ಪಾವಗಡ: ತಾಲೂಕಿನ ಲಿಂಗದಹಳ್ಳಿ ವಲಯದ ನ್ಯಾಯದಗುಂಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ( ರಿ.) ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಕೆರೆಯ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.
ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕರಾದ ಸೀನಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯಾದ್ಯಂತ ಸುಮಾರು 1,200 ಕೆರೆಗಳ ಪುನಶ್ಚೇತನ ಕಾಮಗಾರಿ ಮಾಡಿದ್ದು, ರೈತರ ಜಮೀನಿಗೆ ಫಲವತ್ತದ ಮಣ್ಣು ಒದಗಿಸುವುದು ಮತ್ತು ನೀರಿನ ಅಂತರ್ಜಾಲ ಮಟ್ಟ ಸುಧಾರಣೆ ಬಗ್ಗೆ ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಸಿಗುವುದರಿಂದ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಯೋಜನಾಧಿಕಾರಿ ಮಹೇಶ್ ಹೆಚ್. ಮಾತನಾಡಿ, ಪಾವಗಡ ತಾಲೂಕಿನಲ್ಲಿ ಈಗಾಗಲೇ ಒಟ್ಟು 7ನೇ ಕೆರೆಯ ಕಾಮಗಾರಿ ಮಾಡುತ್ತಿದ್ದು, ಗ್ರಾಮದ ಅಕ್ಕ ಪಕ್ಕ ಇರುವ ಬೋರ್ವೇಲ್ ಮರುಪೂರಾಣ ಆಗುತ್ತದೆ ಎಂದು ತಿಳಿಸಿದರು.
ಊರಿನ ಮುಖಂಡ ತಿಮ್ಮಾರೆಡ್ಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆಗಳ ಹೂಳು ತೆಗೆಸಿ ಅವುಗಳ ಅಭಿವೃದ್ಧಿಯಿಂದ ಬೇರೆ ಬೇರೆ ರೀತಿಯ ಜನಗಳಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದು, ಒಂದು ಪುಣ್ಯದ ಕೆಲಸ ಅದರಿಂದ ನಮ್ಮ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಇದೆ ಸಂದರ್ಭದಲ್ಲಿ ಊರಿನ ಗಣ್ಯರಾದ N.A.ಈರಣ್ಣ ಹಾಗೂ ಸಮಿತಿ ಅಧ್ಯಕ್ಷರಾದ ಗೋವಿಂದಪ್ಪ, ರತ್ನಮ್ಮ ವಲಯದ ಮೇಲ್ವಿಚಾರಕರು, ಹಾಲೇಶ್, ವಸಂತ ಮತ್ತು ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC