ಸರಗೂರು: ತಾಲೂಕಿನ ಶಕ್ತಿದೇವತೆ ಶ್ರೀ ಚಿಕ್ಕದೇವಮ್ಮನ ಬೆಟ್ಟದಲ್ಲಿ ಯುಗಾದಿ ಅಂಗವಾಗಿ ಗುರುವಾರ ಕಪಿಲ ನದಿ ದಡದಲ್ಲಿ ಹಾಲುಗಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಈ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಚಂದ್ರಮಾನ ಯುಗಾದಿ ಹಬ್ಬದ ದಿನದಂದು ಬೆಳಿಗ್ಗೆಯೇ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಚಿಕ್ಕದೇವಮ್ಮನ ಬೆಟ್ಟದಿಂದ ಅಮ್ಮನವರ ಉತ್ಸವ ಮೂರ್ತಿಯನ್ನು ಕರೆತಂದು ನದಿ ಬಳಿಯ ಹಾಲುಗಡುವಿನ ಜಪದಕಟ್ಟೆಯಲ್ಲಿ ಕೂರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಜಪದಕಟ್ಟೆಯಲ್ಲಿ ಕೂರಿಸಿದ ಬಳಿಕ ದೇವರಿಗೆ ಹೋಮ–ಹವನಗಳು ನಡೆದವು. ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಾದ್ಯಗೋಷ್ಠಿಗಳು ಮೊಳಗಿದವು. ಸುಮಾರು 10ಕ್ಕೂ ಹೆಚ್ಚು ಸತ್ತಿಗೆಗಳು ಮೆರವಣಿಗೆ ನಡೆಸಲಾಯಿತು. ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಾಡಲಾದ ಹರಕೆಯನ್ನು ತೀರಿಸಿದರು.
ಸರಗೂರಿನ ಪೊಲೀಸ್ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಪಿಎಸ್ ಐ ಕಿರಣ್, ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಸಮಿತಿಯಿಂದ ಜಾತ್ರಾವರಣದಲ್ಲಿ ಯಾವುದೇ ಪ್ರಾಣಿಬಲಿ ಮಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಿದ್ದು, ಪ್ರಾಣಿಬಲಿ ಆಗದಂತೆ ತಡೆಹಿಡಿಯುವಲ್ಲಿ ಯಶಸ್ವಿಯಾದರು.
ಹರಕೆ ಹೊತ್ತ ಭಕ್ತರು ತಲೆ ಮೂಡಿ ಮಾಡಿಸಿದರು. ಅಂಗಡಿ ಮುಗ್ಗಟ್ಟುಗಳು ಇದ್ದವು. ಬೆಟ್ಟದ ಬರುವ ಭಕ್ತರಿಗೆ ಖಾಸಗಿ ವಾಹನಗಳನ್ನು ನಿಷೇಧಿಸಿ, ಹ್ಯಾಂಡ್ ಪೋಸ್ಟ್, ಸರಗೂರಿನಿಂದ ವಾಹನದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವತೆ ದರ್ಶನ ಪಡೆದು ಪುನೀತರಾದರು. ಬೆಟ್ಟದ ಪ್ರಧಾನ ಆರ್ಚಕರುಗಳು ಪೂಜಾ ವಿಧಿವಿಧಾನ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಹಾಲುಗಡ ಜಾತ್ರಾ ಕಮಿಟಿ ಪದಾಧಿಕಾರಿಗಳು, ಬೆಟ್ಟದ ಸುತ್ತ–ಮುತ್ತಲಿನ ಗ್ರಾಮಸ್ಥರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಪ್ರಾಣಿ ಬಲಿ ನಿಷೇಧ ಬಗ್ಗೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ, ಜಾತ್ರಾ ಮಾಳದ ಎಲ್ಲಾ ಕಡೆಗೂ ಭೇಟಿ ನೀಡಿ ಪ್ರಾಣಿ ಬಲಿ ಮಾಡಬಾರದು ಎಂದು ಪರೀಶೀಲನೆ ನಡೆಸಿ, ಹಾಲಗಡ ಚಿಕ್ಕ ದೇವಮ್ಮ ಜಾತ್ರಾ ಮಹೋತ್ಸವದಲ್ಲಿ ಒಂದು ಪ್ರಾಣಿ ಬಲಿಯಾಗದಂತೆ ಹೆಚ್ಚಿನ ರೀತಿಯಲ್ಲಿ ಕ್ರಮವಹಿಸುವಲ್ಲಿ ಯಶಸ್ಸುಯಾಗಿದ್ದಾರೆ. ಇನ್ನೂ ಮುಂದೆ ತಾಯಿಗೆ ಪ್ರಾಣಿ ಬಲಿ ಕೊಡುವ ಬದಲು, ತೆಂಗಿನ ಎಲೆ ನೀರನ್ನು ಅಭಿಷೇಕ ಮಾಡಿ, ಹತ್ತಾರು ಜನಕ್ಕೆ ಸಿಹಿ ಊಟ ಮಾಡಿ ಅನ್ನದಾನ ಸೇವೆ ಮಾಡಿ ಎಂದು ಮನವಿ ಮಾಡಿಕೊಂಡರು. ಅದರಂತೆ ಇಟ್ನ ಗ್ರಾಮದಲ್ಲಿ ನಾಳೆ ನಡೆಯಲಿರುವ ಜಾತ್ರಾ ನಮ್ಮ ಕಡೆಯಿಂದ ಒಂದು ಕ್ವಿಂಟಲ್ ಅಕ್ಕಿಯನ್ನು ದಾನವಾಗಿ ನೀಡಿದ್ದರು. ಮುಂದಿನ ಜಾತ್ರಾ ಮಹೋತ್ಸವಕ್ಕೆ ಅನ್ನದಾನ ಮಾಡಲು ಐದು ಕ್ವಿಂಟಾಲ್ ಅಕ್ಕಿ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕದೇವಮ್ಮನ ಬೆಟ್ಟದ ಪಾರುತ್ತೆದಾರು ಮಹದೇವಸ್ವಾಮಿ, ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಕಿರಣ್, ಮುಖಂಡರು, ಜಾತ್ರಾ ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ, ಸಿದ್ದರಾಜು, ಜಯರಾಮ್, ಯಜಮಾನರು ನಿಂಗರಾಜು, ನಾಗರಾಜು ಕೆ., ಬಿ. ಬೆಟ್ಟ ನಾಯಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಎನ್. ಬಸವ ನಾಯಕ, ಬಿ. ಬಸವರಾಜು, ಐ.ಬಿ.ರವಿಕುಮಾರ, ನಾಗೇಂದ್ರ, ಶೇಷ, ಗ್ರಾಮದ ಕಾರ್ಯದರ್ಶಿ ಮಂಚನಾಯಕ, ಮಾಜಿ ಯಜಮಾನ ಬಿ.ರಾಮನಾಯಕ, ಹಾಲಿನ ಡೈರಿ ಕಾರ್ಯದರ್ಶಿ ಬೆಟ್ ನಾಯ್ಕ, ಬೆಟ್ಟದ ಪಾರುತ್ತೇದಾರ ಮಹದೇವಸ್ವಾಮಿ, ಪುರದಕಟ್ಟೆ ಬಸವರಾಜು,ಇನ್ನೂ ಮುಖಂಡರು ಸೇರಿದಂತೆ ಇಟ್ನಾ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


