ವೈ.ಎನ್.ಹೊಸಕೋಟೆ: ಹೋಬಳಿಯ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಪುಷ್ಪವತಿ ಶಿವಣ್ಣ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜುಳಾ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಮಾತ್ರ ನಾಮಪತ್ರ ಸಲ್ಲಿಸಿದ್ದ ಪುಷ್ಪವತಿ ಶಿವಣ್ಣ ಅವರನ್ನು ಚುನಾವಣಾಧಿಕಾರಿ ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಉತ್ತಮ್ ರವರು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ಈ ವೇಳೆ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಾತಿ, ಸದಸ್ಯರಾದ ಜ್ಯೋತಿ ಆನಂದ್, ಶೈಲಜಾ, ರಾಮಾಂಜಿನೇಯ, ರವಿ, ಸುಬ್ಬಪ್ಪ, ಚನ್ನ ರೆಡ್ಡಿ, ನರಸಿಂಹಪ್ಪ, ರಾಮರಾಜು, ನಾಗರಾಜು, ರಾಮಾಂಜಿನಮ್ಮ, ಪಿಡಿಒ ಹನುಮಂತರಾಯಪ್ಪ, ಮಾಜಿ ತಾ.ಪಂ. ಸದಸ್ಯರಾದ ರಾಮಸ್ವಾಮಿ, ದಿವಾಕರಪ್ಪ, ಪೂಜಾರಿ ತಿಮ್ಮಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಹಾಲಿಂಗಪ್ಪ, ಮುಖಂಡರಾದ ಆನಂದ್ ಕುಮಾರ್, ಗಂಗಪ್ಪ, ರಾಮಾಂಜಿನೇಯ, ಸತ್ಯಪ್ಪ, ಜಯರಾಮ್, ಇಂದ್ರಬೆಟ್ಟ ಶ್ರೀನಿವಾಸ್, ಮತ್ತಿತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC