸರಣಿ ಅಪಘಾತ: ಹಂಪ್ ನಿಂದ ಹಾರಿ ಗುಂಡಿಗೆ ಬೀಳುತ್ತಿರುವ ವಾಹನಗಳು!

    February 14, 2026

    ಶಾಲಾ–ಅಂಗನವಾಡಿ ಆಹಾರ ‘ಅತೀ ಸೂಕ್ಷ್ಮ ವರ್ಗ’ಕ್ಕೆ ಸೇರಲಿ: ಉಗ್ರಾಣ ಪರಿಶೀಲನೆ ಬಳಿಕ ಡಾ.ತಿಪ್ಪೇಸ್ವಾಮಿ ಸೂಚನೆ

    February 14, 2026

    ಇ–ಪೌತಿ ಯೋಜನೆ: ಜನಪರ ಕೆಲಸ ಮಾಡಿದ  ತಹಶೀಲ್ದಾರ್ ಕುಂಞಿ ಅಹಮದ್, ಎಡಿಎಲ್‌ಆರ್ ಜಗದೀಶ್ ಅವರಿಗೆ ಅಭಿನಂದನೆ

    February 14, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.