ತುರುವೇಕೆರೆ: ಪಟ್ಟಣದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ತುರುವೇಕೆರೆ ತಾಲೂಕು ಮತ್ತು ಪಶುವೈದ್ಯ ಪರೀಕ್ಷಕರ ತರಬೇತಿ ಕೇಂದ್ರ ತುಮಕೂರು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಡಿ.7 ಮತ್ತು 8 ರಂದು ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ತಾಲೂಕಿನ ರೈತರಿಗೆ ಉಚಿತವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ರೈತರು ತಮ್ಮ ವ್ಯಾಪ್ತಿಯ ಪಶುವೈದ್ಯರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಲು ಕೋರಿದೆ. ತರಬೇತಿಗೆ ಬರುವ ಆಸಕ್ತ ರೈತರು 1. ಆಧಾರ್ ಕಾರ್ಡ್, 2. ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ, 3. ಎರಡು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, 4. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿದ್ದರೆ ಜಾತಿ ಪ್ರಮಾಣ ಪತ್ರ ಇವುಗಳನ್ನು ಕಡ್ಡಾಯವಾಗಿ ತರಬೇಕಾಗಿದೆ.
ಆಸಕ್ತ ರೈತರು ತರಬೇತಿಯ ಸದುಪಯೋಗವನ್ನು ಪಡೆಯಲು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ರೇವಣಸಿದ್ದಯ್ಯ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


