ತುಮಕೂರು: ರೈತರೊಬ್ಬರ ಜಮೀನಿನ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡಲು ಲಂಚಕ್ಕಾಗಿ ಬೇಡಿಕೆ ಇರಿಸಿ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದ ಗ್ರಾಮ ಪಂಚಾಯತ್ ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಆರೋಪಿಗಳಿಬ್ಬರಿಗೆ ತಲಾ ಮೂರುವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ ದಂಡ ವಿಧಿಸಿ ತೀರ್ಪು ನೀಡಿದೆ.
ಹೆಗ್ಗರೆ ಕಂದಾಯ ವೃತ್ತದ ಗ್ರಾಮ ಆಡಳತಾಧಿಕಾರಿಯಾಗಿದ್ದ ರಶ್ಮಿ ಮತ್ತು ಗ್ರಾಮ ಸಹಾಯಕ ಹೆಚ್.ಎನ್.ಪ್ರಕಾಶ್ ಅವರ ಮೇಲಿನ ಆರೋಪ ಸಾಬೀತಾಗಿದೆ.
ಮೊದಲ ಆರೋಪಿಗೆ ಇಪ್ಪತ್ತು ಸಾವಿರ ರೂ. ದಂಡ, ಎರಡನೇ ಆರೋಪಿಗೆ ಹತ್ತು ಸಾವಿರ ರೂ. ದಂಡ ವಿಧಿಸಿದೆ.
ಭೀಮಸಂದ್ರ ಗ್ರಾಮದ ವಾಸಿ ದೂರುದಾರರಾದ ಡಿ.ನಾಗರಾಜು ಎಂಬುವರು ಭೀಮಸಂದ್ರ ಗ್ರಾಮದ ಸರ್ವೆ ನಂಬರ್:32/2ಎ7 ರಲ್ಲಿ 03 ಗುಂಟೆ ಜಮೀನನ್ನು ಕ್ರಯಕ್ಕೆ ಖರೀದಿ ಮಾಡಿದ್ದು, ಈ ಜಮೀನಿನ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡಲು ಹೆಗ್ಗರೆ ಕಂದಾಯ ವೃತ್ತದ ಗ್ರಾಮ ಆಡಳತಾಧಿಕಾರಿಯಾಗಿದ್ದ ರಶ್ಮಿ 12,000/- ರೂ. ಲಂಚದ ಹಣಕ್ಕೆ ಬೇಡಿಕೆ ಇರಿಸಿದ್ದರು. 28/09/2021 ರಂದು ಮದ್ಯಾಹ್ನ ಹೆಗ್ಗೆರೆಯಲ್ಲಿರುವ ತಮ್ಮ ಕಛೇರಿಯಲ್ಲಿ ಹೆಚ್.ಎನ್.ಪ್ರಕಾಶ್, ಗ್ರಾಮ ಸಹಾಯಕ ರವರ ಮೂಲಕ ದೂರುದಾರರಿಂದ 2000/- ರೂ ಲಂಚದ ಹಣವನ್ನು ಮುಂಗಡವಾಗಿ ಪಡೆದುಕೊಂದಿದ್ದರು.
ಉಳಿದ 8,000 ರೂ ಲಂಚದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಾಗರಾಜು ರವರಿಗೆ, ಅಧಿಕಾರಿಗಳಿಗೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ 29/09/2021 ರಂದು ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ ಮಲ್ಲಕಾರ್ಜುನ ಚುಕ್ಕಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸ್ ನಿರೀಕ್ಷಕ ಬೀರೇಂದ್ರ ಎನ್. ನೇತೃತ್ವದ ತಂಡ ದಾಳಿ ನಡೆಸಿ 29/09/2021 ರಂದು ಮಧ್ಯಾಹ್ನ 01.40 ಗಂಟೆ ಸಮಯದಲ್ಲಿ ತುಮಕೂರು ತಾಲ್ಲೂಕು ತಹಶೀಲ್ದಾರ್ ಕಛೇರಿಯ ಕೆಳಭಾಗದಲ್ಲಿರುವ ಕಸಬಾ ಹೋಬಳಿ ಕಂದಾಯ ನಿರೀಕ್ಷಕರ ಕಛೇರಿ ಮುಂಭಾಗ ಹೆಚ್.ಎನ್.ಪ್ರಕಾಶ್ 8,000 ರೂ. ಲಂಚದ ಹಣವನ್ನು ದೂರುದಾರರಿಂದ ಪಡೆಯುತ್ತಿದ್ದರು.
ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಛೇರಿಯೊಳಗೆ ಕೂತಿದ್ದ ರಶ್ಮಿ ಎಂ.ಎನ್. ರವರಿಗೆ ನೀಡಿದ್ದರು. ಈ ಪ್ರಕರಣದಲ್ಲಿ ವೀರೇಂದ್ರ ಎನ್., ಪೊಲೀಸ್ ನಿರೀಕ್ಷಕರು, ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆ, ತುಮಕೂರು ಮತ್ತು ರಾಮರೆಡ್ಡಿಕ., ಬೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ತುಮಕೂರು ರವರುಗಳು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಧೀಶ ಸಿ.ಪಿ.ರಾಮಲಿಂಗೇಗೌಡ ಅವರು ಲೋಕಾಯುಕ್ತ ಪೊಲೀಸ್ ಠಾಣಾ ಮೊ.ನಂ:14/2021 ಕಲಂ-7(1) ಭ್ರಷ್ಟಾಚಾರ, ಪ್ರತಿಬಂಧ ಕಾಯ್ಯ ೧೦೦ (ತಿದ್ದುಪ9-2019) .ರ ಟ್ರ್ಯಾಪ್ ಪ್ರಕರಣವನ್ನು ನ್ಯಾಯಾಲಯದ ವಿಶೇಷ ಪ್ರಕರಣ ಸಂಖ್ಯೆ:300/2023 ರಲ್ಲ. ವಿಚಾರಣೆ ನಡೆಸಿ, ಆರೋಪಿ–1 ರಶ್ಮಿ .ಎಂ.ಎನ್. ಗ್ರಾಮ ಅಡಕತಾಧಿಕಾರಿ, ಕಂದಾಯ ಇಲಾಖೆ, ಹೆಗ್ಗೆರೆ ವೃತ್ತ, ಕಸಬಾ ಹೋಬಳ, ತುಮಕೂರು ತಾಲ್ಲೂಕು ಮತ್ತು ಆರೋಪಿ–2 ಹೆಚ್.ಎನ್.ಪ್ರಕಾಶ್, ಗ್ರಾಮ ಸಹಾಯಕ, ಕಂದಾಯ ಇಲಾಖೆ, ಹೆಗ್ಗೆರೆ ವೃತ್ತ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು ರವರನ್ನು ದೋಷಿಗಳು ಎಂದು ಘೋಷಿಸಿದ್ದಾರೆ.
ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ಎನ್.ಬಸವರಾಜು, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ, ತುಮಕೂರು ರವರು ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx