ತುರುವೇಕೆರೆ : ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ದಂಡಾಧಿಕಾರಿಗಳಾದ ವೈ.ಎಂ., ರೇಣು ಕುಮಾರ್ ರವರ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಡಳಿತ ಸೌಧದ ಸಭಾಂಗಣದಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ದೀಪವನ್ನು ಬೆಳಗಿಸಿ ಪುಷ್ಪಾರ್ಚನೆಯನ್ನು ಮಾಡಿ ನಮನ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕುಮಾರಿ ತ್ರಿವೇಣಿ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಶಂಕರ್, ದಲಿತ ಮುಖಂಡರುಗಳಾದ ಬೀಚನಹಳ್ಳಿ ರಾಮಣ್ಣ , ಮಹದೇವಯ್ಯ ,ಡಾಕ್ಟರ್ ಚಂದ್ರಯ್ಯ ,ಶಿಕ್ಷಕರಾದ ಬೋರಪ್ಪ ,ಬಾಣಸಂದ್ರ ಕೃಷ್ಣ ಮಾದಿಗ , ಕುಣಿ ಕೇನಹಳ್ಳಿ ಜಗದೀಶ್ , ಸವಿತಾ ಸಮಾಜದ ಧನಂಜಯ್ , ವಾಲ್ಮೀಕಿ ಸಮಾಜದ ಮುಖಂಡರುಗಳಾದ ಶಿವಣ್ಣ ,ವಸಂತ್ ಕುಮಾರ್ ಇತರರು ಹಾಗೂ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy