ತಿರುವನಂತಪುರಂ ಜಿಲ್ಲೆಯ ಕೊಟ್ಟೂರು ಆನೆಧಾಮ ಮತ್ತು ಪುನರ್ವಸತಿ ಕೇಂದ್ರದಲ್ಲಿ ಮಾವುತ ಆನೆ ಮರಿಗೆ ಊಟ ಕೊಡಲು ಹೋದಾಗ ಅದು ಮಾವುತನ ಬೆರಳನ್ನು ಕಚ್ಚಿ ತುಂಡು ಮಾಡಿದೆ.
ಕೇಂದ್ರದ ಪಕ್ಕದಲ್ಲೇ ಜೆಸಿಬಿ ಕೆಲಸ ನಡೆಯುತ್ತಿತ್ತು. ಇದರಿಂದ ಹೆದರಿದ ಆನೆ ಮರಿ ಊಟ ತಿನ್ನಿಸಲು ಬಂದ ಮಾವುತನ ಕೈ ಬೆರಳನ್ನು ಕಚ್ಚಿದೆ.
ಪುಷ್ಕರನ್ ಪಿಳ್ಳೈ ಎಂಬವರು ಅರಣ್ಯ ಎಂಬ ಆನೆಮರಿಗೆ ಆಹಾರ ನೀಡುತ್ತಿದ್ದಾಗ ಬೆರಳುಗಳಿಗೆ ಕಚ್ಚಿ ಗಂಭೀರವಾದ ಗಾಯಗಳಾಗಿವೆ. 2 ತಿಂಗಳ ಹಿಂದೆ ತಾಯಿ ಆನೆ ಸತ್ತ ನಂತರ ಅರಣ್ಯ ಎಂಬ ಮರಿಯಾನೆಯನ್ನು ಕೊಟ್ಟೂರು ಅರಣ್ಯದಿಂದ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾವುತನ ಎರಡು ಬೆರಳುಗಳು ಆನೆ ಮರಿಯ ಬಾಯಿಯೊಳಗೆ ಸಿಕ್ಕಿಹಾಕಿಕೊಂಡವು. ಕೂಡಲೇ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಬೇರ್ಪಡಿಸಿದ ಬೆರಳನ್ನು ಮತ್ತೆ ಜೋಡಿಸಲು ವೈದ್ಯರು ಪ್ರಯತ್ನ ನಡೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy