ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆಬ್ರವರಿ 1, 2026) ದಾಖಲೆಯ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಸುಮಾರು 1 ಗಂಟೆ 25 ನಿಮಿಷಗಳ ಕಾಲ ನಡೆದ ಭಾಷಣದಲ್ಲಿ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ತೆರಿಗೆದಾರರಿಗೆ ಸಿಹಿ–ಕಹಿ:
- ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಿಲ್ಲ.
- ತೆರಿಗೆ ಪಾವತಿ ವಿಳಂಬಕ್ಕೆ ಶೇ 10ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ.
- ಐಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.
- ಸಿಗರೇಟು ಮತ್ತು ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ:
- ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ.
- 7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆಯಾಗಲಿದೆ.
- ಉತ್ತರ ಭಾರತದಲ್ಲಿಯೂ ಬೆಂಗಳೂರಿನ ಮಾದರಿಯ ‘ನಿಮ್ಹಾನ್ಸ್’ (NIMHANS) ಸ್ಥಾಪನೆಗೆ ಘೋಷಣೆ ಮಾಡಲಾಗಿದೆ.
ರೈಲ್ವೆ ಮತ್ತು ಮೂಲಸೌಕರ್ಯ:
- ದೇಶದಲ್ಲಿ 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ. ಇದರಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳು ಸೇರಿವೆ.
- ಮೂಲಸೌಕರ್ಯ ವೆಚ್ಚವನ್ನು ₹12.2 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ.
- ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳ ಅಭಿವೃದ್ಧಿ.
ಶಿಕ್ಷಣ ಮತ್ತು ಉದ್ಯೋಗ:
- ಪ್ರತಿ ಜಿಲ್ಲೆಯಲ್ಲೂ ಬಾಲಕಿಯರಿಗಾಗಿ ಒಂದು ಸರ್ಕಾರಿ ಹಾಸ್ಟೆಲ್ ಸ್ಥಾಪನೆ.
- 5 ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳ ನಿರ್ಮಾಣ.
- ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರಕ್ಕೆ ಉತ್ತೇಜನ ನೀಡಲು ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ:
- ರೈತರ ಆದಾಯ ಹೆಚ್ಚಿಸಲು ‘ಭಾರತ್ ವಿಸ್ತಾರ್ ಎಐ’ (AI) ಯೋಜನೆ ಜಾರಿ.
- ಕರಾವಳಿ ಭಾಗದಲ್ಲಿ ತೆಂಗು, ಗಂಧ ಮತ್ತು ಗೇರು ಬೆಳೆಗಳಿಗೆ ವಿಶೇಷ ಉತ್ತೇಜನ.
- ಮಹಿಳೆಯರಿಗಾಗಿ ‘ಲಕ್‌ಪತಿ ದೀದಿ’ ಯೋಜನೆಗೆ ಮತ್ತಷ್ಟು ಬಲ.
ಕೈಗಾರಿಕೆ ಮತ್ತು ವ್ಯಾಪಾರ:
- ಬಯೋ–ಫಾರ್ಮಾ ಹಬ್ ಸ್ಥಾಪನೆಗೆ ₹10,000 ಕೋಟಿ ಮೀಸಲು.
- ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನೆಗೆ ₹40,000 ಕೋಟಿ ಅನುದಾನ.
- ಹಳೆಯ ಕೈಗಾರಿಕಾ ವಲಯಗಳ ಪುನರುಜ್ಜೀವನಕ್ಕೆ 200 ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆ.
ಪ್ರವಾಸೋದ್ಯಮ:
- 20 ಸಾವಿರ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು 10 ಸಾವಿರ ಪ್ರವಾಸಿ ಗೈಡ್‌ಗಳಿಗೆ ತರಬೇತಿ.
- 15 ಪ್ರಮುಖ ಪುರಾತತ್ವ ಸ್ಥಳಗಳ ನವೀಕರಣ.
- ಪರಿಸರ ಮತ್ತು ಇಂಧನ:
- ದೀರ್ಘಾವಧಿ ಇಂಧನ ಭದ್ರತೆಗಾಗಿ ಮುಂದಿನ ಐದು ವರ್ಷಗಳಲ್ಲಿ ₹20,000 ಕೋಟಿ ಮೀಸಲು.
ನಗರಗಳ ಅಭಿವೃದ್ಧಿ:
- ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ ₹5,000 ಕೋಟಿ ಅನುದಾನ.
ರಾಜ್ಯಗಳಿಗೆ ನೆರವು:
- 16ನೇ ಹಣಕಾಸು ಆಯೋಗದ ವರದಿಯಂತೆ ರಾಜ್ಯಗಳಿಗೆ ₹1.4 ಲಕ್ಷ ಕೋಟಿ ಹಂಚಿಕೆ ಮಾಡಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


