ಬೆಂಗಳೂರು: ಯಶವಂತಪುರ-ಬೀದರ್ ಎಕ್ಸ್ ಪ್ರೆಸ್ ರೈಲಿನಿಂದ ಅಪರಿಚಿತ ಪ್ರಯಾಣಿಕನನ್ನು ಕೆಳಗೆ ತಳ್ಳಿ ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ನಗರದ ರೈಲ್ವೆ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ತೋಟಗಾರ ಎಸ್.ದೇವಪ್ಪ (45) ಮತ್ತು ಪೇಂಟರ್ ಆಗಿರುವ ಎಚ್.ಪೀರಪ್ಪ (31 ) ಬಂಧಿತ ಆರೋಪಿಗಳಾಗಿದ್ದಾರೆ. ರೈಲಿನಿಂದ ಕೆಳಗೆ ತಳ್ಳಿದ ಪರಿಣಾಮ 30 ವರ್ಷದ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಇಬ್ಬರು ಆರೋಪಿಗಳು ಮಂಗಳವಾರ ರಾತ್ರಿ 7:15ಕ್ಕೆ ಹೊರಟಿದ್ದ ರೈಲಿಗೆ ಯಶವಂತಪುರದಲ್ಲಿ ಹತ್ತಿದ್ದಾರೆ. ಜನರಲ್ ಕೋಚ್ ನಲ್ಲಿ ಶೌಚಾಲಯದ ಪಕ್ಕದ ಹಾದಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದರು. ಆದರೆ ಅಲ್ಲಿ ಕುಳಿತಿದ್ದ 30 ವರ್ಷದ ವ್ಯಕ್ತಿ ಜಾಗಕೊಡಲು ನಿರಾಕರಿಸಿದಾಗ ಕೋಪದಿಂದ ರೈಲಿನಿಂದ ಕೆಳಗೆ ತಳ್ಳಿದ್ದಾರೆ. ಇದನ್ನು ಕಂಡು ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಂಗಳವಾರ ರಾತ್ರಿ ರೈಲ್ವೇ ಪೊಲೀಸರು ಸ್ಥಳಕ್ಕೆ ಧಾವಿಸಿದರು, ಆದರೆ ನಿಖರವಾದ ಸ್ಥಳ ತಿಳಿದಿಲ್ಲದ ಕಾರಣ ಮತ್ತು ಕತ್ತಲೆಯಾದ ಕಾರಣ ಮೃತದೇಹವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬುಧವಾರ ಬೆಳಗ್ಗೆ ಶವ ಪತ್ತೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4