nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ

    December 17, 2025

    ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ

    December 17, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025
    Facebook Twitter Instagram
    ಟ್ರೆಂಡಿಂಗ್
    • ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ
    • ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ
    • 80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ
    • ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ
    • ಲೋಹಿಯಾ ಪ್ರಶಸ್ತಿಗೆ ಶಿವಾನಂದ ತಗಡೂರು ಆಯ್ಕೆ
    • ರಾಜ್ಯದ ಜೈಲುಗಳ ಮೇಲೆ ಸರಣಿ ದಾಳಿ: ಮೊಬೈಲ್, ಮಾರಕಾಸ್ತ್ರ ಹಾಗೂ ಗಾಂಜಾ ಪತ್ತೆ
    • ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!
    • ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಉಳ್ಳವರ ಪಾಲಾಗುತ್ತಿರುವ ಸರ್ಕಾರಿ ಭೂಮಿ ಉಳಿಸಿ: ನಗರಸಭಾ ಸದಸ್ಯ ಮಹೇಶ್ ಗಂಭೀರ ಆರೋಪ
    ತಿಪಟೂರು February 9, 2023

    ಉಳ್ಳವರ ಪಾಲಾಗುತ್ತಿರುವ ಸರ್ಕಾರಿ ಭೂಮಿ ಉಳಿಸಿ: ನಗರಸಭಾ ಸದಸ್ಯ ಮಹೇಶ್ ಗಂಭೀರ ಆರೋಪ

    By adminFebruary 9, 2023No Comments2 Mins Read
    tipaturu

    ತಿಪಟೂರು: ನಗರದ ಇಂದಿರಾನಗರದಲ್ಲಿರುವ ಸರ್ಕಾರಿ ಜಾಗ ಹದ್ದಿ ಹದುಹಿಡಿದ ಹಳ್ಳದ ಸುಮಾರು ಕೋಟ್ಯಾಂತರ ರೂ ಬೆಲೆಬಾಳುವ ಜಾಗವನ್ನು ಜಿ.ಬಿ.ಗಂಗಯ್ಯನವರ ಮಕ್ಕಳಾದ ಪುಷ್ಪಾವತಿ ಮತ್ತು ಮೋಹನ ಕುಮಾರಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದರು ಈ ಬಗ್ಗೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆಂದು ವಾರ್ಡ್ ನಂ 18ರ ನಗರಸಭಾ ಸದಸ್ಯ ಮಹೇಶ್ ಆರೋಪಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಗರದಲ್ಲಿ ಅನೇಕ ಬಡವರು ವಾಸಿಸುತ್ತಿದ್ದಾರೆ. ಸರ್ಕಾರಿ ಜಾಗವನ್ನು ಮಂಜೂರು ಮಾಡಿಸಿಕೊಂಡು ಮನೆಕಟ್ಟಿಕೊಂಡು ವಾಸಿಸುತ್ತಿದ್ದು, ಇನ್ನು ಅನೇಕ ನಿರ್ಗತಿಕರು ನಿವೇಶನವಿಲ್ಲದೇ ಹೋರಾಡುತ್ತಿದ್ದಾರೆ. ಆದರೆ ಪ್ರಭಲ ಗಾಣಿಗ ಸಮುದಾಯಕ್ಕೆ ಸೇರಿದ ಮೋಹನ ಕುಮಾರಿ ಮತ್ತು ಪುಷ್ಪಾವತಿ ಎಂಬುವವರು ಒತ್ತುವರಿ ಮಾಡುತ್ತಿದ್ದು, ಸರ್ಕಾರ ನೋಟಿಸ್ ನೀಡಿದರು ಅದನ್ನು ತೆಗೆದುಕೊಳ್ಳದೇ ಕಟ್ಟಡದ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗು ನಿವೇಶನ ರಹಿತರಿಗೆ ತುಂಬಾ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು.


    Provided by
    Provided by

    ಮಾರನಗೆರೆ ಗ್ರಾಮದ ಸರ್ವೇ ನಂ 11/2ರ ಜಮೀನನ್ನು ದಿನಾಂಕ: 14-09-2018ರಂದು ಮಾರನಗೆರೆ ಗಡಿಯನ್ನು ನಿರ್ಧರಿಸಿದ್ದರು. ಆದರೆ ತಿಪಟೂರು ಗಡಿಯನ್ನು ಇದುವರೆಗೂ ಗುರುತಿಸಿ ಸರ್ಕಾರಿ ಜಾಗವನ್ನು ಬಿಡಿಸಿಕೊಳ್ಳಲು ತಾಲ್ಲೂಕು ಕಂದಾಯ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ. ಇಂತಹ ಸಮಯದಲ್ಲಿ ಇಲ್ಲಿ ಎಂಟು ಅಡಿಗೂ ಎತ್ತರದ ಗೋಡೆಯನ್ನು ನಿರ್ಮಿಸಿ ಅದರೊಳಗೆ ಕಟ್ಟಡವನ್ನು ಕಟ್ಟುವ ಹುನ್ನಾರವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

    ಇವರು ಗಾಣಿಗ ಸಮುದಾಯದವರಾಗಿದ್ದು, ಇವರಿಗೆ ಇಡೀ ಸಮುದಾಯದ ಬೆಂಬಲ, ರಾಜಕೀಯ ಬೆಂಬಲವೂ ದೊರೆತಿದ್ದು, ಸರ್ಕಾರಿ ನೋಟೀಸ್ ನೀಡಿದರೂ, ಅದನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳುವ ಮಟ್ಟಿಗೆ ತಲುಪಿದ್ದಾರೆ. ಮನೆಯ ಬಾಗಿಲಿಗೆ ನೋಟೀಸ್ ಅಂಟಿಸಿದರು ಯಾವುದಕ್ಕೂ ಕ್ಯಾರೆ ಎನ್ನದೇ ಕಟ್ಟಡದ ಕಾಮಗಾರಿಯನ್ನು ಮುಂದುವರೆಸುತ್ತಲೇ ಇದ್ದಾರೆ ಎಂದರು.

    ಈ ಭೂ ಕಬಳಿಕೆಯ ಬಗ್ಗೆ ಹಿಂದಿನ ತಹಸೀಲ್ದಾರ್ ಆಗಿದ್ದ ಆರತಿಯವರಿಗೂ ದೂರು ನೀಡಿದ್ದರು. ಅವರು ಕ್ರಮ ಕೈಗೊಳ್ಳದೇ ಇದ್ದಾಗ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೆ. ಆಗ ಜಿಲ್ಲಾಧಿಕಾರಿಗಳು ಗಡಿಯನ್ನು ಗುರುತಿಸಿ ಸೂಕ್ತ ಬಂದೂ ಬಸ್ತ್ ಮಾಡಲು ಆದೇಶಿಸಿದಾಗ ತನ್ನ ಜನರಿಗೆ ತೊಂದರೆಯಾಗುತ್ತದೆಂದು ತಿಳಿದ ತಹಸೀಲ್ದಾರ್ ಆರತಿ, ಸರಣಿ ರಜೆ ಇರುವ ದಿನಾಂಕವನ್ನು ನೋಡಿ ಸರ್ವೆಗೆ ತಿಳಿಸಿದರು. ಆದರೆ ಸರಣಿ ರಜೆ ಇದ್ದಿದ್ದರಿಂದ ಸರ್ವೇ ಆಗಲೇ ಇಲ್ಲ. ಇನ್ನು ಈಗಿನ ತಹಸೀಲ್ದಾರ್‌ ಗೂ ಅರ್ಜಿಯನ್ನು ನೀಡಿದರು, ಅವರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ವರ್ಗಾವಣೆಗೊಂಡು ಹೋಗುತ್ತಾರೆ ಮುಂದೆ ಬರುವವರು ಏನು ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಇದೇ ವೇಳೆ ಕಟ್ಟಡವನ್ನು ನಿರ್ಮಿಸಿ ಮುಂದಿನ ದಿನಗಳಲ್ಲಿ ನಾವೇ ಅನುಭೋಗದಲ್ಲಿದ್ಧೇವೆಂದು ತೋರಿಸಲು ಒತ್ತುವರಿದಾರರು ನಿರ್ಧರಿಸಿದಂತೆ ಕಾಣುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಒತ್ತುವರಿಯನ್ನು ತೆರವು ಗೊಳಿಸಿ ಕೋಟ್ಯಾತಂರ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಉಳಿಸಿಕೊಟ್ಟು ಬಡ ಜನರಿಗೆ ನಿವೇಶನವನ್ನು ಕೊಡಬೇಕೆಂದು ಆಗ್ರಹಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ಯೋಗೀಶ್, ತಿಲಕ್‌ಕುಮಾರ್, ವಾರ್ಡ್ ನ ನಾಗರಿಕರಾದ ತುಳಸಿ ರಾಮ್, ಜಯಣ್ಣ, ಮತ್ತಿತರರು ಹಾಜರಿದ್ದರು.

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ತಿಪಟೂರು | ಶನೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಸಂಘದಿಂದ 1 ಲಕ್ಷ ರೂ. ಮಂಜೂರು

    December 13, 2025

    ತಿಪಟೂರು  | ಡಿಸೆಂಬರ್ 16ರಂದು ಪತ್ರ ಬರಹಗಾರರಿಂದ ಬೆಳಗಾವಿ ಚಲೋ

    December 12, 2025

    ತಿಪಟೂರು: ಡಿ.18ರಿಂದ 21ರವರೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಕೋಕೋ ಪಂದ್ಯಾವಳಿ

    December 10, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪೋಕ್ಸೋ ಪ್ರಕರಣ: ಗಾಯಕ ‘ಮ್ಯೂಸಿಕ್ ಮೈಲಾರಿ’ ಮಹಾರಾಷ್ಟ್ರದಲ್ಲಿ ಬಂಧನ

    December 17, 2025

    ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಅಲಿಯಾಸ್ ಮೈಲಾರಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ…

    ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಬಾಕಿ ಹಣದ ಕಿಚ್ಚು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ, ವಿಪಕ್ಷಗಳ ಸಭಾತ್ಯಾಗ

    December 17, 2025

    80 ವರ್ಷ ಮೇಲ್ಪಟ್ಟ ಹಿರಿಯ ಚೇತನರಿಗೆ ಗೌರವ ಸಮರ್ಪಣೆ

    December 17, 2025

    ಗುಡ್ಡ ಗಾಡು ಓಟದ ಸ್ಪರ್ಧೆ: ಡಿ.18ರಂದು ಆಯ್ಕೆ ಪ್ರಕ್ರಿಯೆ

    December 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.