ಉತ್ತರ ಪ್ರದೇಶ: ತನ್ನ ಪತ್ನಿಗೆ ಬೇರೊಬ್ಬನ ಜತೆ ಸಂಬಂಧವಿರುವುದನ್ನು ಅರಿತ ವ್ಯಕ್ತಿಯೊಬ್ಬ, ಆಕೆ ಇಷ್ಟಪಟ್ಟವನ ಜೊತೆಗೆ ಆಕೆಗೆ ವಿವಾಹ ಮಾಡಿಸಿಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಬ್ಲೂ ಮತ್ತೆ ರಾಧಿಕಾ 2017ರಲ್ಲಿ ವಿವಾಹವಾಗಿದ್ದರು ಅವರಿಗೆ 7 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ.
ಜೀವನೋಪಾಯಕ್ಕಾಗಿ ಬಬ್ಲೂ ಆಗಾಗ ಮನೆಯಿಂದ ಬೇರೆ ಊರಿಗೆ ಹೋಗುತ್ತಿದ್ದ ಈ ಸಂದರ್ಭದಲ್ಲಿ ರಾಧಿಕಾ ಹಳ್ಳಿಯ ಯುವಕನೊಬ್ಬನನ್ನು ಇಷ್ಟಪಡಲು ಶುರು ಮಾಡಿದ್ದಳು. ಇವರಿಬ್ಬರ ಪ್ರೀತಿ ವಿಚಾರ ತಿಳಿದು ಕೋಪಗೊಳ್ಳದೇ, ನ್ಯಾಯಾಲಯಕ್ಕೆ ಹೋಗಿ ಪತ್ನಿ ಹಾಗೂ ಆ ವ್ಯಕ್ತಿಯ ಜತೆ ವಿವಾಹಕ್ಕೆ ಸಾಕ್ಷಿಯಾದ ಬಬ್ಲೂ, ನಂತರ ದೇವಸ್ಥಾನದಲ್ಲಿ ಅವರಿಬ್ಬರಿಗೂ ವಿವಾಹ ಮಾಡಿಸಿದ್ದಾನೆ.
ನಾನು ಮಕ್ಕಳನ್ನು ನೋಡಿಕೊಳ್ಳುತ್ತೇನೆ ನೀನು ಇಷ್ಟಪಟ್ಟವನೊಂದಿಗೆ ಖುಷಿಯಾಗಿರು ಎನ್ನುವ ಮೂಲಕ ಬಬ್ಲೂ ತನ್ನ ಹೊಸ ಜೀವನವನ್ನು ತಾನು ಕಂಡುಕೊಂಡಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4