ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಕೆ. ಜಿ. ಹಳ್ಳಿಯ ಎಚ್ ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಜುಬೇರ್ (37) ಮತ್ತು ಡಿ. ಜೆ. ಹಳ್ಳಿಯ ಡೈವರ್ಸ್ ಕಾಲೋನಿಯ ಫುರ್ಕಾನ್ ಅಲಿಖಾನ್ (38) ಬಂಧಿತರು. ಆರೋಪಿಗಳಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.


