ನಟ ದರ್ಶನ್ ಅವರ ಹಳೆಯ ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಲೇ ಇದೆ. ಇದೀಗ ಮತ್ತೆ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ.
ಇತ್ತೀಚೆಗೆ “ಮೆಜೆಸ್ಟಿಕ್’, “ಶಾಸ್ತ್ರಿ’ ಸಿನಿಮಾ ಬಿಡುಗಡೆಯಾಗಿದ್ದವು. ಅದಕ್ಕೂ ಮೊದಲು “ಕರಿಯ’ ಸಿನಿಮಾ ತೆರೆ ಕಂಡಿತ್ತು. ಇತ್ತೀಚೆಗೆ “ನಮ್ಮ ಪ್ರೀತಿಯ ರಾಮು’, “ಪೊರ್ಕಿ’ ಸಿನಿಮಾ ಮತ್ತೆ ಬಿಡುಗಡೆಗೊಂಡು ತಕ್ಕಮಟ್ಟಿಗೆ ಪ್ರದರ್ಶನಗಳನ್ನು ಕಂಡಿವೆ.
ಈ ನಡುವೆ “ನವಗ್ರಹ’ ಹಾಗೂ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾಗಳು ಮರು ಬಿಡುಗಡೆಗೆ ಸಿದ್ಧಗೊಂಡಿವೆ. ನವಗ್ರಹ ಸಿನಿಮಾ ನವೆಂಬರ್ 8ರಂದು ಮರು ಬಿಡುಗಡೆಯಾಗುತ್ತಿದೆ. ಅದೇ ದಿನ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಸಹ ಬಿಡುಗಡೆಯಾಗುವುದಿತ್ತು. ಆದರೆ, ಒಂದೇ ದಿನ ದರ್ಶನ್ ಅವರ ಎರಡು ಸಿನಿಮಾಗಳು ಮರು ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಮರು ಬಿಡುಗಡೆ ನವೆಂಬರ್ 22ಕ್ಕೆ ಮುಂದೂಡಲಾಗಿದೆ.
2012ರಲ್ಲಿ ನಾಗಣ್ಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಐತಿಹಾಸಿಕ ಚಿತ್ರದಲ್ಲಿ ದರ್ಶನ್ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಮಿಂಚಿದ್ದರು. ಚಿತ್ರ ಹಲವೆಡೆ ಶತದಿನಗಳನ್ನು ಕಂಡಿತ್ತು. ಜಯಪ್ರದಾ, ಶಶಿಕುಮಾರ್, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


