ಯುದ್ಧದಿಂದ ನಲುಗಿಹೋಗಿರುವ ಉಕ್ರೇನ್ ದೇಶಕ್ಕೆ ನ್ಯಾಟೋ ರಾಷ್ಟ್ರಗಳ ಬೆಂಬಲ ಸಿಕ್ಕಿದೆ. ಇದರಿಂದಾಗಿ ರಷ್ಯಾ ವಿರುದ್ದ ಹೋರಾಟ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ.
ಪಾಶ್ಚಿಮಾತ್ಯ ಮಿಲಿಟರಿ ಒಕ್ಕೂಟ, ಉಕ್ರೇನ್ ಅನ್ನು ಬೆಂಬಲಿಸುವ “ಜವಾಬ್ದಾರಿ” ಹೊಂದಿದೆ ಎಂದು ನ್ಯಾಟೋ ಮುಖ್ಯಸ್ಥ ಜೆನ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.
ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿದ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆನ್ , ಉಕ್ರೇನ್‌ನಲ್ಲಿ ಸುದೀರ್ಘವಾದ ” ಯುದ್ಧವಿರೋದಿ ” ನಿಲುವು ತೆಗೆದಕೊಳ್ಳಲು ಉಕ್ರೇನ್ ಬೆಂಬಲಸಲು ನ್ಯಾಟೋ ದೇಶಗಳು ಮುಂದಾಗಿವೆ ಎಂದು ಅವರು ಹೇಳಿದ್ದಾರೆ.
ಉಕ್ರೇನಿಯನ್ನರು “ಯುದ್ಧಭೂಮಿಯಲ್ಲಿ ತಮ್ಮ ದೇಶವನ್ನು ರಕ್ಷಿಸಲು ಹೆಚ್ಚಿನ ಬೆಲೆ ಪಾವತಿಸುತ್ತಿದ್ದಾರೆ, ಆದರೆ ರಷ್ಯಾ ಹೆಚ್ಚಿನ ಸಾವು ನೋವು ತೆಗೆದುಕೊಳ್ಳುತ್ತಿದೆ.ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ನೋಡುತ್ತೇವೆ” ಎಂದು ಹೇಳಿದ್ದಾರೆ.
ನ್ಯಾಟೋ, ರಷ್ಯಾದೊಂದಿಗೆ ನೇರ ಮುಖಾಮುಖಿಯಾಗಲು ಬಯಸುವುದಿಲ್ಲ ಎಂದು ಹೇಳಿರುವ ಅವರು ಯುದ್ಧದ ಸನ್ನಿವೇಶಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಒಲವು ವ್ಯಕ್ತಪಡಿಸಿದೆ.ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ
ಶಾಂತಿ ಮಾತುಕತೆಗಾಗಿ ಭೂಪ್ರದೇಶದ ನಷ್ಟವನ್ನು ಒಪ್ಪಿಕೊಳ್ಳುವಂತೆ ಪಶ್ಚಿಮದಿಂದ ಉಕ್ರೇನ್‌ಗೆ ಒತ್ತಡ ಹೇರಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಟೋಲ್ಟೆನ್‌ಬರ್ಗ್ “ಉಕ್ರೇನ್ ಯಾವುದನ್ನು ಸ್ವೀಕರಿಸಬೇಕು ಅಥವಾ ಸ್ವೀಕರಿಸಬಾರದು ಎಂಬುದನ್ನು ನಿರ್ಧರಿಸುವುದು ಅಥವಾ ಬಲವಾದ ಅಭಿಪ್ರಾಯಗಳನ್ನು ಹೊಂದುವುದು ಮುಖ್ಯವಲ್ಲ ಅಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಸದ್ಯದ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಉಕ್ರೇನಿಯನ್ ಕರಾವಳಿಯ ರಷ್ಯಾದ ದಿಗ್ಬಂಧನದ ಮೂಲಕ ಉಕ್ರೇನ್‌ನಲ್ಲಿ ಧಾನ್ಯ ರಫ್ತುಗಳನ್ನು ನಿರ್ಬಂಧಿಸಲು ಒಕ್ಕೂಟ ನೌಕಾ ಬೆಂಗಾವಲುಗಳನ್ನು ಚರ್ಚಿಸುತ್ತಿದೆಯೇ ಎನ್ನುವ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಈ ನಿಟ್ಟಿನಲ್ಲಿಯೂ ಕೂಡ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ಸ್ವಾಗತಿಸಲಾಗುವುದು ಎಂದು ಹೇಳಿದ್ದಾರೆ.
“ಹೆಚ್ಚು ಧಾನ್ಯವನ್ನು ಪಡೆಯಲು ಮತ್ತು ಆಹಾರದ ಬೆಲೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವೆಂದರೆ ಅಧ್ಯಕ್ಷ ಪುಟಿನ್ ಯುದ್ಧವನ್ನು ಕೊನೆಗೊಳಿಸುವುದು” ಒಂದೇ ಮಾರ್ಗ ಎಂದಿರುವ ಅವರು ಅಲ್ಲಿಯ ತನಕ ನ್ಯಾಟೋ ಮಿತ್ರರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳು ಪ್ರಯತ್ನವನ್ನು ಸ್ವಾಗತಿಸಲಾಗುವುದು ಅಲ್ಲದೆ ವಿಶ್ವಸಂಸ್ಥೆಯೊಂದಿಗೆ ನಿಕಟ ಸಮನ್ವಯ ಸಾಧಿಸಲಾಗುವುದು ಎಂದು ಹೇಳಿದ್ದಾರೆ.
ಉಕ್ರೇನ್‌ನ ನಿಯಂತ್ರಣದಲ್ಲಿ ಭೂ ರಫ್ತು ಮಾರ್ಗಗಳನ್ನು ವಿಸ್ತರಿಸುವ ಪ್ರಯತ್ನಗಳನ್ನು ಒಳಗೊಂಡಿದೆ “ಆದರೆ ಹಡಗಿನ ಮೂಲಕ ಸ್ವಲ್ಪ ಧಾನ್ಯವನ್ನು ಪಡೆಯುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5