ಗೋಕಾಕ್: ಕೊಟ್ಟ ಸಾಲ ಕೇಳಿದ್ದಕ್ಕೆ ವೈದ್ಯರು ಉದ್ಯಮಿಯನ್ನು ಹತ್ಯೆಗೈದಿರುವ ಪ್ರಕರಣ ಗೋಕಾಕ ತಾಲ್ಲೂಕನ್ನೆ ಬೆಚ್ಚಿಬೀಳಿಸಿತ್ತು ಪ್ರಕರಣದ ಕುರಿತು ಆರು ದಿನಗಳ ಕಾಲ ಎಡೆಬಿಡದೆ ತನಿಖೆ ನಡೆಸಿದ ಪೊಲೀಸರು ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಮೂರನೆಯ ಕೊಲೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃತ್ಯ ನಡೆದ ಸ್ಥಳದಿಂದ 10ಕಿಮೀ ಅಂತರದಲ್ಲಿ ಪಂಚನಾಯಕನಟ್ಟಿ ಬಳಿ ಬಾವಿಯೊಂದರಲ್ಲಿ ರಾಜು ಝಂವರ(52)ಶವ ಪತ್ತೆಯಾಗಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿ,ಡಾ ಸಚೀನ್ ಶಂಕರ ಶಿರಗಾವಿ,.(36) ಚನ್ನಮ್ಮ ನಗರ ಗೋಕಾಕ್,ಡಾ.ಶಿವಾನಂದ ಕಾಡಗೌಡ ಪಾಟೀಲ ಸಿಟಿ ಹಾಸ್ಪಿಟಲ್ ಗೋಕಾಕ್ ಈ ಇಬ್ವರು ಆರೋಪಿಗಳನ್ಬು ಈ ಹಿಂದೆಯೇ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದ ಪೋಲಿಸರು ಈಗ ಮೂರನೇಯ ಆರೋಪಿಯಾದ,ಇರ್ಷಾದ್ ಅಹ್ಮದ ತ್ರಾಸಗರ್(25) ಎಂಬಾತನನ್ನು ಬಂಧಿಸಿದ್ದಾರೆ.
ಕಳೆದ ಒಂದು ವಾರದಿಂದ ಬೃಹತ್ ಕಾಲುವೆ ಸುತ್ತ, ಹೊಲ ಗದ್ದೆಗಳಲ್ಲಿ ಪೊಲೀಸರು ತಿರುಗಾಡಿ ಮೃತ ಉದ್ಯಮಿಯ ದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಇದೀಗ ಪೊಲೀಸರು ಪ್ರಕರಣವನ್ನು ಬೇದಿಸಿದ್ದು ಕೋಲೆಗೆ ಪ್ರಮುಖ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತಪಾಸಣೆಗೈದ ಪೊಲೀಸರಿಗೆ ಎಸ್ಪಿ ಡಾ. ಸಂಜೀವ ಪಾಟೀಲ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy