ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಬ್ಬ ಮಹಿಳೆಯೊಂದಿಗೆ ವಿವಾಹವಾಗಿದ್ದು, ಬಹುಪತಿತ್ವದ ಸಂಪ್ರದಾಯದ ಅಡಿಯಲ್ಲಿ ಈ ವಿವಾಹ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು.
ನವ ವಧು ಸುನೀತಾ ಚೌಹಾಣ್ ಮತ್ತು ವರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಅವರು ಯಾವುದೇ ಒತ್ತಡವಿಲ್ಲದೆ ಈ ಮದುವೆಯ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತ ಹೇಳಿದರು.
ಜುಲೈ 12 ರಂದು ಸಿರ್ಮೌರ್ ಜಿಲ್ಲೆಯ ಟ್ರಾನ್ಸ್–ಗಿರಿ ಪ್ರದೇಶದಲ್ಲಿ ನಡೆದ ಮೂರು ದಿನಗಳ ಮದುವೆ ಸಮಾರಂಭಕ್ಕೆ ಸ್ಥಳೀಯ ಜಾನಪದ ಹಾಡುಗಳು ಮತ್ತು ನೃತ್ಯಗಳು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು.
ಈ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ವಧು ಕುನ್ಹಾತ್ ಗ್ರಾಮದ ಸುನೀತಾ ಈ ಮದುವೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಸಂಪ್ರದಾಯದ ಬಗ್ಗೆ ತನಗೆ ಅರಿವಿತ್ತು ಮತ್ತು ಯಾವುದೇ ಒತ್ತಡವಿಲ್ಲದೆ ತನ್ನ ನಿರ್ಧಾರವನ್ನು ತೆಗೆದುಕೊಂಡೆ ಮತ್ತು ಈ ಬಂಧವನ್ನು ನಾನು ತುಂಬಾನೇ ಗೌರವಿಸುತ್ತೇನೆ ಎಂದು ಹೇಳಿದರು.
ಶಿಲೈ ಗ್ರಾಮದ ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC