ಉಂಡ ಮನೆಗೆ ಕನ್ನ ಹಾಕಿದ ನೇಪಾಳಿ ದಂಪತಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಬೆಂಗಳೂರು ನಗರದ ಕೊತ್ತನೂರು ದಿಣ್ಣೆ ಬಳಿಯ ಕ್ಲಾಸಿಕ್ ಆರ್ಚಿಟ್ ಲೇಔಟ್ ನಲ್ಲಿ ನಡೆದಿದೆ.
ನಗರದ ಕೊತ್ತನೂರು ದಿಣ್ಣೆ ಬಳಿಯ ಕ್ಲಾಸಿಕ್ ಆರ್ಚಿಟ್ ಲೇಔಟ್ ನಲ್ಲಿ ಮನೆ ಕೆಲಸಕ್ಕಿದ್ದ ನೇಪಾಳ ಮೂಲದ ದಂಪತಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ (Theft) ಪರಾರಿಯಾಗಿರುವ ಘಟನೆ ನಡೆದಿದೆ. ಕಾಂಗ್ರೆಸ್ (Congress) ಮುಖಂಡ ಚಂದ್ರಶೇಖರ್ ಅಲಿಯಾಸ್ ಬಾರ್ ಚಂದ್ರಪ್ಪ ಮನೆಯಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 10 ರಂದು ಚಂದ್ರಶೇಖರ್ ಕುಟುಂಬಸ್ಥರು ಧರ್ಮಸ್ಥಳಕ್ಕೆ ಮಂಜುನಾಥಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ.
ಈ ವೇಳೆ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನೇಪಾಳ (Nepal) ಮೂಲದ ದಂಪತಿ ಹೊಂಚು ಹಾಕಿ ಕೂತಿದ್ರು. ತಮ್ಮವರನ್ನು ಕರೆಸಿಕೊಂಡ ಈ ಖತರ್ನಾಕ್ ದಂಪತಿ ಮನೆಯಲ್ಲಿದ್ದ 50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದು ಎಸ್ಕೇಪ್ ಆಗಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಮನೆ ಕಾವಲಿಗಿದ್ದ ಕಿರಾತಕ ಜೋಡಿ ಕೈಚಳಕ ತೋರಿದ್ದರಿಂದ ಮನೆ ಮಾಲೀಕ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ. ಸದ್ಯ ಮನೆ ಮಾಲೀಕ ಚಂದ್ರಶೇಖರ್ ಮಾಲೀಕ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು (Theft Case) ದಾಖಲಿಸಿದ್ದು ಖಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB