ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 18ನೇ ವಿವಿ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಾಹಿತ್ಯ ಹಂಪ ನಾಗರಾಜಯ್ಯ, ಉದ್ಯಮಿ ದಿಲೀಪ್ ಜಿ. ಸುರಾನ ಹಾಗೂ ಪತ್ರಕರ್ತ ನಾಗಣ್ಣ ಅವರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
59 ಡಾಕ್ಟರೇಟ್ ಗಳನ್ನು ಪ್ರಧಾನ ಮಾಡಲಾಯಿತು. ಕಲಾವಿ ಭಾಗದಲ್ಲಿ 37, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದಲ್ಲಿ ಎರಡು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 20 ಸೇರಿದಂತೆ 59 ಮಂದಿಗೆ ರಾಜ್ಯಪಾಲರು ಪಿ ಎಚ್ ಡಿ ಪ್ರದಾನ ಮಾಡಿದರು.
11,349 ಮಂದಿಗೆ ಪದವಿ ಪ್ರದಾನವನ್ನು ಕೂಡ ಮಾಡಿದರು. ನಾಟಕ ಸ್ನಾತಕೋತ್ತರ ಸೇರಿ 11,349 ವಿದ್ಯಾರ್ಥಿಗಳು ಪದವಿ ಪಡೆದರು. 76 ವಿದ್ಯಾರ್ಥಿಗಳು ಒಟ್ಟು 109 ಚಿನ್ನದ ಪದಕವನ್ನು ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ, ಶಿಕ್ಷಕ ಯುವ ಸಮೂಹ ಸ್ವಚ್ಛ, ಸಶಕ್ತಾ ಭಾರತ ನಿರ್ಮಾಣಕ್ಕೆ ಮುಂದಾಗಬೇಕೆಂದು ರಾಜ್ಯಪಾಲ ಕರೆ ನೀಡಿದರು.
ಶಿಕ್ಷಣವು ಅತ್ಯಮೂಲ್ಯ ಸಂಪತ್ತು ಆಗಿದೆ. ಶಿಕ್ಷಣದಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು, ದೇಶದಲ್ಲಿ ಅಭಿವೃದ್ಧಿಪಥದಲ್ಲಿ ಸಾಗಲು ಶಿಕ್ಷಣ ಮುಖ್ಯವಾಗಿದೆ ಎಂದು ಹೇಳಿದರು.
ಶಿಕ್ಷಣ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ, ಜಗತ್ತಲ್ಲಿ ಹೊಸ ಆವಿಷ್ಕಾರಗಳು ಹೊಸ ತಂತ್ರಜ್ಞಾನಗಳು ಪ್ರತಿದಿನ ಹೊರಹೊಮ್ಮುತ್ತವೆ ಎಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದ ಯುವಕರು ಯಾವುದೇ ಕ್ಷೇತ್ರಗಳಿಗೆ ಹೋದರೂ ಸ್ವಚ್ಛ ಭಾರತ ಸಶಕ್ತ ಭಾರತ ನಿರ್ಮಾಣ ಸಂಕಲ್ಪ ಹೊಂದಬೇಕು ಎಂದು ರಾಜ್ಯಪಾಲರು ಕರೆ ನೀಡಿದರು.
ನಮ್ಮ ದೇಶವು ಸಾವಿರಾರು ವರ್ಷಗಳಿಂದ ಜ್ಞಾನದ ದೀಪವನ್ನು ಹಚ್ಚುತ್ತಾ ಬಂದಿದೆ. ಅದರಲ್ಲಿ ಯೋಗ ವಾಸ್ತು ದರ್ಶನ ನ್ಯಾಯಶಾಸ್ತ್ರ ಸೇರಿದಂತೆ ಉತ್ತಮ ಶಿಕ್ಷಣ ನೀತಿಯ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು. ಯುವಕರು ಆಧುನಿಕ ಭಾರತ ನಿರ್ಮಾಣದ ಚಿಂತನೆ ಹೊಂದಬೇಕಿದೆ ಎಂದು ಹೇಳಿದರು.
ಈಗಾಗಲೇ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕೇವಲ ಐದು ರೂಪಾಯಿಗಳಿಗೆ ವಿದ್ಯಾರ್ಥಿಗಳಿಗೆ ಮಿಡ್ಡೇಮಿಲ್ ನೀಡಲಾಗುತ್ತಿದೆ. ಈ ರೀತಿಯ ಮಹತ್ವದ ಯೋಜನೆಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜ್ಞಾನದ ಸೇವಾ ಭಾವನೆಯೊಂದಿಗೆ ರಾಷ್ಟ್ರಭಕ್ತಿಯೊಂದಿಗೆ ವಿದ್ಯಾರ್ಥಿಗಳು ತಮ್ಮ ಬದುಕನ್ನು ಸಾರ್ಥಕ ಗೊಳಿಸಬೇಕಿದೆ ಎಂದು ಕರೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC