ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆಯಾಗಿ ಉರ್ಸುಲಾ ವೊನ್ ಡೆರ್ ಲೆಯೆನ್ ಅವರು ಮತ್ತೆ ಐದು ವರ್ಷಗಳ ಅವಧಿಗೆ ಮರುನೇಮಕಗೊಡಿದ್ದಾರೆ. ಯುರೋಪಿಯನ್ ಮಂಡಳಿಯ ಸಭಾಧ್ಯಕ್ಷರಾಗಿ ಪೋರ್ಚುಗಲ್ ನ ಆ್ಯಂಟೊನಿಯೊ ಕೊಸ್ಟಾ ಹಾಗೂ ಯುರೋಪ್ ವಿದೇಶಾಂಗ ನೀತಿಯ ಮುಖ್ಯಸ್ಥರಾಗಿ ಎಸ್ತೊನಿಯಾದ ಕಜಾ ಕಲ್ಲಾಸ್ ಅವರು ಆಯ್ಕೆಯಾಗಿದ್ದಾರೆ.
ಬ್ರುಸೆಲ್ಸ್ನಲ್ಲಿ ಶುಕ್ರವಾರ ನಡೆದ ಯುರೋಪ್ ಒಕ್ಕೂಟದ ಶೃಂಗಸಭೆಯಲ್ಲಿ ನಡೆದ ಈ ನೇಮಕಾತಿಗಳಿಗೆ 27 ರಾಷ್ಟ್ರಗಳ ಯುರೋಪ್ ನಾಯಕರು ತಮ್ಮ ಅಂಕಿತ ಹಾಕಿದ್ದಾರೆ.
ಯುರೋಪ್ ಒಕ್ಕೂಟದ ಅಧ್ಯಕ್ಷೆಯಾಗಿ ಪುನಾರಾಯ್ಕೆಗೊಂಡ ವೊನ್ ಡೆರ್ ಲೆಯೆನ್ ಆನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತನ್ನನ್ನು ಎರಡನೆ ಅವಧಿಗೆ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ‘‘ನನಗೆ ದೊರೆತ ಗೌರವಕ್ಕೆ ಅಭಾರಿಯಾಗಿದ್ದೇನೆ ಹಾಗೂ ಈ ಕ್ಷಣವನ್ನು ಹಂಚಿಕೊಳ್ಳಲು ನಾನು ಸಂತಸಪಡುತ್ತೇನೆ’’ ಎಂದವರು ಹೇಳಿದರು.
ಯುರೋಪ್ ಒಕ್ಕೂಟದ ಭದ್ರತೆ ಹಾಗೂ ವಿದೇಶಾಂಗ ನೀತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕಾಜಾ ಕಲ್ಲಾಸ್ ಅವರು ಮಾತನಾಡಿ ಯುರೋಪ್ನಲ್ಲಿ ಯುದ್ಧ ನಡೆಯುತ್ತಿದೆ. ಜಾಗತಿಕವಾಗಿ ಅಸ್ಥಿರತೆ ಬೆಳೆಯುತ್ತಿದೆ. ಯುರೋಪಿನ ಏಕತೆಗಾಗಿ ಶ್ರಮಿಸುವುದು ಖಂಡಿತವಾಗಿಯೂ ನನ್ನ ಧ್ಯೇಯವಾಗಿದೆ ಎಂದರು.
ಉಕ್ರೇನ್ ಜೊತೆ ರಶ್ಯದ ಯುದ್ಧದ ಮೂರನೇ ವರ್ಷಕ್ಕೆ ಕಾಲಿರಿಸಿರುವಂತೆಯೇ ಯುರೋಪ್ ಒಕ್ಕೂಟದ ಅಧ್ಯಕ್ಷೆಯಾಗಿ ಉರ್ಸುಲಾ ವೊನ್ ಡೆರ್ ಲಿಯೆನ್ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA