ಸರಗೂರು: ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಮೈಸೂರು ಗ್ರಾಮಾಂತರ ಜಿಲ್ಲೆರವರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು ನಂಜನಗೂಡು ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಗುರುವಾರ ಅಬಕಾರಿ ನಿರೀಕ್ಷಕರು ಮತ್ತು ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಹೆಚ್.ಡಿ.ಕೋಟೆ ವಲಯ ರವರು ಕಂದಲಿಕೆ (ತೆಕ್ಕಲು) ಗ್ರಾಮದಲ್ಲಿ ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಮಕ್ಷಮ ದಾಳಿ ನಡೆಸಿದ್ದಾರೆ.
ಈ ವೇಳೆ ರಾಜೇಶ್ ಬಿನ್ ನಿಂಗ ನಾಯಕ ಎಂಬುವನು ತನ್ನ ವಾಸದ ಮನೆಯ ಹಿಂಭಾಗದ ಹಿತ್ತಲಿನಲ್ಲಿ ಸುಮಾರು 3 ಹಸಿ ಗಾಂಜಾ ಗಿಡಗಳನ್ನ ಬೆಳೆದಿರುವುದು (ಒಟ್ಟು ತೂಕ 4.665 kg) ಪತ್ತೆಯಾಗಿದೆ.
ಅಲ್ಲದೇ ಅದೇ ಗ್ರಾಮದ ರಮೇಶ ಬಿನ್ ಬೆಟ್ಟನಾಯಕ ಎಂಬುವವನು ತನ್ನ ವಾಸದ ಮನೆಯ ಹಿಂಭಾಗದ ಜಮೀನಿನಲ್ಲಿ 30 ಹಸಿ ಗಾಂಜಾ ಗಿಡಗಳನ್ನು (ಒಟ್ಟು ತೂಕ 17kg)ಬೆಳೆದಿರುವುದನ್ನು ಪತ್ತೆ ಹಚ್ಚಿ ,ಇಬ್ಬರು ಆರೋಪಿಗಳನ್ನು ದಸ್ತಗಿರಿ ಪಡಿಸಿ NDPS ಕಾಯ್ದೆ ಕಲಂ 8b ,20a,20b(1), 25 ,60 ರ ಅಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಶಿವರಾಜ ಎಸ್. ಅಬಕಾರಿ ನಿರೀಕ್ಷಕರು,ಅಪ್ಸಲ್ ಅಬಕಾರಿ ಉಪ ನಿರೀಕ್ಷಕರು, ರವಿ ಬಿ.ವಿ. ಮುಖ್ಯಪೇದೆ, ಕೃಷ್ಣ ಅಬಕಾರಿ ಕಾನ್ಸ್ಟೇಬಲ್ ಹಾಗೂ ಗೃಹರಕ್ಷಕ ಸಿಬ್ಬಂದಿ ಮತ್ತು ವಾಹನ ಚಾಲಕರು ಕಂದಾಯ ಅಧಿಕಾರಿಗಳು ಹಾಗೂ ಬಿಮಟ್ಕೆರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC