ಮಹಾಶಿವರಾತ್ರಿಯ ದಿನದಂದು ಉಜ್ಜಯಿನಿ 18.82 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಕಳೆದ ವರ್ಷ ದೀಪಾವಳಿಯಂದು 15.76 ಲಕ್ಷ ದೀಪಗಳನ್ನು ಬೆಳಗಿಸಿದ ಉತ್ತರ ಪ್ರದೇಶದ ಅಯೋಧ್ಯೆಯ ದಾಖಲೆಯನ್ನು ಉಜ್ಜಯಿನಿ ಮುರಿದಿದೆ.ಮಹಾಶಿವರಾತ್ರಿಯಂದು 18,82,000 ದೀಪಗಳನ್ನು ಬೆಳಗಿಸಲಾಯಿತು.
18,000ಕ್ಕೂ ಹೆಚ್ಚು ಸ್ವಯಂಸೇವಕರು ದೀಪ ಬೆಳಗಿಸಿದರು. ಶಾಲಾ ಮಕ್ಕಳಿಂದ ಕಾಲೇಜು ವಿದ್ಯಾರ್ಥಿಗಳು, ಸಾಮಾಜಿಕ ಸಂಘಟನೆಗಳು, ಸಮಾಜದ ವಿವಿಧ ಸ್ತರದ ಜನರು ದೀಪ ಬೆಳಗಿಸಿದರು.ದೀಪ ಬೆಳಗಿಸಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಜ್ಜಯಿನಿ ತಲುಪಿದ್ದರು.
ಉಜ್ಜಯಿನಿಯ ಹೆಸರು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಹೇಳಿದರು. ದೀಪ ಬೆಳಗಿಸಲು ಸಹಕರಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಮಹಾಶಿವರಾತ್ರಿಯ ಹಬ್ಬವನ್ನು ಉಜ್ಜಯಿನಿಯಲ್ಲಿ ಶಿವ ದೀಪಾವಳಿ ಎಂದು ಕರೆಯಲಾಗುತ್ತದೆ. ಮಹಾಶಿವರಾತ್ರಿಯಂದು ಉಜ್ಜಯಿನಿಯು 18,82,000 ದೀಪಗಳಿಂದ ಪ್ರಕಾಶಿಸಲ್ಪಟ್ಟಿದೆ ಎಂದು ಜಿಲ್ಲಾಧಿಕಾರಿ ಕುಮಾರ್ ಪುರುಷೋತ್ತಮ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


